ಬೆಂಗಳೂರು, (ಮಾ.27): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನುದ್ದೇಶಿಸಿ 'ಗಾಂ..' ಎಂಬ ಅಶ್ಲೀಲ ಪದ ಬಳಕೆ ಮಾಡಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ತಮ್ಮ ನಾಯಕ ಡಿಕೆಶಿ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಪದ ಬಳಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.

'11 ಸಾಕ್ಷಿಗಳಿವೆ..ಮಹಾನ್ ನಾಯಕನ ಹೆಸರು ಬಹಿರಂಗ.. 'ನಾನು ಗಂಡು..ಡಿಕೆಶಿ..!' 

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳಸಿದ ಪದ ವಾಪಸ್ಸು ಪಡೆಯುತ್ತೇನೆ. ಅದು ಸರಿಯಾದದ್ದಲ್ಲ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಹೇಳಿದ ಹಾಗೇ ಇದು ನನ್ನ ವೈಯಕ್ತಿಕ ಸಮಸ್ಯೆ ಇರಬಹುದು. ಅದನ್ನು ನಾನೇ ಎದುರಿಸುತ್ತೇನೆ, ರಾಜಕೀಯವಾಗಿಯೂ ಎದುರಿಸುತ್ತೇನೆ. ಇನ್ನೊಂದು ಕೇಸ್​ ದಾಖಲಿಸುತ್ತೇನೆ. ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ಮಾಡಿಕೊಳ್ಳಲಿ ಎಂದು ಹೇಳಿದರು.

ಶನಿವಾರ ಸಂಜೆ ಸಿಡಿ ಪ್ರಕರಣದ ವಿಚಾರಕ್ಕೆ ಡಿಕೆಶಿ ವಿರುದ್ಧ ರೋಷದಿಂದ ಮಾತಾಡಿದ್ದ ರಮೇಶ್, ನಾನು ಗಂಡಸು, ಡಿಕೆಶಿ ಗಾಂ.. ಎಂದಿದ್ದರು. ತಮ್ಮ ಮಾತಿನವುದ್ದಕ್ಕೂ ಈ ಪದವನ್ನೇ ಪುನರುಚ್ಚರಿಸಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು. ಇದೀಗ ತಾವಾಡಿರುವ ಆ ಪದ ಬಳಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ಅದನ್ನು ವಾಪಾಸ್ ಪಡೆಯುವುದಾಗಿ ರಮೇಶ್ ಹೇಳಿದ್ದಾರೆ.