ಬೆಂಗಳೂರು[ನ.30]: ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಸಿ.ರಾಮಮೂರ್ತಿ ಒಟ್ಟು 373 ಕೋಟಿ ರು.ಗಿಂತ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಮಮೂರ್ತಿ ಅವರಿಗಿಂತ ಅವರ ಪತ್ನಿ ಸಬಿತಾ ರಾಮಮೂರ್ತಿ ಅವರೇ ಶ್ರೀಮಂತರಾಗಿದ್ದಾರೆ.

ರಾಮಮೂರ್ತಿ 10.52 ಕೋಟಿ ರು., ಪತ್ನಿ ಸಬಿತಾ ರಾಮಮೂರ್ತಿ 22.97 ಕೋಟಿ ರು. ಚರಾಸ್ತಿಯನ್ನು ಹೊಂದಿದ್ದಾರೆ. 22.76 ಕೋಟಿ ರು. ನಷ್ಟುಸ್ಥಿರಾಸ್ತಿಯನ್ನು ರಾಮಮೂರ್ತಿ ಹೊಂದಿದ್ದು, ಅವರ ಪತ್ನಿ ಸಬಿತಾ ಅವರು 110.89 ಕೋಟಿ ರು. ನಷ್ಟುಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ರಾಮಮೂರ್ತಿ ಅವರು 3.62 ಕೋಟಿ ರು. ಸಾಲ ಹೊಂದಿದ್ದು, ಪತ್ನಿ ಸಬಿತಾ ಹೆಸರಲ್ಲಿ 23.23 ಕೋಟಿ ರು. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ರಾಮಮೂರ್ತಿ ಅವರು 2.84 ಲಕ್ಷ ರು. ನಗದು ಹೊಂದಿದ್ದು, ಸಬಿತಾ ಅವರು 44,249 ರು. ನಗದನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ.