ದಿನೇಶ್ ಗುಂಡೂರಾವ್ ಶಿಕ್ಷೆ ಐಡಿಯಾ.. ಸಿಎಂ ಸಿದ್ದರಾಮಯ್ಯ ಖಡಕ್ ಲುಕ್ಕು
ಇದು ಕೆಲ ದಿನಗಳ ಹಿಂದೆ ನಡೆದ ಕಥೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ’ ಕುರಿತು ಉನ್ನತ ಮಟ್ಟದ ಸಭೆ ಕರೆದಿದ್ದರು.
ಇದು ಕೆಲ ದಿನಗಳ ಹಿಂದೆ ನಡೆದ ಕಥೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ’ ಕುರಿತು ಉನ್ನತ ಮಟ್ಟದ ಸಭೆ ಕರೆದಿದ್ದರು. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬೇಲೂರು ಹಾಸ್ಟೆಲ್‌ನಲ್ಲಿ ಗಾಂಜಾ ಸೇವನೆ ವರದಿ ಮುಂದಿಟ್ಟುಕೊಂಡು ‘ಇದು ನಿಮ್ಮ ಗಮನಕ್ಕೆ ಬಂದಿದೆಯೇ’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ಪ್ರಶ್ನಿಸಿದರು. ‘ಇಲ್ಲ’ ಎಂದ ಮಣಿವಣ್ಣನ್‌ಗೆ ‘ನೀವೆಲ್ಲ ಏನು ಕೆಲಸ ಮಾಡ್ತಿದ್ದೀರಿ? ಪತ್ರಿಕೆಗಳಲ್ಲಿ ಬರುವ ಗಂಭೀರ ವಿಚಾರಗಳು ನಿಮ್ಮ ಗಮನಕ್ಕೆ ಬರುವುದಿಲ್ಲವೇ. ನಿಮ್ಮ ಸಿಬ್ಬಂದಿಗಳು ಗಮನಕ್ಕೆ ತಂದಿಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡರಂತೆ.
ಅಷ್ಟಕ್ಕೆ ಸುಮ್ಮನಾಗಲಿಲ್ಲ. ಶಿಫಾರಸು ಮಾಡಿ ತಮ್ಮ ಕ್ಷೇತ್ರಗಳಿಗೆ ಇಂತಹದೇ ಪೊಲೀಸ್ ಸಿಬ್ಬಂದಿ ಬೇಕು ಎಂದು ಹಾಕಿಸಿಕೊಳ್ಳುವ ರಾಜಕಾರಣಿಗಳ ಮೇಲೂ ಹರಿಹಾಯ್ದರು. ಜತೆಗೆ, ತಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಎಂದು ಶಿಫಾರಸು ಮಾಡುವ ಮನಸ್ಥಿತಿಯನ್ನು ರಾಜಕಾರಣಿಗಳು ಬಿಡಬೇಕು ಎಂದರು. ಆಗ ಅಲ್ಲೇ ಇದ್ದ ಸಚಿವ ದಿನೇಶ್ ಗುಂಡೂರಾವ್ ಒಂದು ಐಡಿಯಾ ಕೊಟ್ಟರು. ಅದು. ಸರ್, ಅಧಿಕಾರಿ ತಪ್ಪು ಮಾಡಿದರೆ ಅವರನ್ನು ಶಿಫಾರಸು ಮಾಡಿದ ರಾಜಕಾರಣಿ ವಿರುದ್ಧವೂ ಕ್ರಮ ಜರುಗಿಸಬೇಕು ಎಂದರು. ಇದನ್ನು ಕೇಳಿದ ಕೂಡಲೇ ಸಿಎಂ ಸಿದ್ದರಾಮಯ್ಯ ಸಾಹೇಬರು ದಿನೇಶ್ ಗುಂಡೂರಾವ್ ಕಡೆಗೆ ಒಂದು ಖಡಕ್ ಲುಕ್ ಕೊಟ್ಟು ‘ಹಾ... ಹ್ಞೂಂ’ ಎಂದಷ್ಟೇ ಹೇಳಿದರು. ಆದರೆ, ಈ ‘ಹಾ... ಹ್ಞೂಂ’ ಹೇಳಿ ಟೋನ್ ಮಾತ್ರ, ದಿನೇಸು... ತಾವು ಸ್ವಲ್ಪ ಸುಮ್ನೆ ಇದ್ರೆ ಒಳ್ಳೆದು.. ಥ್ಯಾಂಕ್ಯು.... ಅಂದ್ಹಂಗಿತ್ತಂತೆ...
