ನಾನು ಎಲ್ಲವನ್ನೂ ಕಳೆದುಕೊಂಡೆ.‌ ಎಸ್‌.ಎಲ್. ಘೋಟ್ನೇಕರ್ ಛತ್ರಪತಿ ಶಿವಾಜಿ ಸ್ಕೂಲ್ ಅಂತಾ ಇತ್ತು. ಅದರಲ್ಲಿ ರಾಜಕೀಯ ಬೆಳೆಸಿ ನನ್ನ ಎಲ್ಲವನ್ನು ಕಸಿದುಕೊಳ್ಳಲಾಗಿದೆ. ನನ್ನಲ್ಲಿ ಈಗ ಏನೂ ಉಳಿದಿಲ್ಲ. ಈಗ ನನ್ನ ಮೇಲೆಯೇ ಉಲ್ಟಾ ಪ್ರಕರಣ ದಾಖಲಿಸುತ್ತಿದ್ದಾರೆ: ಎಸ್‌‌‌.ಎಲ್. ಘೋಟ್ನೇಕರ್ 

ಉತ್ತರಕನ್ನಡ(ಮಾ.26): ಲಕ್ಷಾಂತರ ರೂಪಾಯಿ ಹಣ ಮೋಸವಾಗಿರುವುದಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣದ ಹಿಂದೆ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಕೈಯಿದೆ‌ ಎಂದು ಮಾಜಿ ಎಂಎಲ್‌ಸಿ ಹಾಗೂ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಆರೋಪಿಸಿದ್ದಾರೆ. 

ನಿನ್ನೆ(ಶನಿವಾರ) ಮಾಧ್ಯಮದ‌‌ ಜತೆ ಮಾತನಾಡಿದ ಅವರು, ನಾನು ಎಲ್ಲವನ್ನೂ ಕಳೆದುಕೊಂಡೆ.‌ ಎಸ್‌.ಎಲ್. ಘೋಟ್ನೇಕರ್ ಛತ್ರಪತಿ ಶಿವಾಜಿ ಸ್ಕೂಲ್ ಅಂತಾ ಇತ್ತು. ಅದರಲ್ಲಿ ರಾಜಕೀಯ ಬೆಳೆಸಿ ನನ್ನ ಎಲ್ಲವನ್ನು ಕಸಿದುಕೊಳ್ಳಲಾಗಿದೆ. ನನ್ನಲ್ಲಿ ಈಗ ಏನೂ ಉಳಿದಿಲ್ಲ. ಈಗ ನನ್ನ ಮೇಲೆಯೇ ಉಲ್ಟಾ ಪ್ರಕರಣ ದಾಖಲಿಸುತ್ತಿದ್ದಾರೆ. ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಕರಣ ದಾಖಲಿಸಲಾಗಿದೆ ಅಂತ ತಿಳಿಸಿದ್ದಾರೆ. 

