ನವದೆಹಲಿ[ಡಿ.31]: ಕಳೆದ ವರ್ಷ ಅಂದರೆ 2018ರ ಡಿಸೆಂಬರ್ ನಿಂದ 2019ರ ಡಿಸೆಂಬರ್ ವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಬರೋಬ್ಬರಿ 6 ರಾಜ್ಯಗಳನ್ನು ಕಳೆದುಕೊಂಡಿದೆ. ಹೀಗಿದ್ದರೂ ಇದೇ ವೇಳೆ ನಡೆದ ಲೋಕಸಭಾ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಗೆಲುವು ಶಾಧಿಸುವ ಮೂಲಕ ಪ್ರಚಂಡ ಬಹುಮತ ಪಡೆದು ಸರ್ಕಾರ ರಚಿಸಿದೆ. 

ಇನ್ನು ಇದೇ ಮೊದಲ ಬಾರಿ ಬಿಜೆಪಿಗೆ ಸ್ಥಾಯಿ ಅಧ್ಯಕ್ಷರ ಕೊರತೆ ಕಾಡಿದೆ. ಸದ್ಯ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆದಿದ್ದರೂ, ಜೆ. ಪಿ. ನಾಡ್ಡಾರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಇತ್ತ ಅಮಿತ್ ಶಾ ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರೂ ಗೃಹ ಸಚಿವರಾದ ಬಳಿಕ ಅವರಿಗೆ ಪಕ್ಷ ಸಂಘಟನೆ ಒತ್ತು ನೀಡಲಾಗುತ್ತಿಲ್ಲ. ಹಾಗಾದ್ರೆ 1 ವರ್ಷದಲ್ಲಿ ಬಿಜೆಪಿ ಕೈ ಜಾರಿದ ರಾಜ್ಯಗಳಾವುವು? ಇಲ್ಲಿದೆ ವಿವರ

ರಾಜಸ್ಥಾನ

ರಾಜಸ್ಥಾನದಲ್ಲಿ ಕಾಂಗ್ರೆಸ್ ವಸುಂಧರಾ ರಾಜೆ ಸರ್ಕಾರವನ್ನು ಸೋಲಿಸಿ ತನ್ನ ಸರ್ಕಾರ ರಚಿಸಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ವಸುಂಧರಾ ರಾಜೆ ಸರ್ಕಾರ ಸಂಪೂರ್ಣವಾಗಿ ಸೋಲಲಿದೆ ಎಂದು ಹೇಳಿದ್ದವು. ಹೀಗಿದ್ದರೂ ಬಿಜೆಪಿ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇತ್ತ ಕಾಂಗ್ರೆಸ್ 99 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಸದ್ಯ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಹೀಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತ್ತು. ಇದಾದ ಬಳಿಕ ಅಶೋಕ್ ಗೆಹ್ಲೋಟ್ ನಾಯಕತ್ವದ ಬಗ್ಗೆ ಹಲವಾರು ಮಾತುಗಳು ಕೇಳಿ ಬಂದಿದ್ದವು.

ರಾಜಸ್ಥಾನ ಚುನಾವಣೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶ

15 ವರ್ಷದಿಂದ ಬಿಜೆಪಿ ಭದ್ರಕೋಟೆಯಂತಿದ್ದ ಮಧ್ಯಪ್ರದೇಶ ಕಾಂಗ್ರೆಸ್ ಕೈ ಸೇರಿತು. ಕಮಲ ಪಾಳಯವನ್ನು ಮಣಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಸರ್ಕಾರ ರಚಿಸಿತು. ಕಮಲನಾಥ್ ಮುಖ್ಯಮಂತ್ರಿಯಾದರೆ, ಜ್ಯೋತಿರಾದಿತ್ಯ ಸಿಂಧಿಯಾ ಡಿಸಿಎಂ ಆದರು.

ಮಧ್ಯಪ್ರದೇಶ ಚುನಾವಣೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಛತ್ತೀಸ್ ಗಢ

ಈ ರಾಜ್ಯದಲ್ಲಿ ತಾವು ಅಧಿಕಾರ ಕಳೆದುಕೊಳ್ಳಬಹುದೆಂದು ಬಿಜೆಪಿಗೆ ಸಣ್ಣ ಊಹೆಯೂ ಇರಲಿಲ್ಲ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ ಪೈಕಿ ಕಾಂಗ್ರೆಸ್ ಕ್ಷೇತ್ರ 68 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಸ್ಪಷ್ಟ ಬಹುಮತ ಸಾಧಿಸಿದ ಕಾಂಗ್ರೆಸ್ ಸರ್ಕಾರ ರಚಿಸಿತು. ಇತ್ತ ಬಿಜೆಪಿ ಕೇವಲ 15 ಸ್ಥಾನಗಳಲ್ಲಷ್ಟೇ ಗೆಲುವು ಕಂಡಿತು. ಇಲ್ಲಿ ಬಿಜೆಪಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿತ್ತು.

ಛತ್ತೀಸ್‌ಗಢ ಚುನಾವಣೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರ

ಕೆಲ ತಿಂಗಳ ಹಿಂದಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸುಲಭವಾಗಿ ಬಹುಮತ ಪಡೆದಿತ್ತು. ಆದರೆ ಸಿಎಂ ಸ್ಥಾನಕ್ಕೆಸಂಬಂಧಿಸಿದಂತೆ ಉಂಟಾದ ಭಿನ್ನಮತದಿಂದ ಶಿವಸೇನೆ, ಕಾಂಗ್ರೆಸ್ ಹಾಗೂ NCP ಜೊತೆ ಕೈ ಜೋಡಿಸಿ ಸರ್ಕಾರ ರಚಿಸಿತು. ಹೀಗೆ ಈ ರಾಜ್ಯವೂ ಬಿಜೆಪಿ ಕೈ ಜಾರಿತು.

ಮಹಾರಾಷ್ಟ್ರ ಚುನಾವಣೆ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಮ್ಮು- ಕಾಶ್ಮೀರ

ಈ ರಾಜ್ಯದಲ್ಲಿ ಬಿಜೆಪಿ ತನ್ನ ವಿಚಾರಧಾರೆಯನ್ನು ಬದಿಗಿಟ್ಟು PDP ಜೊತೆ ಕೈ ಜೋಡಿಸಿ ಸರ್ಕಾರ ರಚಿಸಿತ್ತು. ಆದರೆ ಇದಾದ ಬಳಿಕ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಉಂಟಾದ ಭಿನ್ನಮತದಿಂದ ಬಿಜೆಪಿ ಮಹಬೂಬಾ ಮುಫ್ತಿಗೆ ಕೊಟ್ಟ ಬೆಂಬಲ ಹಿಂಪಡೆಯಿತು. ಇನ್ನು ಕೇಂದ್ರದಲ್ಲಿ ಎರಡನೇ ಬಾರಿಗೆ ಧಿಕಾರ ಪಡೆದುಕೊಂಡ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತು. ಅಲ್ಲದೇ ಜಮ್ಮು ಕಾಶ್ಮೀರ ಹಾಗೂ ಲಡಾಖ್ ನ್ನು ಬೇರ್ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸಿತು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