ರೌಡಿ ಕೊತ್ವಾಲನ ಶಿಷ್ಯನಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಬಸವನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಿನ ದೊಡ್ಡ ರೌಡಿ ಕೊತ್ವಾಲ ರಾಮಚಂದ್ರ ಶಿಷ್ಯ, ಬ್ಲೂ ಫಿಲಂ ನಡೆಸುವವರಿಂದ ಬಿಜೆಪಿ ಕುರಿತು ಮಾತನಾಡುವ ನೈತಿಕತೆಯಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ವಿಜಯಪುರ (ಡಿ.4): ರಾಜ್ಯ ರಾಜಧಾನಿ ಬೆಂಗಳೂರಿನ ದೊಡ್ಡ ರೌಡಿ ಕೊತ್ವಾಲ ರಾಮಚಂದ್ರನಿಗೆ ಸಿಗರೇಟ್ ತಂದುಕೊಡುತ್ತಿದ್ದ, ರೌಡಿಯ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ. ಬ್ಲೂ ಫಿಲಂ ನಡೆಸುವವರು ಬೆಜೆಪಿಗೆ ಬಿಜೆಪಿ ರೌಡಿಶೀಟರ್ ಗಳ ಪಕ್ಷವೆಂದು ಹೇಳಿಕೆ ಕೊಡುವ ನೈತಿಕತೆಯಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬಿಜೆಪಿಗೆ ರೌಡಿ ಶೀಟರ್ ಗಳ ಸೇರ್ಪಡೆ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊತ್ವಾಲ ರಾಮಚಂದ್ರನ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ. ಕೊತ್ವಾಲ ರಾಮಚಂದ್ರ ಬೆಂಗಳೂರಿಗೆ ದೊಡ್ಡ ರೌಡಿ ಆಗಿದ್ದನು. ಅವನಿಗೆ ಸಿಗರೇಟ್ ತಂದು ಕೊಡುತ್ತಿದ್ದವರು ನಮಗೆ ಪಾಠ ಮಾಡುತ್ತಿದ್ದಾರೆ. ಬ್ಲೂ ಫೀಲಂ ನಡೆಸುವವರು ಬಿಜೆಪಿ ಬಗ್ಗೆ ಹೇಳಿಕೆ ಕೊಡುವ ನೈತಿಕತೆ ಇಲ್ಲ. ನಮ್ಮ ಪಕ್ಷದಲ್ಲಿ ಸುಸಂಸ್ಕೃತ ನಾಯಕರಿದ್ದು, ಈಗಾಗಲೇ ರಾಜ್ಯಾಧ್ಯಕ್ಷರು ಪಕ್ಷಕ್ಕೆ ರೌಡಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಅದನ್ನು ರಾಜ್ಯದಲ್ಲಿ ಪಾಲಿಸಲಾಗುತ್ತದೆ ಎಂದು ತಿಳಿಸಿದರು.
Vijayapura: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಓಟರ್ ಐಡಿ ಡಿಲೀಟ್ ಯತ್ನ ವ್ಯಕ್ತಿ ಸೆರೆ
ಕಾಂಗ್ರೆಸ್‌ನಿಂದಲೇ ಎಂ.ಬಿ. ಪಾಟೀಲ್ ಸೋಲು: ಶಾಸಕ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರು ಮಾತನಾಡುತ್ತಿರುವುದು ಸ್ವಾಗತ. ಆದರೆ, ಅವರು ನಮ್ಮನ್ನು ಸೋಲಿಸಬೇಕು ಎಂದು ಹೇಳಿದ್ದಾರೆ. ನಾನು ಕೂಡ ಅವರನ್ನು ಸೋಲಿಸಬೇಕು ಎಂದು ಹೇಳುತ್ತೇನೆ. ಅವರು ಕಾಂಗ್ರೆಸ್, ನಾನು ಬಿಜೆಪಿ ಪರಸ್ಪರ ವಿರೋಧ ಪಕ್ಷಗಳ ನಾಯಕರಾಗಿದ್ದೇವೆ. ಆದರೆ, ರಾಜ್ಯದಲ್ಲಿ 10 ಜನ ಎಂ.ಬಿ. ಪಾಟೀಲ್ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಎಂ.ಬಿ. ಪಾಟೀಲ್ ಅವರನ್ನ ಅವರದೇ ಪಕ್ಷದ ಇಬ್ಬರು ಶಾಸಕರು ಸೋಲಿಸುವುದಾಗಿ ಹೇಳಿದ್ದಾರೆ. ನನ್ನನ್ನು ಸೋಲಿಸುವುದು ಎಂಬಿ ಪಾಟೀಲ್ ಅಲ್ಲ. ಜನ ಅದನ್ನು ತೀರ್ಮಾನ ಮಾಡುತ್ತಾರೆ. ಎಲ್ಲಮ್ಮನ ಗುಡ್ಡದಾಗ ಮುಲ್ಲಾದು ಏನ್ ಕೆಲಸ ಎಂದ ಶಾಸಕ ಯತ್ನಾಳ್ ತಿರುಗೇಟು ನೀಡಿದರು.
ವಚನಾನಂದಶ್ರೀ ಬ್ರೋಕರ್ ಸ್ವಾಮಿ: ಹರಿಹರ ವಚನಾನಂದ ಶ್ರೀಗಳಿಗೆ ಬ್ರೋಕರ್ ಸ್ವಾಮಿ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ರೂ.ಗಳನ್ನು ವಸೂಲಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡೆಯಿಂದಲೂ ಹರಿಹರ ಶ್ರೀಗಳು 10 ಕೋಟಿ ರೂಪಾಯಿಗಳನ್ನು ಇಸ್ಕೊಂಡಿದ್ದಾರೆ. ಅಲ್ಲದೇ, ಮಠದಲ್ಲಿ ಅವ್ಯವಹಾರ ಮಾಡಿದ್ದಾನೆ. ಅದನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಹರಿಹರ ಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದು ತಿಳಿಸಿದರು.