Asianet Suvarna News Asianet Suvarna News

ಬಯಲಾಯ್ತು ಆನಂದ್ ಸಿಂಗ್-ಗಣೇಶ್ ಟೈಟ್ ಫೈಟ್ ಸೀಕ್ರೆಟ್

ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವಿನ ಟೈಟ್ ಫೈಟ್ ವಿವರ ಬಹಿರಂಗವಾಗಿದೆ. ಇಬ್ಬರ ನಡುವಿನ ಜಗಳ ಬಿಡಿಸದಿದ್ದರೆ ಆನಂದ್ ಸಿಂಗ್ ಪ್ರಾಣಕ್ಕೆ ಕುತ್ತು ಬರುವ ಬರುವ ಪರಿಸ್ಥಿತಿ ಇತ್ತು ಎನ್ನುವ ಮಾಹಿತಿ ಹೊರ ಬಿದ್ದಿದೆ. 

Reveal Congress MLA Ganesh And Anand Singh Tight Fight Matter
Author
Bengaluru, First Published Jan 24, 2019, 8:31 AM IST

ದಾವ​ಣ​ಗೆರೆ :  ‘ಬಳ್ಳಾರಿ ಶಾಸ​ಕರ ನಡು​ವಿನ ಜಗಳ, ಹೊಡೆ​ದಾ​ಟ​ವನ್ನು ನಾವು ಬಿಡಿ​ಸದೇ ಇದ್ದಿ​ದ್ದರೆ, ಆನಂದ ಸಿಂಗ್‌ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಜಗಳ ಬಿಡಿಸಲು ಹೋದಾಗ ನೀವ್ಯಾಕೆ ಬರು​ತ್ತೀರಿ, ಸುಮ್ಮನೆ ಹೋಗಿ ಅಂತಾ ಶಾಸ​ಕ ಗಣೇಶ್‌ ನಮಗೇ ಆವಾಜ್‌ ಹಾಕಿದ್ದ, ನಮ್ಮ ಮೇಲೂ ಹಲ್ಲೆಗೆ ಮುಂದಾಗಿದ್ದ, ಅಕ್ಷರಶಃ ರೌಡಿಯ ರೀತಿ ಹೊಡೆಯುತ್ತಿದ್ದ’ ಎಂದು ಬಿಡದಿಯ ರೆಸಾರ್ಟ್‌ ಗಲಾಟೆಯನ್ನು ಪ್ರತ್ಯಕ್ಷವಾಗಿ ಕಂಡ ಹರಿಹರದ ಶಾಸಕ ಎಸ್‌.ರಾಮಪ್ಪ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಸಮೀ​ಪದ ಈಗಲ್ಟನ್‌ ರೆಸಾ​ಟ್‌​ರ್‍ನಲ್ಲಿ ಇತ್ತೀಚೆಗೆ ನಡೆದಿದ್ದ ಬಳ್ಳಾರಿ ಕಾಂಗ್ರೆಸ್‌ ಶಾಸ​ಕರ ಮಾರಾ​ಮಾರಿ ಪ್ರಕ​ರ​ಣ​ದಲ್ಲಿ ಗಣೇ​ಶ್‌​ರಿಂದ ಹಲ್ಲೆ​ಗೊ​ಳ​ಗಾದ ಶಾಸಕ ಆನಂದ್‌ ಸಿಂಗ್‌ ಅವರ ರಕ್ಷಣೆಗೆ ಧಾವಿಸಿದ ಮೂವರು ಶಾಸ​ಕರ ಪೈಕಿ ಎಸ್‌.​ರಾ​ಮಪ್ಪ ಕೂಡ ಒಬ್ಬರು. ಆ ರಾತ್ರಿಯ ಹೊಡೆದಾಟದ ಘಟನೆಯನ್ನು ನೆನಪು ಮಾಡಿಕೊಂಡ ಅವರು ಗಣೇಶ್‌ ಆರ್ಭಟವನ್ನು ಬಿಚ್ಚಿಟ್ಟಿದ್ದಾರೆ. ಗಣೇಶ್‌ ರೌಡಿಯ ರೀತಿ ಹೊಡೆದಿದ್ದರಿಂದ ಆನಂದ್‌ ಸಿಂಗ್‌ ಕಣ್ಣುಗಳೆಲ್ಲ ಊದಿಕೊಂಡಿದ್ದವು. ಸುದ್ದಿ ತಿಳಿದು ಸಚಿವ ಡಿ.ಕೆ.ಶಿವಕುಮಾರ್‌ ಕೂಡ ಅಲ್ಲಿಗೆ ಬಂದರು ಎಂದು ರಾಮಪ್ಪ ತಿಳಿಸಿದರು.

