Karnataka Politics: 'ರೆಡ್ಡಿ ಬ್ರದರ್ ಜೊತೆಗೆ ಇದ್ರೇ ಸೋಲೇ ಇಲ್ವಂತೆ'
* ರೆಡ್ಡಿ ಸಹೋದರರು ಜೊತೆಗಿದ್ದಾಗಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದು
* ಜನಾರ್ದನ ರೆಡ್ಡಿ ಬಿಜೆಪಿ ಸೇರಲು ಗ್ರಿನ್ ಸಿಗ್ನಲ್ ಸಿಕ್ತಿಲ್ಲ
* ಸದ್ಯ ಬಳ್ಳಾರಿಯಲ್ಲಿ ಬಿಜೆಪಿ ಸಧೃಡ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಏ.11): ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಬಿಜೆಪಿ (2008) ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಎಷ್ಟು ಶ್ರಮ ವಹಿಸಿದ್ರೋ ಹೆಚ್ಚು ಕಡಿಮೆ 2008ರಲ್ಲಿ ಬಿಜೆಪಿ ಸರ್ಕಾರ ರಚನೆ ವೇಳೆ ಆರ್ಥಿಕ ಮತ್ತು ಚಾಣಾಕ್ಷತನದಲ್ಲಿ ರೆಡ್ಡಿ ಸಹೋದರರು(Reddy Brothers) ಅಷ್ಟೇ ಶ್ರಮ ಪಟ್ಟಿದ್ದು, ಇದೀಗ ಇತಿಹಾಸ.
ಅಕ್ರಮ ಗಣಿಗಾರಿಕೆ ಹಿನ್ನೆಲೆ ಜನಾರ್ದನ ರೆಡ್ಡಿ (Janardhana Reddy) ಜೈಲು ಪಾಲದ ಬಳಿಕ ರಾಜ್ಯದಲ್ಲಿ ಬಿಜೆಪಿ ಮುಗ್ಗರಿಸಿತ್ತಲ್ಲದೇ ರೆಡ್ಡಿ ಸಹೋದರರು ಮತ್ತು ರಾಮುಲು ಪಾಳ್ಯ ರಾಜಕೀಯ(Politics) ಅಸ್ತಿತ್ವ ಕಳೆದುಕೊಂಡಿದ್ರು.. 2018ರ ಚುನಾವಣೆಯಲ್ಲಿ(Election) ಬಹುತೇಕ ಒಂದಾದ್ರೂ ಎನ್ನಲಾಗ್ತಿದ್ರೂ ಬಿಜೆಪಿ(BJP) ಜನಾರ್ದನ ರೆಡ್ಡಿ ಅವರನ್ನು ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ. ಹೀಗಾಗಿ ರೆಡ್ಡಿ ಸಹೋದರರು ಒಟ್ಟಾಗಿ ಇಲ್ಲದೇ ಇದ್ರೇ ರಾಜಕೀಯ ಮತ್ತು ಬಿಜೆಪಿಯಲ್ಲಿ ಬೆಲೆ ಸಿಗೋದಿಲ್ಲವೆಂದು ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮತ್ತೆ ರಾಜ್ಯ ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಎಂಟ್ರಿ, ಅಧಿಕೃತ ಘೋಷಣೆ
ಹುಟ್ಟು ಹಬ್ಬದ ನೆಪ ಒಗ್ಗಟ್ಟು ಪ್ರದರ್ಶನ
ರೆಡ್ಡಿ ಸಹೋದರರ ಹಿರಿಯಣ್ಣ ಕರುಣಾಕರ ರೆಡ್ಡಿ(Karunakara Reddy) ಹುಟ್ಟು ಹಬ್ಬದ ನಿಮಿತ್ತ ಮತ್ತೊಮ್ಮೆ ಮೂವರು ರೆಡ್ಡಿ ಸಹೋದರರು ಶ್ರೀ ರಾಮುಲು(Sriramulu) ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ 2023 ಚುನಾವಣೆಗೆ ಸಿದ್ಧ ಎನ್ನುವ ಸಂದೇಶ ನೀಡಿದ್ದಾರೆ. 