ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ ಭಟ್
ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮಾ.20): ಕಾಂಗ್ರೆಸ್‌ನ (Congress) ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಕುತ್ತಾರಿನ ಕೊರಗಜ್ಜ ಕ್ಷೇತ್ರದ ನಡೆ ಸಮಾರೋಪದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು. ಮೊದಲು ಬ್ರಿಟಿಷರ ಧ್ಬಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು.
ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್‌ನಲ್ಲಿ ಮೂರನೆಯವರ ಬಹುಮತ ಪಡೆದ್ರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದ್ರೆ ಹಿಂದೂ ಸಮಾಜ ಒಟ್ಟಾಗುತ್ತೆ. ಇವತ್ತು ಕಾಶ್ಮೀರ ಫೈಲ್ಸ್ ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತು. ಇವತ್ತು ಅದೇ ರೀತಿ ಹಿಜಾಬ್ ಬಂದಿದೆ, ಕಿತಾಬ್ ಬೇಡ. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಅನ್ನೋ ಮನೋಭಾವ ಇದೆ ಇದು ಈ ದೇಶವನ್ನು ಮುಂದೆ ತುಂಡು ಮಾಡುವ ಪ್ರಯತ್ನ ಎಂದರು.
ಸಿದ್ದರಾಮಯ್ಯ ತಾಯಿ ಮತ್ತು ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕ್ತಾರಾ?: ದನ ಮತ್ತು ದೇವರನ್ನು ಪೂಜಿಸುವ ತಾಯಿ ಮತ್ತು ಹೆಂಡತಿಯನ್ನು ಸಿದ್ದರಾಮಯ್ಯ (Siddaramaiah) ಮನೆಯಿಂದ ಹೊರಗೆ ಹಾಕ್ತಾರಾ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' (The Kashmir Files) ವಿರೋಧಿಸಿದ ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದು, ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಜರಾತ್ ಹತ್ಯಾಕಾಂಡ ಮಾಡಿದ್ರೆ ಸಿದ್ದರಾಮಯ್ಯ ಓಡಬೇಕು.
ಬ್ರಹ್ಮಕಲಶೋತ್ಸವಕ್ಕೆ ಯುಟಿ ಖಾದರ್ ಗೆ ಆಹ್ವಾನ, ಆಡಳಿತ ಮಂಡಳಿ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ!
ಅಲ್ಲಿ ಮುಸಲ್ಮಾನರು (Muslims) ಮಾಡಿದ ಅತ್ಯಾಚಾರ ಯಾರೂ ಒಪ್ಪಲು ಸಾಧ್ಯವಿಲ್ಲ. ಹಿಜಾಬ್ ಕೇಸ್‌ನಲ್ಲಿ (Hijab Case) ದೊಡ್ಡದಾಗಿದ್ದು ಅಲ್ಲಿನ ಹುಡುಗರು ಕೇಸರಿ ಶಾಲು ಹಾಕಿದ್ದು. ಸಿದ್ದರಾಮಯ್ಯ ಸಾಧ್ಯ ಆದ್ರೆ ಗುಜರಾತ್ ಗೆ ಹೋಗಿ ಸತ್ಯ ತಿಳಿಯಲಿ. ರೈಲಿನಲ್ಲಿ ಬೆಂಕಿ ಹಾಕಿ ಕೊಂದ್ರಲ್ಲ, ಅವರ ಮನೆಗೆ ಹೋಗಿ ಕೇಳಲಿ. ಹಿಜಾಬ್ ವಿಷಯದಲ್ಲಿ ಇವರು ಮಾತನಾಡಲ್ಲ, ಸ್ವಲ್ಪ ಆಚೀಚೆ ಆದರೂ ವೋಟ್ (Vote) ಹೋಗುತ್ತೆ ಎಂದು ವ್ಯಂಗ್ಯವಾಡಿದರು.
