ಮೈಸೂರು, [ಜ.13]: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ವಾಮಿ ಕಾರ್ಯ  ಹಾಗೂ ಸ್ವಕಾರ್ಯ ಎರಡನ್ನು ಮಾಡಿಕೊಂಡಿದ್ದಾರೆ.

ಅದೇನಂತೀರಾ, ಒಂದೆಡೆ ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗಾಗಿ ಕಾರ್ಯಕರ್ತರ ಸಭೆ. ಮತ್ತೊಂದೆಡೆ ಪುತ್ರ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ ಪ್ರಚಾರ.

ಹೌದು, ಸಿಎಂ ಕುಮಾರಸ್ವಾಮಿ ಅವರು  ತಮ್ಮ ಪುತ್ರ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ ಪ್ರಚಾರ ಜೊತೆಗೆ  ಚುನಾವಣೆ ಸಿದ್ದತೆ ನಡೆಸಿದ್ದಾರೆ.

ಇದಕ್ಕಾಗಿ ನಿನ್ನೆ [ಶನಿವಾರ] ರಾತ್ರಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಠಿಕಾಣಿ ಹೂಡಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು [ಭಾನುವಾರ] ಸಂಜೆ 6 ಗಂಟೆಗೆ ಕ್ಯಾಂಪಸ್ ನಿಂದ ಆಚೆ ಬಂದಿದ್ದಾರೆ.

ಇನ್ನು ಈ ಬಗ್ಗೆ  ಸ್ವತಃ  ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದು, ಜಾಗ್ವಾರ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಮಾಡಿದ್ದೇವು. ಇದೀಗಾ ಸೀತಾರಾಮ ಕಲ್ಯಾಣ ಚಿತ್ರದ ಆಡಿಯೋ ರಿಲೀಸ್ ಮೈಸೂರಿನಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ.

ಇದಕ್ಕಾಗಿ ಸಿನಿಮಾ ಪ್ರಚಾರ ಮತ್ತು ಚುನಾವಣೆ ಸಿದ್ದತೆ ಎರಡನ್ನು ಒಟ್ಟಿಗೆ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ.