Asianet Suvarna News Asianet Suvarna News

ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ

ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು  ಶಿವಶಂಕರಪ್ಪ ಮತ್ತೊಮ್ಮೆ ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ವತಃ ಶಾಮನೂರು ಶಿವಶಂಕರಪ್ಪನವರೇ ಸ್ಪಷ್ಟಪಡಿಸಿ ಇನ್ನು ಚುನಾವಣೆಗೆ  ಸ್ಪರ್ಧಿಸುವ ತಾಕತ್ತು ಉಮೇದು ಇದೆ ಎಂದಿದ್ದಾರೆ.

senior Congress leader Shamanur Shivashankarappa contest from Davanagere South gow
Author
First Published Nov 17, 2022, 7:18 PM IST

ವರದಿ : ವರದರಾಜ್  ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ನ.17): ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು  ಶಿವಶಂಕರಪ್ಪ ಮತ್ತೊಮ್ಮೆ ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ವತಃ ಶಾಮನೂರು ಶಿವಶಂಕರಪ್ಪನವರೇ ಸ್ಪಷ್ಟಪಡಿಸಿ ಇನ್ನು ಚುನಾವಣೆಗೆ  ಸ್ಪರ್ಧಿಸುವ ತಾಕತ್ತು ಉಮೇದು ಇದೆ ಎಂದಿದ್ದಾರೆ.   ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವುದು ಹಿಂದಿನಿಂದಲೂ ಇದೆ. ಈಗಲೂ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅರ್ಜಿ ಸಲ್ಲಿಸಿರುವೆ. ಈವರೆಗೆ ಬೇರೆ ಯಾರೂ ಅರ್ಜಿ ಸಲ್ಲಿಸಿಲ್ಲ  ಮುಂದೆ ಸಲ್ಲಿಸಬಹುದು ಎಂದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಸಂಖ್ಯೆ ಜಾಸ್ತಿ ಇದ್ದು ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೇಟ್ ನೀಡಬೇಕೆಂದು ಒತ್ತಾಯ ಹಾಕಲಾಗಿತ್ತು.  ಹಳೇ ದಾವಣಗೆರೆ ಭಾಗದ ಯರಗುಂಟೆ ಲೇಹೌಟ್ ನಲ್ಲಿ  ಅಸಮಾಧಾನಗೊಂಡ ಕೆಲ ಕಾಂಗ್ರೆಸ್ ನ ಸ್ಥಳೀಯ ಮುಖಂಡರು  ಎಂ ಎಲ್ ಸಿ ಅಬ್ದುಲ್  ಜಬ್ಬರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ  ದನಿ ಎತ್ತಿದ್ದರು. ಕೆಲ ಮುಸ್ಲಿಂ ಮುಖಂಡರು  ಈ ಬಾರಿ ಅರ್ಜಿ ಸಲ್ಲಿಸುತ್ತಾರೆ ಎಂಬ ವದಂತಿಗಳಿದ್ದವು ಆದ್ರೆ ಇದುವರೆಗು ಶಾಮನೂರು ಒಬ್ಬರನ್ನುಬಿಟ್ಟರೇ ಬೇರೆ ಅರ್ಜಿ ಸಲ್ಲಿಸಿಲ್ಲ ಎಂದು ಸ್ವತಃ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಯಾರು?
ಇನ್ನು ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ನಿಗೂಢವಾಗಿದೆ. ಶಾಮನೂರು ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಕಳೆದ ಬಾರಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ತದನಂತರ ಕಳೆದ ನಾಲ್ಕುವರೆ ವರ್ಷಗಳಲ್ಲಿ  ದಾವಣಗೆರೆ ಉತ್ತರ ಕ್ಷೇತ್ರದಿಂದ ಮತ್ತೇ  ಸ್ಪರ್ಧಿಸುತ್ತೇನೆ ಎಂದು ಎಲ್ಲಿಯು ಕೂಡ ಒಂದು ಮಾತನ್ನು ಆಡಿಲ್ಲ. ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಗುಟ್ಟನ್ನು ಇದುವರೆಗು ಬಿಟ್ಟುಕೊಟ್ಟಿಲ್ಲ.

