Asianet Suvarna News Asianet Suvarna News

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್‌: ಸುರ್ಜೇವಾಲಾ ಆರೋಪ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ತಂದಿರುವ ಕಾಯ್ದೆಯೇ ಒಂದು ಬೋಗಸ್‌. ಏಕೆಂದರೆ ಇದಕ್ಕೆ ಕಾನೂನಿನ ರಕ್ಷಣೆ ಸಿಗಬೇಕಾದರೆ ಸಂವಿಧಾನದ ಶೆಡ್ಯೂಲ್‌ 9 ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. 

SC ST Reservation Act is bogus Says Randeep Singh Surjewala gvd
Author
First Published Mar 22, 2023, 8:02 AM IST

ಬೆಂಗಳೂರು (ಮಾ.22): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ತಂದಿರುವ ಕಾಯ್ದೆಯೇ ಒಂದು ಬೋಗಸ್‌. ಏಕೆಂದರೆ ಇದಕ್ಕೆ ಕಾನೂನಿನ ರಕ್ಷಣೆ ಸಿಗಬೇಕಾದರೆ ಸಂವಿಧಾನದ ಶೆಡ್ಯೂಲ್‌ 9 ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆದರೆ, ಇದುವರೆಗೂ ಆ ಕಾರ್ಯ ಆಗಿಲ್ಲ. ಇದು ಕೇಂದ್ರ ಸರ್ಕಾರವೇ ಲೋಸಭೆಯಲ್ಲಿ ನೀಡಿರುವ ಉತ್ತರದಿಂದ ಬಹಿರಂಗವಾಗಿದೆ. ಹೀಗಂತ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದನ್ನು ಶೆಡ್ಯೂಲ್‌ 9ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆಯೇ ಎಂದು ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕೇಳಿರುವ ಪ್ರಶ್ನೆಗೆ ಕೇಂದ್ರ ಸಾಮಾಜಿಕನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರೇ ಅಂತಹ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತವಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50ರಿಂದ 56ಕ್ಕೆ ಹೆಚ್ಚಿಸುವ ಚಿಂತನೆ ಇದೆಯೇ ಎಂಬುದರ ಬಗ್ಗೆಯೂ ‘ಇಲ್ಲ’ ಎಂಬ ಸ್ಪಷ್ಟಉತ್ತರ ನೀಡಿದ್ದಾರೆ. ಅಂದ ಮೇಲೆ ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಳದ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದ ದಲಿತರಿಗೆ ಮಹಾ ವಂಚನೆ ಮಾಡಿರುವುದು ಸ್ಪಷ್ಟವಾಗಿದೆ’ ಎಂದು ಅವರು ದೂರಿದರು.

ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ‘ರಾಜ್ಯ ಸರ್ಕಾರ ಈಚೆಗೆ ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ವರದಿ ಶಿಫಾರಸಿನ ಮೇರೆಗೆ ಪರಿಶಿಷ್ಟಜಾತಿ ಮೀಸಲಾತಿ ಪ್ರಮಾಣವನ್ನು ಶೇ. 15ರಿಂದ 17 ಹಾಗೂ ಪರಿಶಿಷ್ಟಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಿ, ಕಾಯ್ದೆಯನ್ನೂ ರೂಪಿಸಿದೆ. ಆದರೆ, ಇದು ದಲಿತರ ಮೂಗಿಗೆ ತುಪ್ಪ ತವರುವ ಕೆಲಸ ಅಷ್ಟೆ. ಈ ಮೀಸಲಾತಿ ಹೆಚ್ಚಳ ನಿರ್ಧಾರದಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.50 ದಾಟಿದೆ. ಹಾಗಾಗಿ ಇದನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸಮಸ್ಯೆಯಾಗದಂತೆ ಕಾನೂನು ರಕ್ಷಣೆ ಸಿಗಬೇಕಾದರೆ ಶೆಡ್ಯೂಲ್‌ 9ಗೆ ಸೇರಿಸಬೇಕು. ಆದರೆ, ಸರ್ಕಾರ ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಹಾಗಾಗಿ ಇದೊಂದು ಬೋಗಸ್‌ ಕಾಯ್ದೆ’ ಎಂದರು.

ಅಯೋಧ್ಯೆ ತಲುಪಿದ ಕಾರ್ಕಳ 'ಕೃಷ್ಣಶಿಲೆ': ಭಕ್ತರ ಮೆಚ್ಚಿನ ತಾಣವಾದ ಶಿಲೆ ದೊರೆತ ಜಾಗ

ಸಿಎಂ-ಸಚಿವರ ರಾಜೀನಾಮೆಗೆ ಆಗ್ರಹ: ಮೀಸಲಾತಿ ಹೆಚ್ಚಳದ ಹೆಸರಲ್ಲಿ ದಲಿತರನ್ನು ವಂಚಿಸಿರುವ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಎಲ್ಲ ಸಚಿವರು ಹಾಗೂ ಬಿಜೆಪಿಯ ಶಾಸಕರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಇದೇ ವೇಳೆ ಸುರ್ಜೇವಾಲ ಆಗ್ರಹಿಸಿದರು. ವಂಚನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರದ ಎಲ್ಲ ಸಚಿವರೂ ರಾಜೀನಾಮೆ ನೀಡದೆ ಹೋದರೆ ಕಾಂಗ್ರೆಸ್‌ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios