ಎಕ್ಸಿಟ್ ಪೋಲ್ ಗಳಿಗೆ ಹಣ ನೀಡ್ತಿರೋರು ಯಾರು? ಅಖಿಲೇಶ್ ಯಾದವ್ ಪ್ರಶ್ನೆ
ಇವಿಎಂಗಳು ಕಳ್ಳತನವಾಗ್ತಿವೆ, ಅದಕ್ಕೆ ವಿಡಿಯೋ ದಾಖಲೆ ಇದೆ ಎಂದ ಅಖಿಲೇಶ್
ಚುನಾವಣೆಯ ಫಲಿತಾಂಶ ಸನಿಹವಾಗುತ್ತಿದ್ದಂತೆ ಹೆಚ್ಚಾದ ಅಖಿಲೇಶ್ ಯಾದವ್ ಕಳವಳ
ಅಖಿಲೇಶ್ ಯಾದವ್ ಆರೋಪವನ್ನು ನಿರಾಕರಿಸಿದ ವಾರಣಾಸಿ ಜಿಲ್ಲಾಧಿಕಾರಿ
ನವದೆಹಲಿ (ಮಾ.8): ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ (Varanasi) ಮತ ಎಣಿಕೆಗೆ (Vote Counting) ಎರಡು ದಿನಗಳಿರುವಾಗ ಮತ ಎಣಿಕೆ ಕೇಂದ್ರದಿಂದ ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂ) ಕಳ್ಳತನವಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Samajwadi Party leader Akhilesh Yadav) ಇಂದು ಆರೋಪಿಸಿ, ಕಳ್ಳತನಕ್ಕೆ ವಿಡಿಯೋ ಪುರಾವೆ ನೀಡಿದ್ದಾರೆ.
ವಾರಣಾಸಿಯ ಮತ ಎಣಿಕೆ ಕೇಂದ್ರದಲ್ಲಿ ಇವಿಎಂಗಳನ್ನು (EVM) ಅಸುರಕ್ಷಿತವಾಗಿ ಇರಿಸಲಾಗಿದೆ ಮತ್ತು ಅವುಗಳನ್ನು ಮೂರು ಟ್ರಕ್‌ಗಳಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದು ವೀಡಿಯೊಗಳು ತೋರಿಸಿವೆ ಎಂದು ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಟ್ರಕ್‌ಗಳಲ್ಲಿ ಒಂದನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರ ಪಕ್ಷ ಒಪಿ ರಾಜ್‌ಭರ್ (OP Rajbhar) ಅವರ ಆರೋಪಗಳಿಗೆ ರಾಜ್ಯ ಚುನಾವಣಾ ಆಯೋಗ ( state Election Commission) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಾರಣಾಸಿಯ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇಲ್ಲಿ ಸ್ಟ್ರಾಂಗ್ ರೂಮ್ ಇದೆ. ಮತದಾನ ಮಾಡಿದ ಇವಿಎಂಗಳನ್ನು ಅಲ್ಲಿ ಇರಿಸಲಾಗಿದೆ, ಬ್ಯಾರಿಕೇಡಿಂಗ್ ಮಾಡಲಾಗಿದೆ, ಬ್ಯಾರಿಕೇಡಿಂಗ್ ಅನ್ನು ಉಲ್ಲಂಘಿಸಲು ಯಾರಿಂದಲೂ ಸಾಧ್ಯವಿಲ್ಲ. ಇತರ ಇವಿಎಂಗಳಿಗೆ (ತರಬೇತಿಗಾಗಿ) ಇತರ ಸ್ಟ್ರಾಂಗ್ ರೂಮ್‌ಗಳು ಮತ್ತು ಗೋಡೌನ್‌ಗಳಿವೆ. ಇವಿಎಂಗಳ ಎರಡೂ ಸೆಟ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿಲ್ಲ, ಇದನ್ನು ಎಲ್ಲರಿಗೂ ಸ್ಪಷ್ಟಪಡಿಸಲಾಗಿದೆ" ಎಂದಿದ್ದಾರೆ.
