ಸುಪ್ರೀಂ ಕೋರ್ಟ್ ನೀಡಿದ ಅನರ್ಹ ಶಾಸಕರ ತೀರ್ಪನ್ನು  ಬಿಜೆಪಿ ಮತ್ತು ಅನರ್ಹಮನಪೂರ್ವಕವಾಗಿ ಸ್ವಾಗತಿಸಿದರೆ, ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಸ್ವಾಗತಿಸಿದೆ. ಹಾಗಾದ್ರೆ ಸುಪ್ರೀಂ ತೀರ್ಪು ಅಸಲಿಗೆ ಯಾರಿಗೆ ಹಿನ್ನಡೆ..? ಯಾರಿಗೆ ಮುನ್ನಡೆ..? 

ಬೆಂಗಳೂರು, [ನ.13]: ಅನರ್ಹ ಶಾಸಕರ ಹಣೆ ಬರಹ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದೆ. 17 ಜನ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. 

ಆದರೆ ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಇದರಿಂದ ಅನರ್ಹ ಶಾಸಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಸೋತರೂ ಗೆದ್ದ ಅನರ್ಹ ಶಾಸಕರು: ಚುನಾವಣೆಗೆ ಸ್ಪರ್ಧೆಗೆ ಅಸ್ತು ಎಂದ ಸುಪ್ರೀಂ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಹೊಣೆಗಾರಿಕೆ ಅತಿ ಮುಖ್ಯವಾದುದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ಪಕ್ಷದಿಂದ ಗೆದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರುವುದು ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಈ ತೀರ್ಪನ್ನು ಬಿಜೆಪಿ ಹಾಗೂ ಅನರ್ಹ ಶಾಸಕರು ಗೆದ್ದ ಖುಷಿಪಡುತ್ತಿದ್ದರೆ, ಮತ್ತೊಂದೆಡೆ ಪಕ್ಷಾಂತರಿಗಳಿಗೆ ಸುಪ್ರೀಂ ತಕ್ಕ ಪಾಠ ಕಲಿಸಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದ್ರೆ, ಇದರಲ್ಲಿ ಗೆದ್ದವರ್ಯಾರು..? ಸೋತವರ್ಯಾರು ಎನ್ನುವುದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್

17 ಜನ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದು ಕಾಂಗ್ರೆಸ್ ಗೆ ಗೆಲುವು ಸಿಕ್ಕಂತಾದ್ರೆ, ಅನರ್ಹ ಶಾಸಕರ ಚುನಾವಣೆಗೆ ಸ್ಪರ್ಧಿಸಬಹುದು ಎನ್ನುವುದು ಅನರ್ಹರು ಹಾಗೂ ಬಿಜೆಪಿಗೆ ಇನ್ನಿಲ್ಲದ ಖುಷಿ ತಂದಿದೆ.

ಇದರ ತಾತ್ಪರ್ಯ ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸಭಾಧ್ಯಕ್ಷರ ನಿರ್ಣಯದ ಮೊದಲ ಭಾಗವನ್ನು ಎತ್ತಿಹಿಡಿಯಲಾಗಿದೆ ಮತ್ತು 2ನೇ ಭಾಗವನ್ನು ಬದಲಾವಣೆಗೊಳಪಡಿಸಿ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ. ಇದನ್ನೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಭಿಪ್ರಾಯವಾಗಿದೆ.

Scroll to load tweet…

ಮೇಲ್ನೋಟಕ್ಕೆ ಅನರ್ಹ ಶಾಸಕರ ಉದ್ದೇಶ ಈಡೇರಿದಂತೆ ಕಂಡರೂ, ನೈತಿಕತೆ ಆಧಾರದಲ್ಲಿ ಇದು ಅವರಿಗೆ ಅತಿ ದೊಡ್ಡ ಹಿನ್ನಡೆ. ಸಂವಿಧಾನದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಶಾಸಕರು ಅನರ್ಹರಾಗುವುದು ಅವರ ನೈತಿಕತೆಯ ಸೋಲು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಒಟ್ಟಿನಲ್ಲಿ 2ರಲ್ಲಿ ಕಾಂಗ್ರೆಸ್ ಒಂದರಲ್ಲಿ ಗೆದ್ರೆ ಮತ್ತೊಂದರಲ್ಲಿ ಬಿಜೆಪಿ ಹಾಗೂ ಅನರ್ಹರಿಗೆ ಗೆಲುವಾಗಿದೆ ಎಂದು ಹೇಳಬಹುದು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.