ಖರ್ಗೆ, ಪರಮೇಶ್ವರರನ್ನು ಮುಗಿಸಿರುವ ಸಿದ್ಧರಾಮಯ್ಯ, ಡಿಕೆಶಿಯನ್ನು ಕೂಡಾ ಮುಗಿಸ್ತಾರೆ: ಕಟೀಲು

ಅಟ್ರಾಸಿಟಿ ಕೇಸ್, ಕಿಡ್ನ್ಯಾಪ್ ಕೇಸ್, ನನ್ನ ಮಗನ ಮೇಲೆ ಕೇಸ್, ಕಿಡ್ಯ್ನಾಪ್‌ಗೆ ನನ್ನ ಪತ್ನಿಯ ವಾಹನ ಬಳಸಿದರೆಂದು ಕೇಸ್ ಹೀಗೆ ನನ್ನನ್ನು ಮುಗಿಸಿಯೇ ಬಿಡಬೇಕೆಂದು ಇದನ್ನೆಲ್ಲಾ ಮಾಡಲಾಗ್ತಿದೆ. ಅವರಿಗೆ ತಾಕತ್ತಿದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ. ನನ್ನ‌ ಕೈಯಿಂದ ಕೋಟಿಗಟ್ಟಲೆ ಹಣ ಹೋಗಿದೆ. ಇದು ಶಾಸಕ ಆರ್.ವಿ.ದೇಶ್‌ಪಾಂಡೆ ಹಾಗೂ ಉಳಿದ ಪಕ್ಷದವರು ಸೇರಿ ಮಾಡ್ತಿರುವ ಷಡ್ಯಂತ್ರ. ಇವೆಲ್ಲದರಲ್ಲಿ ದೇಶ್‌ಪಾಂಡೆಯದ್ದೇ ಕೈಯಿದೆ. ಬ್ಲಾಕ್ ಅಧ್ಯಕ್ಷರನ್ನು ಬಳಸಿಕೊಂಡು ನನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದರು. ಇವೆಲ್ಲವೂ ನಮ್ಮ ಕ್ಷೇತ್ರದ ಜನರಿಗೆ ತಿಳಿದಿದೆ. ನಾನು ಚುನಾವಣೆಗೆ ನಿಲ್ತೇನೆ ಅಂದ ಕೂಡಲೇ ನನ್ನನ್ನು ವಿವಿಧ ರೀತಿಯಲ್ಲಿ ಮುಗಿಸಲೆತ್ನಿಸಲಾಗ್ತಿದೆ.‌ ಯಾವುದೇ ಪ್ರಕರಣಗಳನ್ನು ಹೊಂದದ ವ್ಯಕ್ತಿಯಾಗಿದ್ದ ನನ್ನನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ರು. ನಾನೇನಾದ್ರೂ ಮೋಸ ಮಾಡಿದಿದ್ರೆ ಬ್ಯಾಂಕ್ ಡಾಕ್ಯುಮೆಂಟ್ ಇದೆಯಲ್ಲಾ. ನಕಲಿ ದಾಖಲೆಗಳನ್ನು ನೀಡಿ ಯಾವುದೇ ವ್ಯವಹಾರ ಅಸಾಧ್ಯ. ಚುನಾವಣೆ ಸಂದರ್ಭದಲ್ಲಿ ನನಗೆ ಟಾರ್ಚರ್ ಮಾಡಲು ಹೀಗೆಲ್ಲಾ ಮಾಡಲಾಗ್ತಿದೆ ಎಂದು ಹಳಿಯಾಳ ಜೆಡಿಎಸ್ ಅಭ್ಯರ್ಥಿ ಎಸ್‌.ಎಲ್.‌ಘೋಟ್ನೇಕರ್ ತಿಳಿಸಿದ್ದಾರೆ. 

ಚುನಾವಣೆ ಟಿಕೆಟ್‌ಗಾಗಿ ದೇಶ್‌ಪಾಂಡೆ ಜತೆ ಜಗಳವಾಡಿ ಕಾಂಗ್ರೆಸ್ ಪಕ್ಷ ಬಿಟ್ಟಿದ್ದ‌ ಘೋಟ್ನೆಜರ್, ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ್ದರು. ದೇಶ್‌ಪಾಂಡೆ ವಿರುದ್ಧ ತೊಡೆತಟ್ಟಿ ನಿಂತಿದ್ದ ಎಸ್.ಎಲ್‌. ಘೋಟ್ನೇಕರ್ ವಿರುದ್ಧ ಹಳಿಯಾಳದ ಛತ್ರಪತಿ ಶಿವಾಜಿ ಎಜ್ಯುಕೇಶನ್ ಟ್ರಸ್ಟಿನ ಹಣ ದುರ್ಬಳಕೆ ಮಾಡಿದ ಆರೋಪ ಹಿನ್ನೆಲೆ‌ ಎಫ್‌ಐಆರ್ ದಾಖಲಾಗಿದೆ. 2022ರ ಮಾರ್ಚ್ 17ರಂದು ಛತ್ರಪತಿ ಶಿವಾಜಿ ಮಲ್ಟಿಪರ್ಪಸ್ ಸಹಕಾರ ಸಂಘದಿಂದ 40 ಲಕ್ಷ ರೂ.‌ ಹಣವನ್ನು‌ ತನ್ನ ನಕಲಿ ಖಾತೆಗೆ ವರ್ಗಾಯಿಸಿರುವ ಆರೋಪ ಎದುರಾಗಿದ್ದು, ಟ್ರಸ್ಟ್‌ನ ನಕಲಿ ಸೀಲ್ ಬಳಸಿ ಹಳಿಯಾಳದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ದಾಖಲೆ ನೀಡಿದ್ದಾರೆ ಎಂದು ದೂರಲಾಗಿದೆ. 

ಈ ಹಣವನ್ನು ತನ್ನ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡು ದುರ್ಬಳಕೆ ಮಾಡಿದ್ದಾರೆ ಎಂದು ಛತ್ರಪತಿ ಶಿವಾಜಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರಾಯಾಣ್ಣಾ ಸೋಮನಿಂಗ್ ಅರಣಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆ‌ ಪ್ರಕರಣ ದಾಖಲಾಗಿದೆ ಅಂತ ಮಾಜಿ ಎಂಎಲ್‌ಸಿ, ಜೆಡಿಎಸ್ ಅಭ್ಯರ್ಥಿ ಎಸ್‌‌‌.ಎಲ್. ಘೋಟ್ನೇಕರ್ ತಿಳಿಸಿದ್ದಾರೆ.