Asianet Suvarna News Asianet Suvarna News

ಆರೋಪ ಬಂದ ತಕ್ಷಣ ಪತ್ರಕರ್ತರನ್ನು ಬಂಧಿಸಿದ್ರೆ ಹೇಗೆ?: ಖಾರವಾಗಿಯೇ ಮಾತಾಡಿದ ಸಚಿವ ಪರಮೇಶ್ವರ್

ಶಾಸಕರನ್ನು ಬಂಧಿಸಿ ಎಂದರೆ ಗೃಹ ಸಚಿವರು ನಮ್ಮನ್ನೇ ಬಂಧಿಸುವ ಮಾತನಾಡುತ್ತಾರೆ ಎಂದು ಗೊಣಗುತ್ತ ಪತ್ರಕರ್ತರು ಸುಮ್ಮನಾದರು.

reporters diary How can journalists be arrested as soon as the allegations are made gvd
Author
First Published Aug 19, 2024, 9:45 AM IST | Last Updated Aug 19, 2024, 11:43 AM IST

ನಿಮ್ಮ ಮೇಲೆ (ಪತ್ರಕರ್ತರ) ಆರೋಪ ಬಂದಾಕ್ಷಣ ಬಂಧಿಸಿದರೆ ನೀವು ಸುಮ್ಮನಿರುತ್ತಿರಾ? ನಿಮ್ಮ ಆರೋಪಗಳು ಇರುತ್ತವೆ. ಹಂಗೆಲ್ಲಾ ಅರೆಸ್ಟ್ ಮಾಡೋಕಾಗುತ್ತಾ... ಸಾಮಾನ್ಯವಾಗಿ ಬೇಗ ತಾಳ್ಮೆ ಕಳೆದುಕೊಳ್ಳದ ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರು ಯಾಕೋ ಏನೋ ಯಾದಗಿರಿ ಪಿಎಸ್‌ಐ ಪರಶುರಾಮ ಅಸಹಜ ಸಾವಿನ ಪ್ರಕರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೊಂಚ ಖಾರವಾಗಿ ಈ ರೀತಿ ಉತ್ತರಿಸಿದ ಪ್ರಸಂಗ ನಡೆಯಿತು. ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಬಂದ ಡಾ. ಪರಮೇಶ್ವ‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಆರಂಭವಾಯಿತು. 

ಡಾ. ಜಿ. ಪರಮೇಶ್ವರ ಏನು ಹೇಳಲು ಹೋದರೂ ಪತ್ರಕರ್ತರು ಮಾತ್ರ ಪಿಎಸ್‌ಐ ಸಾವಿಗೆ ಕಾರಣವಾದ ಶಾಸಕ ಮತ್ತು ಅವರ ಎಂದರೆ ಗೃಹ ಸಚಿವರು ಪುತ್ರನನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಕೇಳಲಾರಂಭಿಸಿದರು. ಡಾ. ನಮ್ಮನ್ನೇ ಬಂಧಿಸುವ ಜಿ. ಪರಮೇಶ್ವರ ಅವರು ಏನು ಹೇಳಲು ಮುಂದಾದರೂ ಪದೇ ಪದೇ ಪತ್ರಕರ್ತರು ಅದನ್ನೇ ಕೇಳಿದರು. ಅಟ್ರಾಸಿಟಿ ಕೇಸ್ ಸಹ ಮಾತನಾಡುತ್ತಾರೆ ಆಗಿದೆ, ಕುಟುಂಬದವರೇ ಆಗ್ರಹಿಸಿದ್ದಾರೆ. ಆದರೂ ಯಾಕೆ ಎಂದು ಗೊಣಗುತ್ತ ಶಾಸಕರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೂ ಕಾನೂನು ರೀತಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರಿಂದ ಪತ್ರಕರ್ತರು ಪತ್ರಕರ್ತರು ಮತ್ತಷ್ಟು ಕೆರಳಿ, ಸಾಮಾನ್ಯ ಮನುಷ್ಯರಾಗಿದ್ದರೆ ಬಿಡುತ್ತಿದ್ದರೇನು? 

ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ಜಾತಿ ಲೇಪನ ಬೇಡ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಶಾಸಕರಾಗಿರುವುದಕ್ಕೆ ನೀವು ಬಂಧಿಸುತ್ತಿಲ್ಲ ಎಂದಿದ್ದರಿಂದ ಕೆರಳಿದ ಸುಮ್ಮನಾದರು. ಗೃಹ ಸಚಿವರು, ನಿಮ್ಮ ಮೇಲೆ (ಪತ್ರಕರ್ತರ) ಆರೋಪ ಬಂದಾಕ್ಷಣ ಬಂಧಿಸಿದರೆ ನೀವು ಸುಮ್ಮನಿರುತ್ತಿರಾ? ನಿಮ್ಮ ಮೇಲೆ ನೂರೆಂಟು ಆರೋಪಗಳು ಇರುತ್ತವೆ. ಹಂಗೆಲ್ಲಾ ಅರೆಸ್ಟ್ ಮಾಡೋಕಾಗುತ್ತಾ? ಎಂದು ಒಂಚೂರು ಖಾರವಾಗಿಯೇ ಪ್ರಶ್ನೆ ಮಾಡಿದರಲ್ಲದೆ, ಪ್ರಕರಣವನ್ನು ಸಿಐಡಿಗೆ ನೀಡಿದ್ದೇವೆ, ಅವರು ಮುಂದಿನ ಎಂದು ಕ್ರಮಕೈಗೊಳ್ಳುತ್ತಾರೆ, ಹಾಗೆಲ್ಲ ಬಂಧಿಸಲೇಬೇಕು ಹೇಳುವಂತಿಲ್ಲ ಎಂದು ಬಂಧಿಸುವ ಪ್ರಶ್ನೆಯನ್ನು ಕೇಳುವುದಕ್ಕೆ ಪತ್ರಕರ್ತರಿಗೆ ಕಡಿವಾಣವಂತೂ ಹಾಕಿದರು. 