ಜೋರು ಗಲಾಟೆ ಕೇಳಿ ಎದ್ದುಬಂದೆವು:  

ಕಾಂಗ್ರೆಸ್‌ ಶಾಸಕರೆಲ್ಲ ಆ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದೆವು. ಆನಂದ್‌​ಸಿಂಗ್‌, ಗಣೇಶ್‌ ಒಂದೇ ರೂಂನಲ್ಲಿ ರಾತ್ರಿ ಊಟ ಮಾಡುತ್ತಾ, ಕಾಲ ಕಳೆ​ಯು​ತ್ತಿ​ದ್ದರು. ನಾವೆ​ಲ್ಲರೂ ರಾತ್ರಿ 10.30ಕ್ಕೆ ಊಟ ಮುಗಿಸಿ ಮಲ​ಗಿ​ದೆವು. ಆದರೆ, ಆನಂದ್‌ ಸಿಂಗ್‌, ಗಣೇಶ ಇದ್ದ ಕೋಣೆ​ಯಲ್ಲಿ ರಾತ್ರಿ 2 ಗಂಟೆ​ಯಿಂದ ಯಾವುದೋ ಕಾರಣಕ್ಕೆ ಜೋರು ದನಿಯ ವಾಗ್ವಾದ ನಡೆಯುತ್ತಿರುವುದು ಕೇಳಿಸುತ್ತಿತ್ತು. ಬೆಳ​ಗಿನ ಜಾವ 4.40ರಿಂದ 5 ಗಂಟೆ ಆಗಿರಬಹುದು. ಮಾತಿನ ಚಕಮತಿ ತೀವ್ರ ಸ್ವರೂಪ ಪಡೆದು, ಜೋರು ಗಲಾಟೆಯೊಂದಿಗೆ ಕಿರು​ಚಾಟ, ಸದ್ದು ಕೇಳಿ ಬಂತು.

