ನವದೆಹಲಿ/ಬೆಂಗಳೂರು, (ಅ. 17): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದು ಕಡೆ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ್ ಸಿಕ್ಕರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.

ಹೌದು...ಹವಾಲಾ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್‌ಗೆ ಜಾಮೀನು ದೊರೆತ್ತಿದ್ದು, ಬಂಧನದಿಂದ ಮುಕ್ತರಾಗಿದ್ದಾರೆ. 

ಕರ್ನಾಟಕ ಅನರ್ಹ ಶಾಸಕರಿಗೆ ನಿರಾಸೆ: ತೂಗುಯ್ಯಾಲೆಯಲ್ಲಿ ಅನರ್ಹರ ಭವಿಷ್ಯ

ಮತ್ತೊಂದೆಡೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ನಾಳೆ (ಆ.24) ಬೆಳಗ್ಗೆ 10.30ಕ್ಕೆ ಮುಂದೂಡಿ ಸುಪ್ರೀಂಕೋರ್ಟ್​ನ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ ಇಂದು ಕಾಂಗ್ರೆಸ್​ ಪರ ಕಪಿಲ್​ ಸಿಬಲ್​ ವಾದ ಮಂಡಿಸಿದರೆ, ಅನರ್ಹ ಶಾಸಕರ ಪರ ಮುಕುಲ್​ ರೋಹಟಗಿ ವಾದ ಮಂಡಿಸಿದರು.

ಮೈತ್ರಿ ಸರ್ಕಾರದಿಂದ ರೆಬಲ್​ ಆಗಿದ್ದ ಕಾಂಗ್ರೆಸ್​-ಜೆಡಿಎಸ್​ನ ಒಟ್ಟು 17 ಶಾಸಕರನ್ನು ಅಂದಿನ ಸ್ಪೀಕರ್​ ಅನರ್ಹ ಗೊಳಿಸಿದ್ದರು. ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಹಾಗೇ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಡಿಕೆಶಿಗೆ ಬಿಗ್ ರಿಲೀಫ್: ಕೊನೆಗೂ ತಿಹಾರ್ ಜೈಲಿನಿಂದ ಹೊರಕ್ಕೆ

ಈ ಹಿನ್ನೆಯಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ 15 ಕ್ಷೇತ್ರಗಳ ಉಪಚುನಾವಣೆಯನ್ನು ಡಿ.5ಕ್ಕೆ ಮುಂದೂಡಲಾಗಿತ್ತು.

ನಿನ್ನೆ (ಮಂಗಳವಾರ) ಅರ್ಜಿ ವಿಚಾರಣೆ ನಿಗದಿಯಾಗಿದ್ದರೂ ಕಾಂಗ್ರೆಸ್​ ಪರ ವಕೀಲ ಕಪಿಲ್​ ಸಿಬಲ್​ ಕೋರ್ಟ್​ಗೆ ಆಗಮಿಸಲು ಸಾಧ್ಯವಾಗದ ಕಾರಣ ಇಂದಿಗೆ ಮುಂದೂಡಲಾಗಿತ್ತು. 

ಬೈ ಎಲೆಕ್ಷನ್ ಸಮರ : ಅತ್ತ ಡಿಕೆಶಿಗೆ ಜಾಮೀನು: ಇತ್ತ ಕಾಂಗ್ರೆಸ್‌ಗೆ ಹಿನ್ನಡೆ

ಅದರಂತೆ ಇಂದು (ಬುಧವಾರ) ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ಮತ್ತಷ್ಟು ವಿಚಾರಣೆಯನ್ನು ಆ.24ಕ್ಕೆ ಮುಂದೂಡಿದೆ. ಇದ್ರಿಂದ ಅನರ್ಹ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ.