ಜೆಡಿಎಸ್ ಫ್ಲೆಕ್ಸ್ ಗಳಿಂದ ದೇವೇಗೌಡರ ಹಿರಿಯ ಮಗ ಕಿಕ್ ಔಟ್!
ಲೈಂಗಿಕ ಕಿರುಕುಳ, ಅಪಹರಣ, ಅಶ್ಲೀಲ ವಿಡಿಯೋ ಸೇರಿದಂತೆ ಸಾಲು ಸಾಲು ಆರೋಪ ಎದುರಿಸುತ್ತಿರುವ ಜೆಡಿಎಸ್ ಮಾಜಿ ಸಚಿವ ಎಚ್‌ಡಿ ರೇವಣ್ಣರ ಕುಟುಂಬ ಇದರಿಂದಾಗುವ ಮುಜುಗರ ತಪ್ಪಿಸಲು ಮಂಡ್ಯನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ಗಳಿಂದ ರೇವಣ್ಣ ಫೋಟೊ ಕಿಕ್‌ಔಟ್ ಮಾಡಿದ್ದಾರೆ.
ಮಂಡ್ಯ (ಜೂ.25): ಲೈಂಗಿಕ ಕಿರುಕುಳ, ಅಪಹರಣ, ಅಶ್ಲೀಲ ವಿಡಿಯೋ ಸೇರಿದಂತೆ ಸಾಲು ಸಾಲು ಆರೋಪ ಎದುರಿಸುತ್ತಿರುವ ಜೆಡಿಎಸ್ ಮಾಜಿ ಸಚಿವ ಎಚ್‌ಡಿ ರೇವಣ್ಣರ ಕುಟುಂಬ ಇದರಿಂದಾಗುವ ಮುಜುಗರ ತಪ್ಪಿಸಲು ಮಂಡ್ಯನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ಗಳಿಂದ ರೇವಣ್ಣ ಫೋಟೊ ಕಿಕ್‌ಔಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಮಂಡ್ಯನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿದೆ. ಫ್ಲೆಕ್ಸ್‌ಗಳಲ್ಲಿ ಜೆಡಿಎಸ್ ಮುಖಂಡರು, ಬಿಜೆಪಿ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ, ಆರ್ ಅಶೋಕ್, ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್ ವಿಶ್ವನಾಥ್ ಸೇರಿದಂತೆ ಹಲವರ ಫೋಟೊಗಳಿವೆ. ಆದರೆ ಎಚ್‌ಡಿ ರೇವಣ್ಣ ಫೋಟೊ ಕೈಬಿಟ್ಟಿರುವ ಮಂಡ್ಯ ಜೆಡಿಎಸ್ ನಾಯಕರು. ಪಕ್ಷದಿಂದ ಉಚ್ಚಾಟನೆ ಮಾಡದಿದ್ರೂ ಅಂತರ ಕಾಯ್ದುಕೊಂಡ ದಳಪತಿಗಳು. ಅಶ್ಲೀಲ ವಿಡಿಯೋ, ಅಸಹಜ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್, ಸೂರಜ್ ರೇವಣ್ಣ. ಅದೇ ರೀತಿ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ರೇವಣ್ಣ, ಜಾಮೀನು ಪಡೆದಿರುವ ಪತ್ನಿ ಭವಾನಿ ರೇವಣ್ಣ. ಇವೆಲ್ಲ ಘಟನೆಗಳಿಂದ ಎಚ್‌ಡಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಮಟ್ಟದ ಕಳಂಕ ತಂದಿವೆ ಎಂಬುದು ಸುಳ್ಳಲ್ಲ. ಹೀಗಾಗಿ ರೇವಣ್ಣ ಫ್ಯಾಮಿಲಿ ಫೋಟೊ ಬಳಕೆಯಿಂದ ಪಕ್ಷಕ್ಕೆ ಇನ್ನಷ್ಟು ಮುಜುಗರ ತಂದೊಡ್ಡುತ್ತದೆ ಈ ಹಿನ್ನೆಲೆ ಫೋಟೊ ಬಳಸದಿರಲು ನಿರ್ಧರಿಸಿರುವ ದಳಪತಿಗಳು.
ನಟ ದರ್ಶನ್ ಫ್ಯಾನ್ಸ್ ಮೇಲೆ ಬಿತ್ತು ಮತ್ತೊಂದು ಕೇಸ್; ಉಮಾಪತಿಗೌಡಗೆ ಬೆದರಿಕೆಯೊಡ್ಡಿದ್ದ ಅಭಿಮಾನಿ ಅರೆಸ್ಟ್
ಈ ಹಿಂದೆ ಪ್ರತಿ ಪ್ಲೆಕ್ಸ್ ನಲ್ಲೂ ದೇವೇಗೌಡ, ಕುಮಾರಸ್ವಾಮಿ ಜೊತೆಗೆ ರೇವಣ್ಣರ ಫೋಟೊ ಕಡ್ಡಾಯ ಹಾಕಲಾಗುತ್ತಿತ್ತು. ರೇವಣ್ಣ ಜೊತೆಗೆ ಸೂರಜ್, ಪ್ರಜ್ವಲ್ ರೇವಣ್ಣರ ಫೋಟೊ ಸಹ ಬಳಸುತ್ತಿದ್ದ ಜೆಡಿಎಸ್ ನಾಯಕರು. ಆದರೆ ಯಾವಾಗ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಒಬ್ಬರಾದಮೇಲೊಬ್ಬರಂತೆ ಜೈಲು ಸೇರಿದ ಕುಟುಂಬ. ಈ ಹಿನ್ನೆಲೆ ಜೆಡಿಎಸ್, ದೇವೇಗೌಡರ ಕುಟುಂಬಕ್ಕೆ ಆಗುವ ಮುಜುಗರ ತಪ್ಪಿಸಲು, ಡ್ಯಾಮೆಜ್ ಕಂಟ್ರೋಲ್ ಮಾಡಲು ರೇವಣ್ಣರಿಂದ ದಳಪತಿಗಳು ಅಂತರ ಕಾಯ್ದುಕೊಂಡಿದ್ದಾರೆ.