ನಾನು, ಚಳ್ಳ​ಕೆರೆ ಶಾಸಕ ರಘು​ಮೂರ್ತಿ, ಭೀಮಾ​ನಾಯ್ಕ ಮೂವ​ರೂ ಆನಂದ್‌ ಸಿಂಗ್‌, ಗಣೇಶ ಇದ್ದ ಕೊಠ​ಡಿ​ಯತ್ತ ದೌಡಾಯಿಸಿದೆವು. ಗಣೇಶ್‌ ಅಕ್ಷರಶಃ ರೌಡಿಯ ರೀತಿಯಲ್ಲಿ ಹೊಡೆಯುತ್ತಿದ್ದ. ಗಣೇಶ್‌ ಕೈಯಲ್ಲಿ ಯಾವುದೇ ಆಯುಧ ಇಲ್ಲದಿದ್ದರೂ ಆತನ ಏಟಿಗೆ ಆನಂದ್‌ ಸಿಂಗ್‌ ನುಜ್ಜು​ಗು​ಜ್ಜಾ​ಗಿದ್ದರು. ನಾವು ಮಧ್ಯ ಪ್ರವೇಶಿಸಿ ಪರಿ​ಸ್ಥಿ​ತಿ ತಿಳಿ​ಗೊ​ಳಿ​ಸಲು ಪ್ರಯ​ತ್ನಿ​ಸಿ​ದೆವು. ಆದರೆ, ಕ್ರೀಡಾಳು (ಹಿಂದೆ ಕಬಡ್ಡಿ ಪಟುವಾಗಿದ್ದವರು, ಪ್ರತಿ ದಿನ ದೇಹವನ್ನು ಸಾಮು ಮಾಡುತ್ತಿದ್ದರು ಗಣೇಶ್‌) ಆಗಿ​ರುವ ಗಣೇ​ಶ್‌ ಬಿಡಿ​ಸಲು ಹೋದ​ವರ ಮೇಲೂ ರೌಡಿ ರೀತಿಯಲ್ಲೇ ಹಲ್ಲೆಗೆ ಪ್ರಯ​ತ್ನಿ​ಸಿದ. ನೀವ್ಯಾಕೆ ಬರು​ತ್ತೀರಿ, ನಿಮ​ಗೇನು ಸಂಬಂಧ​ ಎಂದೆಲ್ಲ ನಮ್ಮ ಮೇಲೆಯೇ ಎರಗಿ ಎತ್ತರಿಸಿದ ಧ್ವನಿಯಲ್ಲಿ ಬೈದ. ನಾವೂ ಜೋರಾಗಿಯೇ ಗಣೇ​ಶ​ನಿಗೆ ಬೈದು ಬುದ್ಧಿ ಹೇಳಿ​ದೆವು. ಅಷ್ಟ​ರಲ್ಲಿ ಸಚಿವ ಡಿ.ಕೆ.​ಶಿ​ವ​ಕು​ಮಾರ ಅಲ್ಲಿಗೆ ಧಾವಿ​ಸಿ​ದ​ರು. ಪರಿಸ್ಥಿತಿ ತಿಳಿಗೊಳಿಸಿದರು.

ಆಕ​ಸ್ಮಾತ್‌ ನಾನು, ರಘು​ಮೂರ್ತಿ, ಭೀಮಾ​ನಾಯ್ಕ ಅಲ್ಲಿ​ರದೇ ಇದ್ದಿ​ದ್ದರೆ ಆನಂದ್‌ ಸಿಂಗ್‌ ಪರಿ​ಸ್ಥಿತಿ ಏನಾ​ಗು​ತ್ತಿತ್ತೋ ಹೇಳು​ವುದೇ ಕಷ್ಟ​ವಾ​ಗು​ತ್ತಿತ್ತು. ನಮ್ಮ ಕಣ್ಣಿಗೆ ಘಟನೆ​ಯೆಲ್ಲಾ ಬಿದ್ದಿ​ದ್ದ​ರಿಂದ ನಾವೇ ಬೈದ ಮೇಲೆ ಗಣೇಶ ಸುಮ್ಮ​ನಾ​ಗಿದ್ದು ನಿಜ. ಆತ ಬಿಡಿ​ಸಲು ಹೋದ​ವರ ಮೇಲೂ ತಿರುಗಿ ಬಿದ್ದಿದ್ದೂ ನಿಜ. ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡುವ ಮೂಲಕ ಗಣೇಶ್‌ ದೊಡ್ಡ ತಪ್ಪು ಮಾಡಿ​ದ ಎಂದು ರಾಮಪ್ಪ ಆ ಕರಾಳ ರಾತ್ರಿಯ ಘಟನೆಯನ್ನು ನೆನಪು ಮಾಡಿಕೊಂಡರು.

