Asianet Suvarna News Asianet Suvarna News

ಕರ ಸೇವಕರ ಬಂಧನಕ್ಕೂ ರಾಮಮಂದಿರ ಉದ್ಘಾಟನೆಗೂ ಯಾವುದೇ ಸಂಬಂಧ ಇಲ್ಲ: ಸಚಿವ ಭೋಸರಾಜ್ ತಿರುಗೇಟು

ಬಿಜೆಪಿಯಿಂದ ದ್ವೇಷ ರಾಜಕಾರಣ ನಡೆಯುತ್ತಿದೆ ಹೊರತ್ತು ಕಾಂಗ್ರೆಸ್ ನಿಂದ ಅಲ್ಲ ಸಚಿವ ಭೋಸರಾಜ್ ತಿರುಗೇಟು. ಕಾನೂನು ಪ್ರಕ್ರಿಯಿಯೆಗೆ ರಾಜಕಾರಣದ ಬಣ್ಣ ಬಳಿಯಬೇಡಿ ಎಂದ ಸಿಎಂ ಕಾನೂನು ಸಲಹೆಗಾರ ಪೊನ್ನಣ್ನ

Ram Mandir activists not being targeted says  Minister Boseraju gow
Author
First Published Jan 2, 2024, 7:25 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.2): ದ್ವೇಷದ ರಾಜಕಾರಣದಿಂದ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧಿಸಲಾಗುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವುದಕ್ಕೆ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಭೋಸರಾಜ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ದೇಶದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಅವರು ಎಲ್ಲೆಡೆ ಇಡಿ, ಸಿಬಿಐಗಳನ್ನು ಬಳಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಕಾಂಗ್ರೆಸ್ ಯಾವತ್ತೂ ದ್ವೇಷ ರಾಜಕಾರಣ ಮಾಡಿಲ್ಲ. ಕೇಂದ್ರದ ವಿರೋಧ ಪಕ್ಷದ ನಾಯಕರಾಗಿದ್ದಂತಹ ಎಲ್.ಕೆ. ಅಡ್ವಾಣಿ ಅವರನ್ನಾಗಲಿ ಇಲ್ಲವೇ ವಾಜಪೇಯಿ ಅವರನ್ನಾಗಲಿ ಅಥವಾ ಕಮ್ಯುನಿಸ್ಟ್ ಪಕ್ಷಗಳಾಗಿರಬಹುದು. ಎಲ್ಲರನ್ನೂ ಬಹಳ ಗೌರವದಿಂದ ನಡೆಸಿಕೊಳ್ಳಲಾಗಿದೆ. ಕರ ಸೇವಕರನ್ನು ಬಂಧಿಸುತ್ತಿರುವುದಕ್ಕೂ ರಾಮಮಂದಿರ  ಉದ್ಘಾಟನಾ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ಕೊಟ್ಟು ಧರ್ಮ ರಾಜಕಾರಣ ಮಾಡುತ್ತಿದ್ದಾರೆ.

ಅತಿಕ್ರಮಣ ಕೆರೆಗಳನ್ನು ಸರ್ವೆ ಮಾಡಿ ಸರಕಾರಕ್ಕೆ ವರದಿ ಒಪ್ಪಿಸಿದ ಅಧಿಕಾರಿಗಳಿಗೆ ಲೋಕಾ ನ್ಯಾಯಮೂರ್ತಿ ಶಹಬ್ಬಾಸ್ ಗಿರಿ

ಬಿಜೆಪಿಯವರು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಬರ ಪರಿಹಾರ, ಅಥವಾ ಜಿಎಸ್ ಟಿ ಪಾಲಿನ ಬಗ್ಗೆ ಮಾತನಾಡಲ್ಲ. ಕೂಲಿ ಕಾರ್ಮಿಕರಿಗಾಗಿ ಎನ್ಆರ್ ಎಜಿಇ ಯ ಕೆಲಸಕ್ಕೆ ಕೊಡಬೇಕಾಗಿರುವ ಅನುದಾನದ ಬಗ್ಗೆ ಸಂಸದರು ಮಾತನಾಡಲ್ಲ. ಬಿಜೆಪಿಯ 25 ಸಂಸದರು ಇದ್ದಾರೆ ಅವರು ಪ್ರಧಾನಿ ಮೋದಿ ಅವರ ಮುಂದೆ ಬಾಯಿಬಿಚ್ಚುವುದಕ್ಕೆ ಆಗಲ್ಲ. ಅದರೆ ಇಲ್ಲದಿರುವ ಕಥೆಯನ್ನು ಇಡೀ ಮಾತನಾಡುವುದೇ ಬಿಜೆಪಿಯವರ ಕೆಲಸ ಎಂದು ತಿರುಗೇಟು ನೀಡಿದರು. ಆದರೆ ಈ ಸಂದರ್ಭದಲ್ಲಿ ಕರಸೇವಕರನ್ನು ಬಂಧಿಸಿದ್ದು ಸರಿಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪ್ರಕರಣಗಳ ಮುಗಿಸುವುದಕ್ಕೆ ಆ ಸಂದರ್ಭ ಈ ಸಂದರ್ಭ ಅಂತ ಇಲ್ಲ. ಕಾನೂನು ಪ್ರಕ್ರಿಯೆ ನಡೆಯುತ್ತಿರುತ್ತದೆ ಅಷ್ಟೇ. ಅದಕ್ಕೆ ಈಗಾಗಲೇ ಗೃಹಸಚಿವರಾದ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಳೇ ಪ್ರಕರಣಗಳನ್ನು ಕ್ಲಿಯರ್ ಮಾಡುವುದಕ್ಕಾಗಿ ಮಾಡಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಭೋಸರಾಜ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಮಾತನಾಡಿ ಹಳೇ ಪ್ರಕರಣಗಳನ್ನು ಮುಗಿಸುವುದಕ್ಕೆ ಕೋರ್ಟ್ ನಿಂದಲೇ ನಿರ್ದೇಶನವೇ ಇದೆ. ಹೀಗಾಗಿ ಅರೆಸ್ಟ್ ಮಾಡಿ ಕೋರ್ಟಿಗೆ ಪ್ರೆಡ್ಯೂಸ್ ಮಾಡುತ್ತೇವೆ. ಕೋರ್ಟ್ ಅವರನ್ನು ಬಿಡುತ್ತದೆ. ಅದರಿಂದ ಏನೂ ಆಗಲ್ಲ, ಪ್ರಕರಣಗಳಿಗೆ ಒಂದು ಅಂತ್ಯ ಕಾಣಿಸಬೇಕಲ್ಲವೆ. ಆ ಕೆಲಸವನ್ನು ಮಾಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕರಸೇವಕರ ಬಂಧನದ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಕೃಷ್ಣನ ಜನ್ಮಸ್ಥಳದಲ್ಲಿ ದೇಶದ ಪ್ರಪ್ರಥಮ ಬಾಲಕಿಯರ ಸೈನಿಕ ಶಾಲೆ ಲೋಕಾರ್ಪಣೆ

