ಬೆಂಗಳೂರು(ಡಿ.07): ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಸಜ್ಜಾಗಿರುವ ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನೀಕಾಂತ್ ಭಾನುವಾರ ಏಕಾಏಕಿ ಬೆಂಗಳೂರಿನಲ್ಲಿರುವ ಅಣ್ಣ  ಸತ್ಯನಾರಾಯಣ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದಾರೆ. ಸಹೋದರರಿಬ್ಬರೂ ಬಹಳಷ್ಟು ಹೊತ್ತು ಕುಳಿತು ಮಾತುಕತೆ ನಡೆಸಿದ್ದಾರೆ.

"

ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ; ದಿನಾಂಕ ಘೋಷಿಸಿದ ತಲೈವಾ

ಕಳೆದ ಮೂರು ದಿನಗಳ ಹಿಂದಷ್ಟೇ,  ಡಿಸೆಂಬರ್ 3ರಂದು ನಟ ರಜನೀಕಾಂತ್ ಜನವರಿಯಲ್ಲಿ ಹೊಸ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದರು. ಅಲ್ಲದೇ ಡಿಸೆಂಬರ್ 31ರಂದು ಹೊಸ ಪಕ್ಷ ಕಟ್ಟುವ ಕುರಿತ ನಿರ್ಧಾರ ಪ್ರಕಟಿಸುವುದಾಗಿಯೂ ಹೇಳಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಹೀಗಿರುವಾಗ ಅವರ ಈ ಘೋಷಣೆ ಭಾರೀ ಸದ್ದು ಮಾಡಿತ್ತು. 

ಅಲ್ಲದೇ ರಾಜಕೀಯಕ್ಕೆ ಎಂಟ್ರಿ ನೀಡುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರಜನೀಕಾಂತ್ 'ಈಗ ಬದಲಾವಣೆ, ರೂಪಾಂತರ ತಾರದಿದ್ದರೆ ಮತ್ತೆ ಯಾವತ್ತೂ ಸಾಧ್ಯವಿಲ್ಲ. ಜನವರಿಯಲ್ಲಿ ಪಕ್ಷ ಆರಂಭವಾಗುತ್ತದೆ, ಈ ಸಂಬಂಧ ಡಿಸೆಂಬರ್ 31ರಂದು ಘೋಷಣೆ ಮಾಡಲಾಗುವುದು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ  ಜನರ ಬೆಂಬಲದೊಂದಿಗೆ ಧಾರ್ಮಿಕ ರಾಜಕೀಯ ತಮಿಳು ನಾಡಿನಲ್ಲಿ ಆರಂಭವಾಗಲಿದೆ ಎಂದಿದ್ದರು. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಅವರು ಸಹೋದರನ ಭೇಟಿಯಾಗಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.