ಜೆಡಿಎಸ್ ಅಭ್ಯರ್ಥಿಯ ಸ್ವಯಂ ಕಿಡ್ನಾಪ್ ಡ್ರಾಮಾ, ಆರೋಪಿ ಪಟ್ಟದಲ್ಲಿ ಎಸ್.ಆರ್ ವಿಶ್ವನಾಥ್!?
ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗು ಚರಣ್ ರೆಡ್ಡಿ ಅವರನ್ನೇ ಅವರು ಕಿಡ್ನ್ಯಾಪ್ ಮಾಡಿ ನಾನೇ ಕಿಡ್ನ್ಯಾಪ್ ಮಾಡಿದ್ದೇನೆಂದು ಆರೋಪಿಸೋಕೆ ತಂತ್ರ ಹೂಡಿದ್ದರು ಎಂದು ಬಿಜೆಪಿಯ ವಿಶ್ವನಾಥ್ ಆರೋಪಿಸಿದ್ದಾರೆ.
ಬೆಂಗಳೂರು (ಮೇ.3): ಬಿಜೆಪಿ ಅಭ್ಯರ್ಥಿ ಎಸ್.ಆರ್ ವಿಶ್ವನಾಥ್ ಅವರು ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗು ಚರಣ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆ ಪ್ರಚಾರ ಮುಗಿಸಿ ಬರುವಾಗ ಜೆಡಿಎಸ್ ಅಭ್ಯರ್ಥಿ ಮುನೇಗೌಡರು ಸಂಚು ಮಾಡಿರುವುದು ಗೊತ್ತಾಗಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗು ಚರಣ್ ರೆಡ್ಡಿ ಸಂಚು ಮಾಡಿರೋದು ನೋಡಿದ್ದೇನೆ. ಮೇ.4,5 ನೇ ತಾರೀಕಿನಂದು ಅವರನ್ನೇ ಅವರು ಕಿಡ್ನ್ಯಾಪ್ ಮಾಡಿ ನಾನೇ ಕಿಡ್ನ್ಯಾಪ್ ಮಾಡಿದ್ದೇನೆಂದು ಆರೋಪಿಸೋಕೆ ತಂತ್ರ ಹೂಡಿದ್ದರು ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಸಿಂಗನಾಯಕನಹಳ್ಳಿ ಹೋಗುವಾಗ ಅವರ ಮೇಲೆ ಅವರೇ ಹಲ್ಲೆ ಮಾಡಿಕೊಂಡು ನನ್ನ ಮೇಲೆ ಎಫ್ ಐ ಆರ್ ಮಾಡೋ ತರ ಪ್ಲಾನ್ ಮಾಡಿದ್ರು. ಇದರ ಬಗ್ಗೆ ತನಿಖೆ ಮಾಡಲು ಮನವಿ ಮಾಡಿದ್ದೇನೆ. ನನ್ನ ಗ್ರಹಚಾರಕ್ಕೆ ಪ್ರತಿ ಸಲನೂ ಹೀಗೆ ಆಗ್ತಿದೆ. ಕಳೆದ ಚುನಾವಣೆಯಲ್ಲಿ ಲೋಕಾಯುಕ್ತ ದಾಳಿ ಆಯ್ತು , ಶೂಟೌಟ್ ಆಗೋದು ಆಗ್ತಾನೇ ಇದೆ. ಬೇಕಿದ್ದರೆ ನನ್ನನ್ನು ಕೂಡ ಮಂಪರು ಪರೀಕ್ಷೆ ಮಾಡಿಸಿ ಅಂದಿದ್ದೆ. ಅದರಿಂದಲೂ ಬಚಾವ್ ಆಗಿದ್ದೇನೆ. ಈ ತರ ಗಲಾಟೆಗಳನ್ನು ಸೃಷ್ಟಿ ಮಾಡೋರು ಮಾಡುತ್ತಲೇ ಇದ್ದಾರೆ.