ವೀಡಿಯೊಗಳಲ್ಲಿ ಕಂಡುಬರುವ ಇವಿಎಂಗಳು "ತರಬೇತಿ ಉದ್ದೇಶಗಳಿಗಾಗಿ" ಎಂದು ಜಿಲ್ಲಾಧಿಕಾರಿ ಹೇಳಿರುವ ಮಾತಿಗೆ ಅಖಿಲೇಶ್ ಯಾದವ್ ಸಮಾಧಾನಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಮುನ್ಸೂಚನೆಯನ್ನು ಎಕ್ಸಿಟ್ ಪೋಲ್ ಗಳು ನೀಡಿದ ಬೆನ್ನಲ್ಲಿಯೇ, ಈ ಎಕ್ಸಿಟ್ ಪೋಲ್ ಗಳು ಇವಿಎಂ ಅನ್ನು ಕದಿಯಲು ಸಲುವಾಗಿ ಮಾಡುತ್ತಿರುವ ಕಾರ್ಯಕ್ರಮಗಳಷ್ಟೇ, "ಎಕ್ಸಿಟ್ ಪೋಲ್ ಗಳಿಗೆ ಹಣ ನೀಡುತ್ತಿರುವವರು ಯಾರು?' ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.
Election Result 2022 ಉತ್ತರ ಪ್ರದೇಶ ಬಿಟ್ಟು ಉಳಿದೆಲ್ಲೆಡೆ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದ ಡಿಕೆಶಿ
ಯುಪಿಯಲ್ಲಿ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್‌ಗಳು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮತ್ತೊಂದು ಅವಧಿಗೆ ಪ್ರಚಂಡ ಬಹುಮತದಿಂದ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿವೆ. ಎಕ್ಸಿಟ್ ಪೋಲ್‌ಗಳ ಒಟ್ಟು ಮೊತ್ತವು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ರಾಜ್ಯದ 403 ಸ್ಥಾನಗಳಲ್ಲಿ 241 ಸ್ಥಾನಗಳನ್ನು ನೀಡುತ್ತದೆ ಎಂದು ಹೇಳಿದ. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಬಹುಮತದ ಮಾರ್ಕ್ 202 ಆಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಸವಾಲಾಗಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು 142 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ, ಶ್ರೀರಾಮುಲು ಭವಿಷ್ಯ
ಉತ್ತರಪ್ರದೇಶ ಚುನಾವಣೆ ಪ್ರಜಾಪ್ರಭುತ್ವದ ಅಂತಿಮ ಕದನ ಎಂದು ನಾನು ಆಗಾಗ ಹೇಳುತ್ತಲೇ ಇದ್ದೇನೆ. ಇದರ ನಂತರ ಬಿಜೆಪಿಯನ್ನು ಸೋಲಿಸಲು ಕ್ರಾಂತಿಯನ್ನೇ ಮಾಡಬೇಕಾಗುತ್ತದೆ. ನ್ಯಾಯಾಲಯದ ಮೊರೆ ಹೋಗಬೇಕಾದರೆ ನಾವು ಅದನ್ನು ಮಾಡುತ್ತೇವೆ ಆದರೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಪ್ರಜಾಪ್ರಭುತ್ವವನ್ನು ಉಳಿಸಲು ಬಯಸುವ ಮನಸ್ಸಿನ ಜನರು ನಮ್ಮೊಂದಿಗೆ ನಿಲ್ಲಬೇಕು' ಎಂದು ಹೇಳಿದರು. "ನಮ್ಮ ಮತಗಳನ್ನು ಉಳಿಸಲು ನಾವು ಎಲ್ಲವನ್ನೂ ಮಾಡಬೇಕಾಗಿದೆ. ಇದು ಕೇವಲ ಮೂರು ದಿನಗಳ ವಿಷಯವಾಗಿದೆ ಇಲ್ಲದೇ ಇದ್ದಲ್ಲಿ ಆಡಳಿತದಲ್ಲಿರುವ ಜನರು ಎಲ್ಲಾ ಮತಗಳನ್ನು ಕಳ್ಳತನ ಮಾಡುತ್ತಾರೆ" ಎಂದು ಹೇಳಿದರು. ತಮ್ಮ ಮೈತ್ರಿಕೂಟ 300 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.