ಘಟಪ್ರಭಾ[ಡಿ.02]: ‘ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಲುಕೊಡುವ ಗೋವಿನ ಹಾಗೆ, ಮುಖ್ಯಮಂತ್ರಿ ಯಡಿಯೂರಪ್ಪ ಕರ್ಣನ ಹಾಗೆ’

- ಇಂತಹ ಒಂದು ಹೋಲಿಕೆ ಕೊಟ್ಟದ್ದು ಅನರ್ಹ ಶಾಸಕ ಮುನಿರತ್ನ. ಘಟಪ್ರಭಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಮೇಶ್‌ ಯಾರಿಗೂ ಕೆಟ್ಟದ್ದು ಬಯಸದ ವ್ಯಕ್ತಿ. ಅವರನ್ನು ಹಾಲುಕೊಡುವ ಗೋವಿಗೆ ಹೋಲಿಸಬಹುದು. ಯಡಿಯೂರಪ್ಪ ಅವರನ್ನು ಕರ್ಣನಿಗೆ ಹೋಲಿಸಬಹುದು. ಮಾತು ಕೊಟ್ಟಿದ್ದನ್ನು ಉಳಿಸಿಕೊಳ್ಳುತ್ತಾ ಬಂದಿದ್ದಾರೆ ಎಂದು ಹೇಳಿದರು.

ನಮ್ಮ 17 ಮಂದಿಯಲ್ಲಿ ಅತಿ ಹೆಚ್ಚು ಮತ ಪಡೆಯೋದು ರಮೇಶ್‌. ರಮೇಶ ಮೋಸ ಮಾಡೋರಲ್ಲ. ರಾಜ್ಯದ ಉತ್ತಮ ಸಚಿವರಾಗ್ತಾರೆ. ಕ್ಷೇತ್ರಕ್ಕಷ್ಟೇ ಅಲ್ಲದೆ ರಾಜ್ಯಕ್ಕೂ ಅವರ ಸೇವೆ ಬೇಕಾಗಿದೆ ಎಂದರು. ಯಡಿಯೂರಪ್ಪ ಕರ್ಣನಿಗೆ ಸಮಾನ. ಒಮ್ಮೆ ಕೊಟ್ಟಮಾತನ್ನ ಯಡಿಯೂರಪ್ಪ ಉಳಿಸಿಕೊಳ್ತಾರೆ. ಯಡಿಯೂರಪ್ಪನ್ನ ನಂಬಬಹುದು ಅಂತ ಬಂದಿದ್ದೀವಿ. 17 ಮಂದಿಯಲ್ಲಿ ಯಾರೂ ದಡ್ಡರಿಲ್ಲ, ಒಬ್ಬರಿಗೊಬ್ಬರು ಜಾಣರಿದ್ದೇವೆ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.