ನಾನು ಆ ಅಭ್ಯರ್ಥಿಯನ್ನು ನೋಡಿದ್ದು ಒಂದೇ ಬಾರಿ. ಆದ್ರೆ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ ಗೊತ್ತಾಗ್ತಿಲ್ಲ. ಹೆಂಡತಿ ತಮ್ಮ ಅರ್ಧಾಂಗಿಯಾಗಿದ್ದವರು ಅವರನ್ನೇ ಮುಂದೆ ಇಟ್ಕೊಂಡು ಈ ರೀತಿ ಮಾಡುತ್ತಿರುವುದು ದುರಂತ.
ನಾಳೆ ಬೆಳಿಗ್ಗೆ 10 ಗಂಟೆಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೊಡುತ್ತೇನೆ. ಯಲಹಂಕ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಭಜರಂಗದಳ ನಿಷೇಧಕ್ಕೆ ಸುರ್ಜೆವಾಲಾ ಹಠ, ಕಾಂಗ್ರೆಸ್ ಗೆ ಪ್ರಾಣಸಂಕಟ!
ಬ್ರೇಕ್ ವೈಫಲ್ಯದಿಂದ ಆಟೋ, 5 ಕಾರುಗಳಿಗೆ ಗುದ್ದಿದ ಟ್ರಕ್
ಬೆಂಗಳೂರು: ಬ್ರೇಕ್ ವೈಫಲ್ಯ ಹಿನ್ನೆಲೆಯಲ್ಲಿ ಟ್ರಕ್‌ವೊಂದು ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆಯಲ್ಲಿ ಬದಿ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.
ಈ ಸರಣಿ ಅಪಘಾತದಲ್ಲಿ ಆಟೋ ಹಾಗೂ ಐದು ಕಾರುಗಳು ಜಖಂಗೊಂಡಿದ್ದು, 13 ವರ್ಷದ ಪ್ರಿಯಾಗೆ ಸಣ್ಣಪುಟ್ಟಗಾಯಗಳಾಗಿವೆ. ಆದೃಷ್ಟವಾಶಾತ್ ಯಾವುದೇ ಪ್ರಾಣಣಹಾನಿ ಸಂಭವಿಸಿಲ್ಲ. ಈ ಘಟನೆ ಸಂಬಂಧ ಟ್ರಕ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಕಪುರದಲ್ಲಿ ನೆಮ್ಮದಿಯ ಉಸಿರಾಟಕ್ಕೆ ಗೆದ್ದೇ ಗೆಲ್ಲುವೆ: ಆರ್ ಅಶೋಕ್
ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ರಾತ್ರಿ 10.30ರ ಸಮಾರಿಗೆ ಮರದ ದಿಮ್ಮಿಗಳನ್ನು ತುಂಬಿದ್ದ ತಮಿಳುನಾಡು ನೋಂದಣಿಯ ಟ್ರಕ್ ಬರುತ್ತಿತ್ತು. ಆಗ ಮಾರ್ಗ ಮಧ್ಯೆ ಯಲಹಂಕದ ಆರ್‌ಎಂಝಡ್ ಮಾಲ್ ಬಳಿ ಬ್ರೇಕ್ ಫೇಲ್ ಉಂಟಾಗಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಅಡ್ಡದಿಡ್ಡಿಯಾಗಿ ಚಲಿಸಿದೆ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಐದು ಕಾರುಗಳು ಹಾಗೂ ಒಂದು ಆಟೋಕ್ಕೆ ಗುದ್ದಿ ನಿಂತಿದೆ. ಈ ವೇಳೆ ಬಸ್ ನಿಲ್ದಾಣದ ಬಳಿ ನಿಂತಿದ್ದ ಬಾಲಕಿಗೆ ಕಾರು ಅಪ್ಪಳಿಸಿದೆ. ಆದರೆ ತೀವ್ರ ಸ್ವರೂಪದ ಗಾಯವಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಿಯಾ ಮನೆಗೆ ಮರಳಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.