ಈಗಾ​ಗಲೇ ಪೊಲೀಸ್‌ ಇಲಾ​ಖೆ ಕಾನೂನು ಪ್ರಕಾರ ಪ್ರಕ​ರಣ ದಾಖ​ಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ. ಕಾಂಗ್ರೆಸ್‌ ಪಕ್ಷದ ವರಿ​ಷ್ಠರೂ ಸಹ ಶಾಸಕ ಗಣೇಶ್‌ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡಿ​ದ್ದಾರೆ. ಆನಂದ್‌ ಸಿಂಗ್‌ ಮೇಲೆ ಹಲ್ಲೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ ನನ್ನನ್ನೂ ಸಾಕ್ಷಿ​ಯ​ನ್ನಾ​ಗಿ​ಸ​ಲಾ​ಗಿದೆ. ಅಂದಿನ ಘಟನೆ ಕುರಿತು ನನ​ಗಿ​ರುವ ಮಾಹಿ​ತಿ​ಯನ್ನು ತನಿಖಾಧಿ​ಕಾ​ರಿ​ಗಳ ಮುಂದೆ, ನ್ಯಾಯಾ​ಲ​ಯದ ಸಮ್ಮು​ಖ​ದಲ್ಲಿ ಚಾಚೂ ತಪ್ಪದೇ ಹೇಳು​ತ್ತೇನೆ ಎಂದು ಶಾಸಕ ಎಸ್‌.​ರಾ​ಮಪ್ಪ ‘ಕನ್ನ​ಡ​ಪ್ರ​ಭ’ಕ್ಕೆ ತಿಳಿ​ಸಿ​ದರು.

ಯಾವ ವಿಚಾ​ರಕ್ಕೆ ಗಲಾ​ಟೆ​ಯಾ​ಯಿ​ತೆಂಬ ಬಗ್ಗೆ ನಮ​ಗ್ಯಾ​ರಿಗೂ ಮಾಹಿತಿ ಇಲ್ಲ. ಅದು ಯಾಕೆಂಬ ವಿಚಾ​ರವೂ ಆನಂದ್‌ ಸಿಂಗ್‌, ಗಣೇಶ್‌, ಭೀಮಾ​ನಾ​ಯ್ಕಗೆ ಮಾತ್ರ ಗೊತ್ತು. ಆನಂದ್‌ ಸಿಂಗ್‌ ಕಣ್ಣು ಬಾತು​ಕೊ​ಳ್ಳು​ವಂತೆ ಗಣೇಶ್‌ ಹೊಡೆದಿದ್ದಾನೆ ಅನ್ನುವುದಷ್ಟೇ ಗೊತ್ತು. ಬಿಡಿ​ಸಿ​ಕೊ​ಳ್ಳಲು ಹೋದ​ವ​ರಿಗೂ ಗಣೇಶ ಹೊಡೆ​ದಿ​ದ್ದ. ಕಣ್ಣಿಂದ ಏನು ನೋಡಿ​ದ್ದೆವೋ ಅದನ್ನು ಎಲ್ಲಿ ಬೇಕಾ​ದರೂ ಹೇಳು​ತ್ತೇನೆ. ಈಗ ಸಾರ್ವ​ಜ​ನಿ​ಕ​ವಾ​ಗಿಯೇ ನಿಮ್ಮ ಮುಂದೆ ಹೇಳು​ತ್ತಿ​ದ್ದೇನೆ. ಆನಂದ ಸಿಂಗ್‌ಗೆ ಅನ್ಯಾ​ಯ​ವಾ​ಗಿದೆ. ಶಾಸಕರು ರೌಡಿ​ಗಳು ಹೊಡೆ​ದಾ​ಡಿ​ದಂತೆ ಹೊಡೆ​ದಾ​ಡು​ತ್ತಾ​ರೆಂದರೆ ಏನರ್ಥ. ನಾವು ಬಿಡಿ​ಸದೇ ಇದ್ದಿ​ದ್ದರೆ ಆನಂದ್‌ ಸಿಂಗ್‌ ಸ್ಥಿತಿ ಏನಾಗುತ್ತಿತ್ತೋ ?

- ಎಸ್‌.​ರಾ​ಮಪ್ಪ, ಹರಿ​ಹರ ಶಾಸಕ

Follow Us:
Download App:
  • android
  • ios