ಸಿದ್ದರಾಮೋತ್ಸವ ಸಂದರ್ಭದಲ್ಲಿ, ಎಸ್ ಎಸ್ ಮಲ್ಲಿಕಾರ್ಜುನ್ ರವ ಬರ್ತಡೆ ಕಾರ್ಯಕ್ರಮ ದಾವಣಗೆರೆ ಯಲ್ಲಿ ಅದ್ದೂರಿಯಾಗಿ ನಡೆದಿದ್ದು ಇದುವೆರೆಗು ಎಲ್ಲಿ ಸ್ಪರ್ಧಿಸುತ್ತೇನೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಳೆದ ಬಾರಿ ಸಂಸತ್ತಿನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನ ಟಿಕೇಟ್ ನಿರಾಕರಿಸಿ  ಅವರ ಬೆಂಬಲಿಗ  ಕಾಂಗ್ರೆಸ್ ಜಿಲ್ಲಾದ್ಯಕ್ಷ ಹೆಚ್ ಬಿ ಮಂಜಪ್ಪನಿಗೆ ಟಿಕೇಟ್ ಕೊಡಿಸಿದ್ದರು. 

ಎಸ್ ಎಸ್ ಮಲ್ಲಿಕಾರ್ಜುನ್ ಈ ಬಾರಿ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುವ ದಾವಣಗೆರೆ  ದಕ್ಷಿಣದಿಂದ ಸ್ಪರ್ಧಿಸಬಹುದು ಎಂಬ ಮಾತುಗಳು ಹರಿದಾಡಿದ್ದವು. ಆದ್ರೆ ಶಾಮನೂರು ಶಿವಶಂಕರಪ್ಪ ಈ ಬಾರಿ ಮತ್ತೊಮ್ಮೆ ದಕ್ಷಿಣದಿಂದಲೇ ಅರ್ಜಿ ಸಲ್ಲಿಸಿರುವುದು ಹಾಗಾದ್ರೆ ಮಲ್ಲಿಕಾರ್ಜುನ್ ಕ್ಷೇತ್ರ ಯಾವುದು ಎಂಬ ಬಗ್ಗೆ ಜನರಲ್ಲೇ ಕುತೂಹಲವಿದೆ.  ಈ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜನ್ ರವರನ್ನೇ ಕೇಳಿದ್ರೆ ಹೈ ಕಮಾಂಡ್ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ ಎನ್ನುತ್ತಾರೆ. 

Karnataka Assembly Polls: ಸಿದ್ದು ಕೋಲಾರಕ್ಕೆ 50 ಬಾರಿ ಬಂದರೂ ಗೆಲ್ಲೋಲ್ಲ : ಮುನಿಸ್ವಾಮಿ ಭವಿಷ್ಯ

ಒಂದೇ ಮನೆಗೆ ಎರಡು ಟಿಕೇಟ್ ನೀಡುತ್ತಾ ಎಂಬ ಬಗ್ಗೆ ಹೈಕಮಾಂಡ್ ಇದುವರೆಗು ಗುಟ್ಟುಬಿಟ್ಟುಕೊಟ್ಟಿಲ್ಲ. ಶಾಮನೂರು ಶಿವಶಂಕರಪ್ಪ  ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಪರಮಾಪ್ತರು.. ಡಿಕೆ ಶಿವಕುಮಾರ್ ಗೆ ಅಷ್ಟೇ ಆಪ್ತರು. ಇನ್ನು ಅವರ ಮಗ  ಎಸ್ ಎಸ್  ಮಲ್ಲಿಕಾರ್ಜುನ್  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗು ಪರಮಾಪ್ತರಾಗಿದ್ದು ಡಿಕೆ  ಶಿವಕುಮಾರ್ ಜೊತೆಗು ಅಷ್ಟೇ ಪ್ರೀತಿ ವಿಶ್ವಾಸ ಇದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಲು 400ಕ್ಕೂ ಅಧಿಕ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಹಾಗಾಗಿ ಸ್ವತಃ ಮಲ್ಲಿಕಾರ್ಜುನ ಎಲ್ಲಿ ಸ್ಪರ್ಧಿಸಿದ್ರು ಟಿಕೇಟ್  ಸಿಗುವುದು ಪಕ್ಕಾ. ಆದ್ರೆ ಕ್ಷೇತ್ರ ಯಾವುದು ಎಂಬ ಬಗ್ಗೆ ಸ್ವತಃ ಎಸ್ ಎಸ್ ಮಲ್ಲಿಕಾರ್ಜುನ್ ಇದುವರೆಗು ಗುಟ್ಟು ಬಿಡದಿರುವುದರ ಹಿಂದೆ  ಯಾವ ರಾಜಕಾರಣದ ತಂತ್ರ ಅಡಗಿದಿಯೋ ನಿಗೂಢವಾಗಿದೆ.

Follow Us:
Download App:
  • android
  • ios