ನಾವು ರಾಮಮಂದಿರದ ಪರವಾಗಿದ್ದೇವೆ. ಮುಖ್ಯಮಂತ್ರಿಯವರು ಅದನ್ನೇ ಹೇಳಿದ್ದಾರೆ, ನಾನು ಅದನ್ನೇ ಹೇಳುತ್ತಿದ್ದೇನೆ. ರಾಮಮಂದಿರ ಉದ್ಘಾಟನೆಗೆ ಶುಭವಾಗಲಿ ಎಂದು ಹೇಳಿದ್ದಾರೆ. ಆದರೆ ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ. ಕಾನೂನು ಬೇರೆ, ರಾಜಕೀಯ ಬೇರೆ. ನಾಲ್ಕು ವರ್ಷ ಇವರು ಆಡಳಿತ ನಡೆಸಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ. ಪೊಲೀಸರು ಮಾಡಿದ್ದೇ ಕೆಲಸ ಎನ್ನುವಂತೆ ಇತ್ತು. 

ಯಾವುದೇ ರೀತಿ ರಿವ್ಹೀವ್ಯೂ ನಡೆದಿರಲಿಲ್ಲ. ಹೀಗಾಗಿ 31 ವರ್ಷಗಳಿಂದ ಇದ್ದ ಪ್ರಕರಣಗಳನ್ನು ಮುಗಿಸಬೇಕು. ಅದಕ್ಕೆ ಚಾರ್ಜ್ ಶೀಟ್ ಹಾಕಬೇಕಲ್ಲ. ಹೀಗಾಗಿ ರಿವ್ಹೀವ್ಯೂ ಆದಾಗ ಈ ಪ್ರಕರಣಗಳು ಬಂದಿವೆ ಅಷ್ಟೇ. ಕರಸೇವಕರನ್ನು ಬಂಧಿಸಬೇಕು ಅಂತ ಯಾರೂ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಪೊನ್ನಣ್ಣ ಸಮರ್ಥಿಸಿಕೊಂಡಿಕೊಂಡಿದ್ದಾರೆ. ಯಾರೋ ನಾಲ್ಕು ಜನ ಕರಸೇವಕರನ್ನು ಬಂಧಿಸಿದ ಕೂಡಲೇ ಅದರಿಂದ ಏನೂ ಆಗಲ್ಲ. ಅವರನ್ನು ಬಂಧಿಸಿ ಏನು ಮಾಡಬೇಕು ಹೇಳಿ. ಅಷ್ಟಕ್ಕೂ ನಾವು ರಾಮಮಂದಿರದ ಪರವಾಗಿಯೇ ಇದ್ದೇವಲ್ಲ, ರಾಮಮಂದಿರದ ವಿರುದ್ಧವಾಗಿ ಇದ್ದರೆ ಇವರು ಹೇಳುತ್ತಿರುವ ಹಾಗೆ ರಾಜಕೀಯ ದ್ವೇಷ ಎಂದು ಹೇಳಬಹುದಿತ್ತು ಅಲ್ಲವೆ ಎಂದು ಪೊನ್ನಣ್ಣ ಪ್ರಶ್ನಿಸಿದರು. 

ಕಾನೂನು ಪ್ರಕ್ರಿಯೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ, ರಾಜಕೀಯ ದ್ವೇಷವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ವಿನಃ ನಾವು ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು. ಇಡಿ, ಸಿಬಿಐ ಐಟಿಯವರನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ರಾಜಕೀಯ ನಾಯಕರುಗಳ ಮೇಲೆ ದಾಳಿ ಮಾಡಿಸುತ್ತಾ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios