ಬೆಂಗಳೂರು, [ಜ.22]: ಕಾಂಗ್ರೆಸ್​ನ ರೆಸಾರ್ಟ್​ ರಾಜಕೀಯ ಏನೋ ಅಂತ್ಯವಾಗಿದೆ. ಆದ್ರೆ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ನಿಂದ ಏಟು ತಿಂದ ಆನಂದ್‌ ಸಿಂಗ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನಂದ್ ಸಿಂಗ್ ಅವರಿಗೆ ಏನು ಆಗಿಲ್ಲ ಎಂದು ಹೇಳಿದ್ದ ಸಂಸದ ಡಿ.ಕೆ. ಸುರೇಶ್ ಇಂದು [ಮಂಗಳವಾರ] ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಆನಂದ್ ಸಿಂಗ್ ಜೊತೆ ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ.

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

ರೆಸಾರ್ಟ್ ನಲ್ಲಿ ಅಂದು ಏನೆಲ್ಲ  ನಡೆಯಿತು ಎಂದು ಘಟನೆ ಬಗ್ಗೆ ಸುದೀರ್ಘ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್,  ಆನಂದ್ ಸಿಂಗ್ ಚೇತರಿಕೆ ಕಾಣುತ್ತಿದ್ದಾರೆ. ನನ್ನ ಜೊತೆ ಘಟನೆ ಬಗ್ಗೆ ಅರ್ಥ ಗಂಟೆ ಮಾತನಾಡಿದರು ಎಂದರು.

ಗಣೇಶ್‌ ಅಮಾನತು ನಂತರ ರಾಜ್ಯ ರಾಜಕಾರಣಲ್ಲಿ ನಂಬಲಾಗದ ಬೆಳವಣಿಗೆ!

ಇನ್ನು ಡಿಸ್ಸಾರ್ಚ್ ಬಗ್ಗೆ ಮಾತನಾಡಿದ ಸುರೇಶ್,  ಇನ್ನು ಆನಂದ್ ಸಿಂಗ್ ಆಸ್ಫತ್ರೆಯಲ್ಲೇ ಇರಬೇಕಾಗುತ್ತೆ. ಯಾವಾಗ ಡಿಸ್ಸಾರ್ಜ್ ಎಂದು ವೈದ್ಯರು ಹೇಳಬೇಕು ಎನ್ನುತ್ತಲೇ ಆಸ್ಪತ್ರೆಯಿಂದ ಹೊರಟು ಹೋದರು..

ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ನಡುವೆ ತೀವ್ರವಾಗಿ ಗಲಾಟೆ ನಡೆದರೂ ಏನು ಆಗಿಯೇ ಇಲ್ಲ ಎಂದು  ತೇಪೆ ಹಚ್ಚಲು ಡಿ.ಕೆ.ಬ್ರದರ್ಸ್ ಪ್ರಯತ್ನಿಸಿದ್ದರು.