Asianet Suvarna News Asianet Suvarna News

ತಾಕತ್ ಇದ್ರೆ ಪ್ರಕರಣ ದಾಖಲಿಸಿ: ರೇಣುಕಾಚಾರ್ಯ ಬಹಿರಂಗ ಸವಾಲು

* ಕೋವಿಡ್​​ ಕೇರ್​ ಸೆಂಟರ್​ನಲ್ಲಿ ಹೋಮ-ಹವನ ಪ್ರಕರಣ
* ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು
* ಮಾಜಿ ಶಾಸಕ ಶಾಂತನಗೌಡಗೆ  ರೇಣುಕಾಚಾರ್ಯ ಸವಾಲು

renukacharya Hits Out at Ex MLA shantana-gowda over pooja in covid center rbj
Author
Bengaluru, First Published Jun 13, 2021, 7:58 PM IST

ದಾವಣಗೆರೆ, (ಜೂನ್.13): ಕೋವಿಡ್​​ ಕೇರ್​ ಸೆಂಟರ್​ನಲ್ಲಿ ಹೋಮ ಮಾಡಿದ ವಿಚಾರವಾಗಿ ಮಾಜಿ ಶಾಸಕ ಶಾಂತನಗೌಡಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. 

ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಅಧಿಕಾರಗಳ ಮೇಲೆ ಒತ್ತಡ ಏರಿ ನನ್ನ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಜಿ ಶಾಸಕರು ಮಾಡುತ್ತಿದ್ದಾರೆ. ನಾನು ಬಂಡೆ ಇದ್ದಂತೆ, ಇಂತಹ ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ನನ್ನ ಮೇಲೆ ಎಷ್ಟು ಕೇಸ್ ಹಾಕಿಸುತ್ತೀರಿ ಹಾಕಿ ಎಂದು ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ರಸಮಂಜರಿ, ರೇಣುಕಾಚಾರ್ಯ ಮಸ್ತ್ ಡ್ಯಾನ್ಸ್‌

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ನನ್ನ ಕುಟುಂಬದ ಒಳಿತಿಗಾಗಿ ನಾನು ಹೋಮ ಮಾಡಿಸಿಲ್ಲ. ಅವಳಿ ತಾಲೂಕಿನ ಒಳಿತಿಗಾಗಿ ಹೋಮ ಮಾಡಿಸಿದ್ದೇನೆ. ಕೊವಿಡ್ ಕೇರ್ ಸೆಂಟರ್​ನಲ್ಲಿ ಮೋಜು ಮಸ್ತಿ ಮಾಡಲು ನಾನು ವಾಸ್ತವ್ಯ ಮಾಡಿಲ್ಲ. ಇದ್ದರೂ ಇಲ್ಲೇ ಮಣ್ಣಾದರೂ ಇಲ್ಲೇ ಎಂದು ಕೋವಿಡ್ ಸೋಂಕಿತರ ಜತೆ ಉಳಿದುಕೊಂಡಿದ್ದೇನೆ ಎಂದರು.

 ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೇಣುಕಾಚಾರ್ಯ ಅವರು ಹೋಮ-ಹವನ ಮಾಡಿಸಿದ್ದರು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಶೀಲ್ದಾರ್ ರೇಣುಕಾಚಾರ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.

ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹೋಮ ಹಾಗು ನನ್ನ ಜನತೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ಅರಬಗಟ್ಟೆ ಕೊವಿಡ್ ಕೇರ್ ಸೆಂಟರ್ ನಲ್ಲಿ ನಡೆಸಲಾಗಿದ್ದರು, ಬಳಿಕಮದ್ಯಾಹ್ನ ಎಲ್ಲಾ ಕೊವಿಡ್ ಸೋಂಕಿತ ಬಂಧುಗಳಿಗೆ ಹಾಗು ಸಿಬ್ಬಂದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದರು,

Follow Us:
Download App:
  • android
  • ios