2008 ರ ಚುನಾವಣೆಯಲ್ಲಿ ಹರಪನಹಳ್ಳಿ ಸೇರಿದಂತೆ ಅವಳಿ ಜಿಲ್ಲೆಯ ಹತ್ತು ಕ್ಷೇತ್ರದ ಪೈಕಿ 9 ಕ್ಷೇತ್ರದಲ್ಲಿ ಗೆದ್ದಿದ್ರು. ಆದ್ರೇ 2013 ಶ್ರೀರಾಮುಲು ಬಿಎಸ್ಆರ್ ಪಕ್ಷ ಹುಟ್ಟು ಹಾಕಿದ ಹಿನ್ನೆಲೆ ಬಿಜೆಪಿ ಸಂಪೂರ್ಣ ನೆಲಕಚ್ಚಿ ಒಂದು ಸ್ಥಾನಕ್ಕೆ ಇಳಿದಿತ್ತು. 2018 ಮತ್ತು 2019ರ ಉಪಚುನಾವಣೆ ಸೇರಿದಂತೆ ಬಿಜೆಪಿ ಜಿಲ್ಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಐದಕ್ಕೆ ಏರಿದೆ. ಹೀಗಾಗಿ ಒಗ್ಗಟ್ಟು ಪ್ರದರ್ಶನ ಕಾಣದೇ ಇದ್ರೇ ರಾಜಕೀಯ ಹಿನ್ನಡೆ ಅನುಭವಿಸಬೇಕಾಗ್ತದೆ ಎಂದು ಇದೀಗ ಸಿಎಂ ಬೊಮ್ಮಾಯಿ(Basavaraj Bommai) ಸಮ್ಮುಖದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ..
ಜನಾರ್ದನ ರೆಡ್ಡಿ ಜೈಲಿಗೆ ಹೋದಾಗ ಒಡೆದ ಕುಟುಂಬ
ಆರಂಭದಿಂದ ರಾಜಕೀಯ ಒಟ್ಟಾಗಿ ಆರಂಭಿಸಿದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಮೊದಲು ಸೋಲಿನ ರುಚಿ ಕಂಡರು. 2004ರಿಂದ ಬಳ್ಳಾರಿಯಲ್ಲಿ(Ballari) ನಿಧಾನವಾಗಿ ಬಿಜೆಪಿ ಅರಳಿಸಲು ಯತ್ನಿಸಿ ಶ್ರೀರಾಮುಲು ಮೊದಲ ಬಾರಿ ವಿಧಾನಸಭೆ ಮತ್ತು ಕರುಣಾಕರ ರೆಡ್ಡಿ ಲೋಕಸಭೆಗೆ ಎಂಟ್ರಿಕೊಟ್ಟರು. ಆದಾದ ಬಳಿಕ 2008ರಲ್ಕಿ ರಾಜಕೀಯ ಉತ್ತುಂಗಕ್ಕೇರಿ 2013 ರಲ್ಲಿ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಸೋಲು ಮೂಲಕ, ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ಚುನಾವಣೆಗೆ ಸ್ಪರ್ಧೆ ಮಾಡದೇ ಮತ್ತು ಶ್ರೀರಾಮುಲು ಹೊಸ ಪಕ್ಷ ಕಟ್ಟಿ ತಾವಷ್ಟೇ ಗೆದ್ರೂ ರಾಜಕೀಯ ಹಿನ್ನಡೆ ಅನುಭವಿಸಿದ್ರು. ಅಕ್ರಮ ಗಣಿಗಾರಿಕೆ(Illegal Mining) ಹಿನ್ನೆಲೆ ಜನಾರ್ದನ ರೆಡ್ಡಿ ಜೈಲಿಗೆ ಹೋದ್ರೂ ಒಮ್ಮೆ ಸೌಜನ್ಯಕ್ಕೂ ಕರುಣಾಕರ ರೆಡ್ಡಿ ಜೈಲಿಗೆ ಹೋಗಿ ಮಾತನಾಡಿಸಿರಲಿಲ್ಲ . ಜೈಲಿಂದ ಹೊರ ಬರೋವರೆಗೂ ಕೇವಲ ಸೋಮಶೇಖರ್ ರೆಡ್ಡಿ ಓಡಾಡಿದ್ರು. ಹೀಗಾಗಿ ರಾಜ್ಯವೇ(Karnataka) ನಿಬ್ಬೆರಗಾಗಿ ನೋಡುವಂತೆ ಜನಾರ್ದನ ರೆಡ್ಡಿ ಮಗಳ ಮದುವೆ ಮಾಡಿದ್ರು ಕರುಣಾಕರ ರೆಡ್ಡಿ ಗೈರು ಎದ್ದು ಕಾಣುತ್ತಿತ್ತು. ಸಾಕಷ್ಟು ಏಳುಬೀಳಿನ ನಂತರ ಇದೀಗ ಒಂದಾಗಿದ್ದಾರೆ..
ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟ:'ಕೈ' ಪಾಳಯದಲ್ಲಿ ಎಲ್ಲವೂ ಸರಿ ಇದ್ಯಾ?
ಜನಾರ್ದನ ರೆಡ್ಡಿಗೆ ಸಕ್ರಿಯ ರಾಜಕೀಯಕ್ಕೆ ಸಿಕ್ಕಿಲ್ಲ ಗ್ರಿನ್ ಸಿಗ್ನಲ್
ಕರುಣಾಕರ ರೆಡ್ಡಿಯನ್ನು ಮಂತ್ರಿ ಮಾಡಿ ಎಂದು ಜನಾರ್ದನ ರೆಡ್ಡಿ ವೇದಿಕೆಯ ಮೇಲೆ ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡಿದ್ರು. 2023 ರ ಚುನಾವಣೆಯಲ್ಲಿ ಬಿಜೆಪಿ 150 ಸೀಟ್ ಗೆಲ್ಲಿಸಲು ನಾನು ಶ್ರಮಿಸುವೆ ಎಂದ್ರು. ಆದ್ರೇ ಜನಾರ್ದನ ರೆಡ್ಡಿ ರಾಜಕೀಯ ಸಕ್ರಿಯವಾಗಲು ಬಿಜೆಪಿ ಹೈಕಮೆಂಡ್ ಯಾವುದೇ ಗ್ರಿನ್ ಸಿಗ್ನಲ್ ನೀಡಿಲ್ಲವೆಂದು ಪರೋಕ್ಷವಾಗಿ ಸಿಎಂ ಬೊಮ್ಮಯಿ ಹೇಳಿದ್ರು. ರಾಜಕೀಯ ಸಕ್ರಿಯವಾಗಲು ಜನಾರ್ದನ ರೆಡ್ಡಿ ಸಾಕಷ್ಟು ಕಸತ್ತು ಮಾಡ್ತಿದ್ರು ಬಿಜೆಪಿ ಮಾತ್ರ ಇವರ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.
ಸದ್ಯ ಬಳ್ಳಾರಿಯಲ್ಲಿ ಬಿಜೆಪಿ ಸಧೃಡ
ಒಡೆದ ಮನೆಯಂತಾಗಿರೋ ಬಳ್ಳಾರಿ ಕಾಂಗ್ರೆಸ್(Congress) ಪಕ್ಷವನ್ನು ನೋಡೋದಾದ್ರೇ ಸದ್ಯ ರೆಡ್ಡಿ ಸಹೋದರರು ಶ್ರೀ ರಾಮುಲು, ಆನಂದ ಸಿಂಗ್(Anand Singh) ಎಲ್ಲರೂ ಒಟ್ಟಾಗಿ ಇರೋದ್ರಿಂದ ಬಿಜೆಪಿ ಮೇಲ್ನೋಟಕ್ಕೆ ಸ್ಟ್ರಾಂಗ್ ಆಗಿದೆ. ಅದರಲ್ಲೂ ಇದೀಗ ಹೊಸಪೇಟೆಯಲ್ಲಿ ಏಪ್ರಿಲ್ 16 ಮತ್ತು 17 ರಾಜ್ಯ ಕಾರ್ಯಕಾರಣಿ ಇರೋದ್ರಿಂದ ಈ ಭಾಗದಲ್ಲಿ ಮತ್ತೊಮ್ಮೆ ಬಿಜೆಪಿಗೆ ಹೆಚ್ಚು ಬಲ ಬರಲಿದೆ.