Asianet Suvarna News

ನಾನು ಸಹಿ ಸಂಗ್ರಹ ಮಾಡಿದ್ದು ಸತ್ಯ : ಒಪ್ಪಿಕೊಂಡ ರೇಣುಕಾಚಾರ‍್ಯ

  • ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ
  • ಪಕ್ಷದ ವರಿಷ್ಠರು ಹೇಳಿದ್ದಕ್ಕೆ ಸುಮ್ಮನಿದ್ದೇವಷ್ಟೆ
  •  ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ  ಹೇಳಿಕೆ
Renukacharya Agreed About signature campaign snr
Author
Bengaluru, First Published Jun 17, 2021, 7:24 AM IST
  • Facebook
  • Twitter
  • Whatsapp

ದಾವಣಗೆರೆ (ಜೂ.17): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಮುಖ್ಯಮಂತ್ರಿ, ಪಕ್ಷದ ವರಿಷ್ಠರು ಹೇಳಿದ್ದಕ್ಕೆ ಸುಮ್ಮನಿದ್ದೇವಷ್ಟೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಈಗಾಗಲೇ ಕೆಲವರು ಸೂಟು, ಬೂಟು ಹೊಲಿಸಿಕೊಂಡು, ಮುಖ್ಯಮಂತ್ರಿ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ. ಅಂಥವರು ತಮ್ಮ ಕ್ಷೇತ್ರಗಳ ಜಾತ್ರೆಗಳಲ್ಲಿ ಸೂಟು, ಬೂಟು ಹಾಕಿಕೊಳ್ಳಲಿ. ಧಾರವಾಡ ಹಾಗೂ ವಿಜಯಪುರ ಶಾಸಕರು ಹೀಗೆ ತಿರುಕನ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ. ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನನಗೆ ಸಮಯ ನೀಡಿದ್ದಾರೆ. ಎಲ್ಲಾ ಶಾಸಕರು ಒಟ್ಟಾಗಿ ರಾಜ್ಯ ಉಸ್ತುವಾರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸಂಚಲನ: ಉಸ್ತುವಾರಿಗಳ ಜೊತೆ ಮಾತನಾಡಲು 10 ಶಾಸಕರಿಗೆ ಅನುಮತಿ ..

ಯಡಿಯೂರಪ್ಪ ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ ಎಂದರು. ಜತೆಗೆ, ಕೆಲ ಸಚಿವರ ಕಾರ್ಯ ವೈಖರಿ ಬಗ್ಗೆ ಯಾವುದೇ ದೂರುಗಳನ್ನು ಅರುಣ್‌ ಸಿಂಗ್‌ರಿಗೆ ನೀಡುವ ಉದ್ದೇಶ ಇಲ್ಲ ಎಂದು ತಿಳಿಸಿದರು.

ಯತ್ನಾಳ್‌ರಿಂದ ಆಮಿಷ- ವಿಜಯಪುರ ಶಾಸಕ ಎಲ್ಲರಿಗೂ ಕರೆ ಮಾಡಿ, ತಾನೇ ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಈಗ ನಮ್ಮ ಜೊತೆಗಿದ್ದರೆ ಸಚಿವನಾಗಿ ಮಾಡುವ ಆಮಿಷವೊಡ್ಡುತ್ತಿದ್ದಾರೆಂದು ಯತ್ನಾಳ್‌ ವಿರುದ್ಧ ರೇಣುಕಾಚಾರ‍್ಯ ಗಂಭೀರ ಆರೋಪ ಮಾಡಿದ್ದಾರೆ.

Follow Us:
Download App:
  • android
  • ios