Asianet Suvarna News Asianet Suvarna News

'ಆರೆಸ್ಸೆಸ್‌ನಿಂದಾಗಿಯೇ ಬಿಎಸ್‌ವೈ ಅಧಿಕಾರ ಹೋಯಿತು'

  • ಆರೆಸ್ಸೆಸ್‌ನಿಂದಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ
  •  ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪ
RSS was The reason Behind BSY lost power Say HD kumaraswamy snr
Author
Bengaluru, First Published Oct 10, 2021, 8:01 AM IST

ಸಕಲೇಶಪುರ (ಅ.10): ಆರೆಸ್ಸೆಸ್‌ನಿಂದಾಗಿಯೇ (RSS) ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್‌ (JDS) ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಆರೋಪಿಸಿದ್ದಾರೆ. 

ಆರೆಸ್ಸೆಸ್‌ ವಿರುದ್ಧ ತಾವು ಮಾಡಿರುವ ಆರೋಪಗಳ ವಿಚಾರವಾಗಿ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ ಎಂಬ ಯಡಿಯೂರಪ್ಪನವರ ಹೇಳಿಕೆ ಕುರಿತು ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಜೊತೆ ಅವರಿಗೆ ಏನು ಮಾತನಾಡುವುದಿದೆ ಎಂದು ಪ್ರಶ್ನಿಸಿದರು. ಬಹುಶಃ ಆರೆಸ್ಸೆಸ್ಸಿನಿಂದಲೇ ಅವರು ಅಧಿಕಾರ ಕಳೆದುಕೊಂಡರಲ್ವಾ? ಆ ವಿಚಾರ ಇರಬೇಕು ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಆರೆಸ್ಸೆಸ್‌ ಆಗಿದ್ದು ಅದರಿಂದಾಗಿಯೇ ಯಡಿಯೂರಪ್ಪ ಅ​ಧಿಕಾರ (Power) ಕಳೆದುಕೊಂಡರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.

Dharwad| ಕಾಂಗ್ರೆಸ್‌, ಜೆಡಿಎಸ್‌ನಂತೆ ಆರ್‌ಎಸ್‌ಎಸ್‌ ತತ್ವ ಬದಲಾಗಲ್ಲ: ಜಗದೀಶ ಶೆಟ್ಟರ್‌

ಜನರು ಬೆಲೆ ಏರಿಕೆ ಬಿಸಿಯಲ್ಲಿ ದಿನದೂಡುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್‌ನವರು ಜಾತಿ ರಾಜಕಾರಣ (Cast Politics) ಮಾಡುವ ಮೂಲಕ ಜನರ ಮಧ್ಯೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದರು.

ಎತ್ತಿನಹೊಳೆ ಯೋಜನೆ (Yettinahole Project) ಪ್ರದೇಶಕ್ಕೆ ಭೇಟಿ ನೀಡಲು ಹೊರಟಿದ್ದ ಕುಮಾರಸ್ವಾಮಿ ಅವರ ಕಾರಿಗೆ ಸಕಲೇಶಪುರ ಪಟ್ಟಣದಲ್ಲಿ ಭಜರಂಗದಳದ ಕಾರ್ಯಕರ್ತರು ಘೋಷಣೆ ಕೂಗಿದರು. ಆರೆಸ್ಸೆಸ್‌ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು.

ಕಾಶ್ಮೀರ ಹಾಳು ಮಾಡ್ತಿದೆ ಆರ್‌ಎಸ್‌ಎಸ್‌

 

ಆರೆಸ್ಸೆಸ್‌ ಮತ್ತು ಬಿಜೆಪಿ(BJP) ಸೇರಿಕೊಂಡು ಕಾಶ್ಮೀರವನ್ನು(Kashmir) ಹಾಳು ಮಾಡುತ್ತಿವೆ. 4 ದಿನಗಳಲ್ಲಿ ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರ ನಡೆಸೋದು ಹೇಗಂತ ಇದೇನಾ ಆರೆಸ್ಸೆಸ್‌ ಹೇಳಿಕೊಟ್ಟಿರೋದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಕೇಸರಿಪಾಳಯದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 

ಆರೆಸ್ಸೆಸ್‌(RSS) ಬಗ್ಗೆ ಈ ಹಿಂದೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡಿರುವ ಅವರು ಅವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದು ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರು ಚರ್ಚೆಗೆ ಬರಲಿ ಎಂದು ತಿಳಿಸಿದ್ದಾರೆ. ಜೆಡಿಎಸ್‌(JDS) ವರಿಷ್ಠರಾದ ದೇವೇಗೌಡರು(HD Devegowda) ದೇಶದ ಪ್ರಧಾನಿಯಾಗಿದ್ದ 20 ತಿಂಗಳ ಅವ​ಧಿಯಲ್ಲಿ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತಾ? ಸರ್ಕಾರ ನಡೆಸುವುದು ಹೇಗೆ ಎಂದು ಇದೇನಾ ನಿಮಗೆ ಆರ್‌ಎಸ್‌ಎಸ್‌ ಹೇಳಿಕೊಟ್ಟಿರುವುದು ಎಂದು ಪ್ರಶ್ನಿಸಿದರು.

ದೇಶದ ಕಾರ್ಯಾಂಗದ ಮೇಲೆ ಆರೆಸ್ಸೆಸ್‌ ಹಿಡಿತವಿದೆ ಎಂದು ಅವರು ಈ ಹಿಂದೆ ನೀಡಿದ್ದ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಚನ್ನಪಟ್ಟಣದಲ್ಲಿ(Channapatna) ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಶ್ಮೀರದ ಇಂದಿನ ಸಮಸ್ಯೆಗೆ ಬಿಜೆಪಿ ಮತ್ತು ಆರೆಸ್ಸೆಸ್ಸೇ ಕಾರಣ ಎಂದು ಆರೋಪಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು(Teachers) ಹಾಗೂ ನಾಗರಿಕರನ್ನು ಕಾಶ್ಮೀರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲಿನ ಶಾಲೆಗೆ ನುಗ್ಗಿರುವ ಭಯೋತ್ಪಾದಕರು(Terrorists) ಶಿಕ್ಷಕರನ್ನು ಕೊಂದಿದ್ದಾರೆ.

Follow Us:
Download App:
  • android
  • ios