ಬೆಂಗಳೂರು, [ಜ.25]: ಹೊಸಪೇಟೆಯ ವಿಜಯ ನಗರ ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಪೊಲೀಸರಿಂದ ಎಸ್ಕೇಪ್ ಆಗಿದ್ದಾರೆ.

ಈಗಲ್‌ರ್ಟನ್ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಸಕ ಜೆ.ಎನ್. ಗಣೇಶ್ ಮುಂಬೈನ ಖಾಸಗಿ ಹೋಟೆಲ್‌ನಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ರಾಮನಗರ ಪೊಲೀಸರು ಮುಂಬೈ ಪೊಲೀಸರ ನೆರವು ಪಡೆದು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.

ನಾರಾಯಣ ನೇತ್ರಾಲಯಕ್ಕೆ ಆನಂದ್ ಸಿಂಗ್ ಶಿಫ್ಟ್

 ಆದ್ರೆ ಪೊಲೀಸರ ದಾಳಿ ಮಾಹಿತಿ ಅರಿತ ಶಾಸಕ ಜೆ.ಎನ್. ಗಣೇಶ ಹೊಟೇಲ್‌ನಿಂದ ಪರಾರಿಯಾಗಿದ್ದಾರೆ. ಎಸ್ ಪಿ ಬಿ.ರಮೇಶ್ ರಚಿಸಿದ್ದ 4 ತಂಡದಲ್ಲಿ ಒಂದು ತಂಡ ಮುಂಬೈಗೆ ತೆರಳಿದ್ದು, ಅಲ್ಲಿನ ಪೊಲೀಸರ ಸಹಾಯ ಪಡೆದು ಗಣೇಶ್ ಅವರನ್ನು ಬಂಧಿಸಲು ಪ್ಲಾನ್ ಮಾಡಿತ್ತು. ಆದ್ರೆ ಗಣೇಶ್ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿದ್ದಾರೆ.
 
ಗೋಕಾಕ್ ಶಾಸಕ [ಮಾಧ್ಯಮಗಳಿಂದ ಅಮಾನತುಗೊಂಡಿರುವ ಶಾಸಕರ] ಅವರೊಂದಿಗೆ ಗಣೇಶ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಮುಂಬೈನಲ್ಲೇ ಸ್ಥಳೀಯ ಪೊಲೀಸರ ನೆರವಿನಿಂದ ಗಣೇಶ್ ನನ್ನು ಬಂಧಿಸಲು ತೀವ್ರ ಕಾರ್ಯಚರಣೆ ನಡೆಸಿದ್ದಾರೆ. 

ಬಯಲಾಯ್ತು ಆನಂದ್ ಸಿಂಗ್-ಗಣೇಶ್ ಟೈಟ್ ಫೈಟ್ ಸೀಕ್ರೆಟ್

ಕಳೆದ 10 ದಿನಗಳಿಂದ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಸಂಪರ್ಕಸಿದ್ದ ಬಗ್ಗೆ ಮಾಹಿತಿ ಆಧರಿಸಿ ರಾಮನಗರ ಪೊಲೀಸರು ಮುಂಬೈಗೆ ತೆರಳಿದ್ದರು.

ಒಟ್ಟಿನಲ್ಲಿ ಗಣೇಶ್ ಹಲ್ಲೆ ಆರೋಪ ರಾಜ್ಯ ರಾಜಕಾರಣ ಖಂಡನೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಗೆ ಮುಜುಗರವನ್ನುಂಟ ಮಾಡಿದೆ. ಈ ಹಿನ್ನಲೆಯಲ್ಲಿ ಗಣೇಶ್ ಬಂಧನಕ್ಕೆ ತೀವ್ರ ಕಾರ್ಯಚರಣೆ ನಡೆದಿದೆ.