ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಮೋಹಕ ತಾರೆ ರಮ್ಯಾ, ಇದೀಗ ಮತ್ತೆ ರಾಜಕೀಯದ ಕೆಲಸಗಳನ್ನು ಆರಂಭ ಮಾಡುವ ಸೂಚನೆ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಕುರಿತಾಗಿ ಅವರು ಮಾಡಿರುವ ಟ್ವೀಟ್‌ ಈ ಅನುಮಾನಕ್ಕೆ ಕಾರಣವಾಗಿದೆ. 

ಬೆಂಗಳೂರು (ಅ.25): ಒಂದು ಟೈಮ್‌ಅಲ್ಲಿ ಕಂಡಕಂಡಲ್ಲಿ, ನರೇಂದ್ರ ಮೋದಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ, ಅದ್ಯಾಕೋ ಏನೋ ಒಂದು ಹಂತದಲ್ಲಿ ಫುಲ್‌ ಸೈಲೆಂಟ್‌ ಆಗಿ ಹೋದರು. ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾದ ಉಸ್ತುವಾರಿಯಲ್ಲಿ ಪ್ರಧಾನ ಪಾತ್ರದಲ್ಲಿ ರಮ್ಯಾರನ್ನು ಆ ಸ್ಥಾನದಿಂದ ಕೆಳಗಿಳಿಸಿದ್ದೇ ಇದಕ್ಕೆ ಕಾರಣ ಎನ್ನಲಾಯ್ತು. ಬಳಿಕ ಕೆಲವೊಂದು ದಿನಗಳ ಕಾಲ ಅಜ್ಞಾತವಾಸದಲ್ಲಿದ್ದ ರಮ್ಯಾ ಬಳಿಕ, ದಿಗ್ಗನೆ ಎದ್ದು ಬಂದು ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಚಿತ್ರಗಳನ್ನು ನೋಡೋದು, ಅದರ ಪ್ರಚಾರ, ವಿವಿಧ ಟಿವಿ ಕಾರ್ಯಕ್ರಗಳಿಗೆ ಅತಿಥಿಯಾಗಿ ಹೋಗೋದು ಈ ಎಲ್ಲಾ ಕೆಲಸಗಳನ್ನು ಮಾಡುತ್ತ ಸುದ್ದಿಯಲ್ಲಿದ್ದರು. ಆದರೆ, ತಮ್ಮ ಟ್ವಿಟರ್‌ ಖಾತೆಯಲ್ಲಿ ಕಾಂಗ್ರೆಸ್‌ ಕುರಿತಾಗಿ ಮಾಡುವ ಟ್ವೀಟ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡಿದ್ದರು. ಆದರೆ, ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿ ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಬಳಿಕ, ರಾಜಕೀಯದಲ್ಲಿ ಮತ್ತೆ ಆಸಕ್ತಿ ಹುಟ್ಟಿಕೊಂಡಂತೆ ಕಾಣುತ್ತಿದೆ. ಪಕ್ಷದ ಕೆಲವು ಮುಖಂಡರ ಜೊತೆ ಅಸಮಾಧಾನವನ್ನು ಎಲ್ಲಾ ಬದಿಗಿಟ್ಟು ಮತ್ತೊಮ್ಮೆ 'ಪಾಲಿಟಿಕ್ಸ್‌' ಪ್ರಯತ್ನ ಆರಂಭಿಸಿದ್ದಾರೆ.

