ಬೆಂಗಳೂರು (ಅ. 29): ರಾಜಾರಾಜೇಶ್ವರಿ ಉಪಚುನಾವಣಾ ಅಖಾಡ ರಂಗೇರಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. 

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಉಲ್ಲಾಳ ರಸ್ತೆಯಿಂದ ಆರಂಭವಾಗಿ ಮಲ್ಲತ್ತಹಳ್ಳಿ, ಕೆಂಗುಂಟೆ, ಗೊಲ್ಲರೆಡ್ಡಿ ಪಾಳ್ಯದಲ್ಲಿ ಕ್ಯಾಂಪೇನ್ ನಡೆಸಿದ್ದಾರೆ. ಯಶ್ ಕೂಡಾ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡಾ ಪ್ರಚಾರದಲ್ಲಿ ಭಾಗಿದ್ದಾರೆ. ಜೆಪಿ ಪಾರ್ಕ್, ಬಂಡೆಪ್ಪ ಗಾರ್ಡನ್ ನಲ್ಲಿ ಕ್ಯಾಂಪೇನ್ ನಡೆಸಿದ್ದಾರೆ.