ರಾಜ್ಯ ಕಾಂಗ್ರೆಸ್, ಸರ್ಕಾರದಲ್ಲಿ ಇದುವರೆಗೆ ಚೀಫ್ ಮಿನಿಸ್ಟರ್, ಚೀಫ್ ಸೆಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಚೀಫ್ ಬ್ರೋಕರ್ ಎಂಬ ಹುದ್ದೆ ಸೃಷ್ಟಿಸಿ ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ.
ಬೆಂಗಳೂರು(ಜ.08): ಸ್ಯಾಂಟ್ರೋ ರವಿ ರಾಜ್ಯ ಬಿಜೆಪಿ ಆಡಳಿತದ ‘ಚೀಫ್ ಬ್ರೋಕರ್’. ಈತನೊಂದಿಗೆ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು, ಡೇಟಿಂಗು ಎಲ್ಲವೂ ಬಯಲಾಗಿದೆ! ಈತನನ್ನು ಉನ್ನತ ತನಿಖೆಗೆ ಒಳಪಡಿಸಿದರೆ ಇಡೀ ಸರ್ಕಾರವೇ ಜೈಲು ಸೇರುತ್ತದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸರ್ಕಾರದಲ್ಲಿ ಇದುವರೆಗೆ ಚೀಫ್ ಮಿನಿಸ್ಟರ್, ಚೀಫ್ ಸೆಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಚೀಫ್ ಬ್ರೋಕರ್ ಎಂಬ ಹುದ್ದೆ ಸೃಷ್ಟಿಸಿ ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ!! ಸರ್ಕಾರದ ‘ಚೀಫ್ ಬ್ರೋಕರ್’ ಸ್ಯಾಂಟ್ರೋ ರವಿಯೊಂದಿಗೆ ಉನ್ನತ ಅಧಿಕಾರಿಗಳು, ಸಚಿವರು ಎಲ್ಲರೂ ನೇರಾನೇರ ಸಂಪರ್ಕದಲ್ಲಿದ್ದಾರೆ. ಇಡೀ ಸರ್ಕಾರವೇ ಈತನ ಕೈಯ್ಯೊಳಗಿದೆ. ಈತನೊಂದಿಗೆ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು, ಡೇಟಿಂಗು ಎಲ್ಲವು ಬಯಲಾಗಿದೆ! ಈತನನ್ನು ಉನ್ನತ ತನಿಖೆಗೊಳಪಡಿಸಿದರೆ ಇಡೀ ಸರ್ಕಾರವೇ ಜೈಲು ಸೇರುವುದು ನಿಶ್ಚಿತ ಎಂದು ಹೇಳಿದೆ.
ಸ್ಯಾಂಟ್ರೋ ರವಿ ಪ್ರಕರಣ: ವಿಪಕ್ಷಗಳಿಗೂ ಶಾಕ್ ನೀಡಿದ ಸಿಎಂ ಬೊಮ್ಮಾಯಿ
ಮತ್ತೊಂದು ಟ್ವೀಟ್‌ನಲ್ಲಿ, ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆ ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿರುವ ಕಾಂಗ್ರೆಸ್, ವರ್ಗಾವಣೆಗೆ ಸಂಬಂಧಿಸಿದಂತೆ ಸಚಿವ ಸೋಮಶೇಖರ್ ಸ್ಯಾಂಟ್ರೋ ರವಿಯೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಸಚಿವರೊಂದಿಗೆ ಆತ ನಿಕಟ ಸಂಪರ್ಕದಲ್ಲಿದ್ದಾನೆ. ನಿಮ್ಮ ಮತ್ತು ರವಿ ಸಂಬಂಧ ಬಾಂಬೆ ಸಂಬಂಧವೇ?! ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದ ಚೀಫ್ ಬ್ರೋಕರ್ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ? ಎಂದು ಪ್ರಶ್ನಿಸಿದೆ.
