ಬೆಂಗಳೂರು, [ಡಿ.03]:  ಶಿವಾಜಿನಗರ ಸಂಪಂಗಿ ರಾಮನಗರದ ಕಾರ್ಪೊರೇಟರ್ ಆರ್.ವಸಂತ್ ಕುಮಾರ್ ಅವರು ಇಂದು [ಮಂಗಳವಾರ] ಬೆಂಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದರು.

ಇನ್ನೇನು ಮತದಾನಕ್ಕೆ 2 ದಿನ ಇರುವಾಗಲೇ ವಸಂತ್ ಕುಮಾರ್ ಬಿಜೆಪಿ ಸೇರಿರುವುದು ಕಾಂಗ್ರೆಸ್‌ಗೆ ಆರಂಭಿಕ ಆಘಾತವಾಗಿದೆ. ಇನ್ನು ಪಕ್ಷ ಸೇರ್ಪಡೆಯಿಂದ ಶಿವಾಜಿನಗರ ಬೈ ಎಲೆಕ್ಷನ್  ಬಿಜೆಪಿ ಅಭ್ಯರ್ಥಿ ಸರವಣಗೆ ಆನೆ ಬಲಬಂತಾಗಿದೆ.

ಉಪಸಮರಕ್ಕೆ ಕ್ಲೈಮ್ಯಾಕ್ಸ್: ಬಹಿರಂಗ ಪ್ರಚಾರಕ್ಕೆ ತೆರೆ, ಮದ್ಯಪ್ರಿಯರಿಗೆ ಬರೆ..!

ಕಾಂಗ್ರೆಸ್ ಹಿಡಿತದಲ್ಲಿದ್ದ ಶಿವಾಜಿನಗರ ಬಿಜೆಪಿ ತೆಕ್ಕೆಗೆ ವಾಲುತ್ತಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಇತಂಹ ಸಂದರ್ಭದಲ್ಲಿ ವಸಂತ್ ಕುಮಾರ್ ಬಿಜೆಪಿ ಸೇರಿರುವುದು ಕಾಂಗ್ರೆಸ್ ಮತ್ತಷ್ಟು ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾಜಿನಗರ ಬೈ ಎಲೆಕ್ಷನ್ ಉಸ್ತುವಾರಿ ಎಸ್ ಆರ್ ವಿಶ್ವನಾಥ್, ವಸಂತ ಸೇರ್ಪಡೆಯಿಂದ ಶಿವಾಜಿನಗರದಲ್ಲಿ ಬಿಜೆಪಿಗೆ ಆನೆ ಬಲ ಬಂದಿದೆ. ನಮ್ಮ ಅಭ್ಯರ್ಥಿ ಗೆಲುವಿಗೆ ವಸಂತ ಇನ್ನೆರಡು ದಿನ ಶ್ರಮ ಹಾಕ್ತಾರೆ ಎಂದರು.

 ಶಿವಾಜಿನಗರ ಕ್ಷೇತ್ರದ ಬಹುತೇಕ ಕಾರ್ಪೊರೇಟರ್ ಬಿಜೆಪಿ ಸೇರಿದ್ದು, ಈಗ ವಸಂತ್ ಕೂಡ ಸೇರಿರೊದು ಪಕ್ಷದ ಗೆಲುವಿಗೆ ಅನುಕೂಲ ಆಗಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ರೋಷನ್ ಬೇಗ್ ಕೂಡ ಒಳಗಿಂದೊಳಗೆ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ತಮ್ಮ ಬೆಂಬಲಿಗರಿಗೂ ಸಹ ಬಿಜೆಪಿ ಸಪೋರ್ಟ್ ಮಾಡುವಂತೆ ಕರೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಆರಂಭಿಕ ಹಿನ್ನಡೆಯಾಗಿದೆ.

ಇನ್ನು ಇದೇ ಡಿ.5ಕ್ಕೆ ಮತದಾನ ನಡೆಯಲಿದ್ದು, ಶಿವಾಜಿನಗರದ ಮತದಾರರು ಕೈ ಹಿಡಿಯುತ್ತಾರಾ ಅಥವಾ ಕಮಲ ಅರಳಿಸುತ್ತಾರಾ ಎನ್ನುವುದು ಡಿ.9ಕ್ಕೆ ಸ್ಪಷ್ಟ ಚಿತ್ರಣ ತಿಳಿಯಲಿದೆ.