Scroll to load tweet…

ಭಾರತ್‌ ಜೋಡೋ ಯಾತ್ರೆಯಲ್ಲಿ (Bharath Jodo Yatra) ಹೆಜ್ಜೆ ಹಾಕಿದ ಬಳಿಕ, ಮಂಗಳವಾರ ರಮ್ಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಸೋನಿಯಾ ಗಾಂಧಿ (Sonia Gandhi) ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. 'ಸೋನಿಯಾ ಜೀ ಅವರು ಇಟಾಲಿಯನ್‌ ಸಂಜಾತರಾಗಿರಬಹುದು. ಆದರೆ, ಬಹಳಷ್ಟು ಭಾರತೀಯರಿಗಿಂತ (Indian) ಅವರು ತುಂಬಾ ಭಾರತೀಯರಾಗಿದ್ದಾರೆ. ಅದಂತೂ ಸತ್ಯ' ಎಂದು ಟ್ವೀಟ್‌ ಮಾಡಿದ್ದಾರೆ. ರಮ್ಯಾ ಮಾಡಿರುವ ಈ ಟ್ವೀಟ್‌ ಈಗಾಗಲೇ ಬಹುತೇಕ ಎಲ್ಲರ ಗಮನಸೆಳೆದಿದೆ. ಈ ವೇಳೆಗೆ ಅಂದಾಜು 820 ಬಾರಿ ರೀಟ್ವೀಟ್‌ ಆಗಿದ್ದರೆ, 202 ಬಾರಿ ಕೋಟ್‌ ಟ್ವೀಟ್‌ ಆಗಿದೆ.ಆರೂವರೆ ಸಾವಿರ ಮಂದಿ ಈಗಾಗಲೇ ಲೈಕ್‌ ಕೂಡ ಮಾಡಿದ್ದಾರೆ. ಅಲ್ಲದೆ, ಒಂದು ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿವೆ.

ಇನ್ನು ರಮ್ಯಾ ಮಾಡಿರುವ ಟ್ವೀಟ್‌ ತರೇಹವಾರಿ ಕಾಮೆಂಟ್‌ಗಳು ಬಂದಿವೆ. ಕೆಲವರು, ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್‌ (Rishi Sunak) ಪ್ರಧಾನಿಯಾಗಿರುವ ವಿಚಾರದಲ್ಲಿ ರಮ್ಯಾ ಈ ರೀತಿ ಟ್ವೀಟ್‌ ಮಾಡಿದ್ದಾರೆ ಎಂದು ಅರ್ಥೈಸಿದ್ದರೆ, ಇನ್ನೂ ಕೆಲವರಿಗೆ ಯಾವ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ ಎನ್ನುವುದೇ ಅರ್ಥವಾಗಿಲ್ಲ. ಕೆಲವರು ರಾಜಕೀಯದಲ್ಲಿ (Politics) ರಮ್ಯಾ ಅವರ ಮತ್ತೊಂದು ಇನ್ನಿಂಗ್ಸ್‌ ಆರಂಭವಾಗುವ ಸೂಚನೆ ಇದರಂತೆ ಕಾಣುತ್ತಿದೆ ಎಂದಿದ್ದಾರೆ.

'ನೀನು ಸದ್ಯ ತೆಪ್ಪಗೆ ಇದ್ರೆ ಸಾಕು..' ಎಂದು ಹರ್ಷ ಎನ್ನುವ ವ್ಯಕ್ತಿ ಟ್ವೀಟ್‌ ಮಾಡಿದ್ದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್‌ ಕುಮಾರ್‌ ಎನ್ನುವ ವ್ಯಕ್ತಿ, 'ಹೊಸ ಆಟ ಶುರು ಮಾಡ್ಕೊಂಡಿದ್ದಾಳೆ' ಎಂದು ಬರೆದಿದ್ದಾರೆ. ''ಎಲ್ಲಾರು ಮಾಡುವದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ .. ರಮ್ಯಮ್ಮ ಸ್ಪಂದಿಸುವದು ಪಪ್ಪುಗಾಗಿ , ವೋಟಿಗಾಗಿ ..' ಎಂದು ಗಣಪತಿ ಹೆಗಡೆ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಅವರು ಖಂಡಿತವಾಗಿಯೂ ಹೆಚ್ಚಿನ ಭಾರತೀಯರಿಗಿಂತ ಹೆಚ್ಚಿನ ಭಾರತೀಯ ಕರೆನ್ಸಿ ನೋಟುಗಳನ್ನು ಹೊಂದಿದ್ದಾರೆ. ಅದು ಲೆಕ್ಕಕ್ಕೆ ಬರುತ್ತದೆಯೇ?' ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ರಮ್ಯಾ ಕೆನ್ನೆಗೆ ಹೊಡೆದು ಹಗ್ ಮಾಡಿದ ಡಿಕೆಶಿ