ಡಿಜಿಟಲ್ ವ್ಯವಹಾರಗಳು ಜಾಸ್ತಿಯಾಗಿರುವುದರಿಂದ ₹10 ನೋಟುಗಳು ಮಾಯವಾಗಿದೆಯಂತೆ: ಅಷ್ಟಕ್ಕೂ ಏನಾಯ್ತು?
ಎಲ್ಲರ ತಲೆ ತಿಂದ ದನದ ಮೂಳೆ
ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತವಾಗಿ 11 ಜನರು ಕಣ್ಮರೆಯಾಗಿದ್ದರು. ತಿಂಗಳು ಕಳೆದರೂ ಕೇವಲ 8 ಮೃತದೇಹ ಮಾತ್ರ ಪತ್ತೆಯಾಗಿತ್ತು. ಅನಂತರ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆಯಾಯಿತು. ಇದಾದ ಮೇಲೆ ಸ್ಥಳೀಯರೇ ಆದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಗಂಗಾವಳಿ ನದಿಯಲ್ಲಿ ಪಾತ್ರೆ, ಬಟ್ಟೆ, ಇತರ ಪರಿಕರಗಳು ಪತ್ತೆಯಾಗುತ್ತಿದ್ದವೇ ಹೊರತು ದೇಹ ಅಥವಾ ಮೂಳೆಗಳು ಪತ್ತೆಯಾಗುತ್ತಿರಲಿಲ್ಲ.
ಅದಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿರುವಾಗಲೆ ಒಂದು ಮೂಳೆ ದೊರಕಿತು. ಆ ಮೂಳೆ ಹಿಡಿದು ಯುದ್ಧ ಗೆದ್ದೆವೆಂದು ಬೀಗಿದರು. ಶೋಧ ಕಾರ್ಯಾಚರಣೆಯಲ್ಲಿ ತೊಡಗಿದವರು ಹಾಗೂ ಹಿರಿಯ ಅಧಿಕಾರಿಗಳಿಗೂ ಅದು ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಮೂಳೆಯಾಗಿರಬೇಕು ಎಂಬ ವಿಚಾರ ಹೊಳೆಯಿತು. ಮಾಧ್ಯಮಗಳಲ್ಲೂ ಆ ಒಂದು ಮೂಳೆ ಸುದ್ದಿಯಾಯಿತು. ಅದರ ಸುತ್ತ ಊಹಾಪೋಹಗಳೂ ಹುಟ್ಟಿಕೊಂಡವು. ಮೂಳೆಯನ್ನು ಜೋಪಾನವಾಗಿಟ್ಟು ಪರೀಕ್ಷೆಗೆ ಕಳುಹಿಸಲಾಯಿತು. ಅಂತಿಮವಾಗಿ ಅದು ಅದು ದನದ ಮೂಳೆ ಎಂಬ ವರದಿ ಬಂತು. ಎಲ್ಲರೂ ಪೆಚ್ಚು.
ವಿಜಯೇಂದ್ರ ಪುರೋಹಿತನಾ? ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ
-ಶ್ರೀಕಾಂತ್ ಎನ್. ಗೌಡಸಂದ್ರ
-ವಸಂತಕುಮಾರ್ ಕತಗಾಲ