ನಕಲಿ ರಜೆ ಆದೇಶ!: ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆಯೋ ಮಳೆ. ತಿಂಗಳ ಕಾಲ ಬಿಟ್ಟೂ ಬಿಡದೆ ಸುರಿದ ಮಳೆಯಿಂದ ಪ್ರವಾಹ, ಗುಡ್ಡ ಕುಸಿತ, ಹೆದ್ದಾರಿಗಳು ಬಂದ್, ಅಪಾರ ಸಾವು ನೋವು, ಜಲಾವೃತಗೊಂಡ ಮನೆಗಳು, ಕಾಳಜಿ ಕೇಂದ್ರದಲ್ಲಿ ಸಾವಿರಾರು ಜನರು. ಹೀಗೆ ಅವಾಂತರಗಳಿಂದಾಗಿ ಮಕ್ಕಳಿಗೆ ತೊಂದರೆ ಆಗಬಾರದೆಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ರಜೆ ನೀಡಿದ್ದು ಸಕಾಲಿಕವಾಗಿತ್ತು. ಮಳೆಯನ್ನು ನೋಡಿಕೊಂಡು ನಾಳೆ ರಜೆ ಎಂದು ಮುನ್ನಾ ದಿನ ಸಂಜೆ ಆದೇಶ ಹೊರಡಿಸುತ್ತಿದ್ದರು. ಹೀಗೆ ಮೂರು ವಾರಗಳ ತನಕ ನಿರಂತರ ರಜೆ ನೀಡಲಾಗಿತ್ತು. ವಿಚಿತ್ರ ಎಂದರೆ ಮೊದಲ ನಾಲ್ಕಾರು ದಿನಗಳು ಜಿಲ್ಲಾಧಿಕಾರಿ ಆದೇಶ ಬಂದ ಮೇಲೆ ರಜೆ ಎಂದು ಗೊತ್ತಾಗುತ್ತಿತ್ತು. 

ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ

ಆದರೆ ಕೆಲವು ಕಿಡಿಗೇಡಿಗಳು ಜಿಲ್ಲಾಧಿಕಾರಿ ಆದೇಶಕ್ಕಿಂತ ಮೊದಲೇ ಅವರ ಆದೇಶದ ಪ್ರತಿಯನ್ನು ನಕಲು ಮಾಡಿ ದಿನಾಂಕ ತಿದ್ದುಪಡಿ ಮಾಡಿ ರಜೆ ಕೊಡುತ್ತಿದ್ದರು. ಜಿಲ್ಲಾಧಿಕಾರಿ ಅಧಿಕೃತ ಆದೇಶ ನಂತರ ಬರುತ್ತಿತ್ತು. ಕೆಲವು ದಿನ ಇದು ಮುಂದುವರಿಯಿತು. ಒಮ್ಮೆ ಮಳೆಯೇ ಇರಲಿಲ್ಲ. ಆದರೂ ರಜೆಯ ಆದೇಶ ಪತ್ರ ಬಂತು. ಅಚ್ಚರಿಯಾದರೂ ಆದೇಶ ಪತ್ರ ಜಿಲ್ಲಾಧಿಕಾರಿ ಆದೇಶದಂತೆ ಯಥಾವತ್ತಾಗಿ ಇತ್ತು. ಅದನ್ನು ನೋಡಿ ಕೇಬಲ್‌ ಚಾನೆಲ್‌ಗಳಲ್ಲೂ ನಾಳೆ ರಜೆ ಎಂದು ಬಿತ್ತರವಾಯಿತು. ಕೆಲವು ಸ್ಕೂಲುಗಳಿಗೂ ರಜೆ ಘೋಷಿಸಲಾಯಿತು. ಎಲ್ಲರೂ ಯಾಮಾರಿದ್ದರು. ನಂತರ ಸ್ವತಃ ಜಿಲ್ಲಾಧಿಕಾರಿಯೇ ನಾಳೆ ರಜೆ ಕೊಟ್ಟಿಲ್ಲ ಅದು ನಕಲಿ ಆದೇಶ ಎಂದು ಪ್ರಕಟಣೆ ನೀಡಬೇಕಾಯಿತು. ಅಷ್ಟೇ ಅಲ್ಲ, ಇಂತಹ ನಕಲಿ ಆದೇಶ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಲಾಯಿತು.

ಸೋಮರಡ್ಡಿ ಅಳವಂಡಿ.ಕೊಪ್ಪಳ, ವಸಂತಕುಮಾರ್‌ ಕತಗಾಲ

Latest Videos
Follow Us:
Download App:
  • android
  • ios