ಮಣಿಪುರ ಕಾಂಗ್ರೆಸ್‌ನ ಕಾರ್ಯದರ್ಶಿ ಶಾ ನವಾಜ್‌ ಖಾನ್‌ ಇದಕ್ಕೆ ಟ್ವೀಟ್‌ ಮಾಡಿದ್ದು, 'ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ, ಅವರು ತಮ್ಮ ಇಡೀ ಜೀವನವನ್ನು ದೇಶದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ. 'ಭಾರತೀಯ ಮುಸ್ಲಿಮರಂತೆ ಬಾಟ್ಲಾ ಹೌಸ್ ಭಯೋತ್ಪಾದಕರಿಗಾಗಿ ಆಕೆ ಅತ್ತಿದ್ದಳು. ಆದ್ದರಿಂದ ಹೌದು, ಅವರು ಹೆಚ್ಚು ಭಾರತೀಯರು' ಎಂದು ಅಧಿನಯ ಎನ್ನುವ ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ. 'ನಾನು ನಿಮ್ಮ ಅಭಿಮಾನಿ. ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ. ಆದರೆ, ಈ ವಿಚಾರದಲ್ಲಿ ಮಾತ್ರ ಇಲ್ಲಿಗೆ ನಿಲ್ಲಿಸಿ' ಎಂದು ಅವರ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. 'ಇದೇ ನ್ಯಾಯದಲ್ಲಿ ಹೋಗೋದಾದ್ರೆ ನೋರಾ ಫತೇಹಿ ಕೂಡ ಇಂಡಿಯನ್‌' ಎಂದು ಪುನೀತ್‌ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ನಿಮ್ಮ ಬಾಸ್‌ನಿಂದ ನೀವು ಅನಿರೀಕ್ಷಿತವಾಗಿ ಬೋನಸ್ ಪಡೆದಾಗ..ಮಾತ್ರ ಇಂಥ ಟ್ವೀಟ್‌ ಬರುತ್ತದೆ' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ. ಇವೆಲ್ಲದರ ನಡುವೆ ಬಹುತೇಕರು ಭಾರತೀಯ ಪೌರತ್ವ ಪಡೆಯಲು ಸೋನಿಯಾ ಗಾಂಧಿ 15 ವರ್ಷ ಕಾದಿದ್ದೇಕೆ ಎಂದು ರಮ್ಯಾ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ರಾಹುಲ್ ಗಾಂಧಿ ಜೊತೆ ಹೆಜ್ಜೆ!

'ಹೆತ್ತವರಿಗೆ ಹೆಗ್ಗಣ ಮುದ್ದು, ಕಾಂಗಿಗಳಿಗೆ ಗಾಂಧಿಗಳೇ ಮದ್ದು..' ಎಂದು ಕಮಲಜ್ಜಿ ಮೊಮ್ಮಗ ಎನ್ನು ಹ್ಯಾಂಡಲ್‌ನಿಂದ ಟ್ವೀಟ್ ದಾಖಲಾಗಿದ್ದರೆ, "ಅಕ್ಕ ಒಂದು ಒಂದು ಸರಿ ಗೀಚುದ್ರೆ , ಭಕ್ತರು ಒಂದು ವಾರ ಬುರ್ನೋಲ್ ಹಚ್ಕೋ ಬೇಕು , ಹಾಗೆ ಗೀಚುತ್ತೆ' ಎಂದು ರೋಹಿತ್‌ ಗೌಡ ಎನ್ನುವವರು ಟ್ವೀಟ್‌ ಮಾಡಿದ್ದಾರೆ.