ಇನ್ನು ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ದವರು, ನನಗೆ ಗೌರವ ಇದೆ. ಆದರೆ ಹುಚ್ಚುಚ್ಚು ಮಾತನಾಡಬಾರದು, ದನದ ಮಾಂಸ ತಿಂತೇನೇ ಯಾರು ಕೇಳೋರು ಅಂತಾರೆ. ಸಿದ್ದರಾಮಯ್ಯ ತಾಯಿ ದನವನ್ನ ಪೂಜಿಸ್ತಾರೆ, ರಾತ್ರಿಯವರೆಗೆ ದೇವರನ್ನ ಪೂಜಿಸ್ತಾರೆ. ಅವರ ಹೆಂಡತಿ ದೇವರನ್ನ ಪೂಜಿಸ್ತಾರೆ, ಇವರಿಗೆ ಅರ್ಥ ಆಗಲ್ಲ. ಇವರ ತಾಯಿ ಮತ್ತು ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕ್ತಾರಾ? ಅವರ ಪುಣ್ಯದ ಫಲದಿಂದ ಸಿದ್ದರಾಮಯ್ಯ ಈಗ ಬದುಕಿರೋದು. ಹಿಂದೂ ಸಮಾಜವನ್ನು ಹಿಯಾಳಿಸೋ ಕೆಲಸ ಮಾಡಬೇಡಿ ಎಂದರು.
ಕುರಾನ್ ಬೈಬಲ್ ಬೇಡ, ಭಗವದ್ಗೀತೆ ಇರಲಿ: ಶಾಲೆಗಳಲ್ಲಿ (Schools) ಭಗವದ್ಗೀತೆ (Bhagavad Gita) ಕಲಿಸುವಂತೆ ಕಲ್ಲಡ್ಕ ಪ್ರಭಾಕರ ಭಟ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ (Mangaluru) ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಸ್ವರ್ಣವಲ್ಲಿ ಶ್ರೀಗಳು ಭಗವದ್ಗೀತೆ ಕಲಿಸ್ತೀನಿ ಅಂದ್ರು. ಆಗ ಬುದ್ಧಿಜೀವಿಗಳು ಕುರಾನ್ (Quran), ಬೈಬಲ್ (Bibale) ಹೇಳಿಕೊಡ್ತೀರಾ ಅಂತ ಗಲಾಟೆ ಮಾಡಿದ್ರು. ಆದ್ರೆ ಬೈಬಲ್, ಕುರಾನ್ ನಿಮ್ಮ ಮನೆಯಲ್ಲಿ ಮಾತ್ರ ಇರಲಿ. ಭಗವದ್ಗೀತೆ ಇಡೀ ಶಾಲೆ ಮತ್ತು ಮನೆ ಮನೆಗಳಲ್ಲೂ ನಡೀಬೇಕು. ಅದು ಈ ದೇಶದ ಅಂತಸತ್ವ ಮತ್ತು ಈ ದೇಶದ ತತ್ವ.
ರಾಮ ಮಂದಿರ ನಿಧಿ ಸಮರ್ಪಣೆ: ಪೂಜಾರಿ ಮನೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಕಾಲು ಮುಟ್ಟಿ ನಮನ
ಗುಜರಾತ್‌ನ (Gujarat) ಹಾಗೆ ನಮ್ಮ ಸರ್ಕಾರ ಧೈರ್ಯ ಮಾಡಿರೋದು ಸಂತಸದ ವಿಚಾರ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಕರ್ತವ್ಯ ಮಾಡು ಅಂತಿದ್ದಾನೆ, ಕೊಲ್ಲಲು ಹೇಳಿಲ್ಲ. ಆದ್ರೆ ಕುರಾನ್ ಮತ್ತು ಬೈಬಲ್‌ನಲ್ಲಿ ಎಲ್ಲರನ್ನೂ ಕೊಲ್ಲಿ ಅಂದಿದೆ. 'ದಿ ಕಾಶ್ಮೀರ ಫೈಲ್ಸ್; ಚಿತ್ರ ಅದಕ್ಕೆ ನೂರಕ್ಕೆ ನೂರು ಸರಿ ಇದೆ. ಕೊಲೆ, ಅತ್ಯಾಚಾರದ ವಿಚಾರಕ್ಕೆ ನಮ್ಮ ಬಹಿಷ್ಕಾರ. ಕುರಾನ್, ಬೈಬಲ್ ನಲ್ಲಿ ಹಾಗಿದ್ದರೆ ಬದಲು ಮಾಡಿಕೊಳ್ಳಿ. ಹಿಜಾಬ್ ಬಿಟ್ಟು ಕಿತಾಬ್‌ನ ಕಡೆಗೆ ಹೋಗುವ ಕೆಲಸ ಮಾಡಿ. ಭಗವದ್ಗೀತೆ ಎಲ್ಲಾ ಕಡೆ ಬರಲಿ, ಅದು ಈ ಮಣ್ಣಿನ ಸತ್ವ ಮತ್ತು ತತ್ವ ಅಂತ ಹೇಳಿದ್ದಾರೆ.