Asianet Suvarna News Asianet Suvarna News

ಬೆಂಗಳೂರಿನಲ್ಲಿ ಸಚಿನ್ ಪೈಲಟ್, ಕೇಂದ್ರ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ

* ರಾಜಸ್ತಾನದ ಡಿಸಿಎಂ  ಸಚಿನ್ ಪೈಲಟ್ ರಾಜ್ಯಕ್ಕೆ ಭೇಟಿ
* ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಚಿವ್ ಪೈಲಟ್
* ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

Rajasthan DCM sachin pilot Hits out at Modi Govt rbj
Author
Bengaluru, First Published Sep 1, 2021, 4:55 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.01): ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಅವರು ಇಂದು (ಸೆ.01) ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿನ್ ಪೈಲಟ್,  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಸ್ತುತ ಕೇಂದ್ರ ಸರ್ಕಾರ ಎನ್​ಎಂಪಿ ಕಾಯ್ದೆಯನ್ನು  ತರುತ್ತಿದೆ. ಇದರ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಸಾರ್ವಜನಿಕ ಕ್ಷೇತ್ರಗಳನ್ನ ಖಾಸಗೀಕರಣ ಮಾಡುತ್ತಿದೆ. ಮೂಲಸೌಕರ್ಯಗಳಲ್ಲಿ 100 ಕೋಟಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದೆ. ಸಾರ್ವಜನಿಕ ವಲಯವನ್ನ ಖಾಸಗೀಕರಣ ಮಾಡುತ್ತಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಈಗಿರಲಿಲ್ಲ. ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲಾಗಿತ್ತು. ಮನಮೋಹನ್ ಸಿಂಗ್ ಆರ್ಥ ಸಚಿವರಾಗಿದ್ದರು. ನರಸಿಂಹ ರಾವ್ ಪ್ರಧಾನಿಯಾಗಿದ್ದರು. ಆಗ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ರೈಲ್ವೆ, ಏರ್​ಪೋರ್ಟ್, ಗ್ಯಾಸ್ ಲೈನ್ ಎಲ್ಲವೂ ಪಬ್ಲಿಕ್ ಸೆಕ್ಟರ್ ನಲ್ಲಿತ್ತು. ಆದರೆ ಈಗ ಎಲ್ಲವೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ಅಡಿಗೆ ಅನಿಲದ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಜನರ ಜೀವನ ಮಟ್ಟ ಕುಸಿದಿದೆ. ಸ್ಚಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಗಂಗಾ ಕ್ಲೀನ್ ಯೋಜನೆ ಎಲ್ಲಿಗೆ ಬಂದಿವೆ ಎಂದು ಪ್ರಶ್ನಿಸಿದರು.

ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಸಾವಿರಾರು ಉದ್ಯೋಗ ಕಳೆದುಕೊಳ್ಳಲಾಗಿದೆ. ಇವತ್ತು ದೇಶದಲ್ಲಿ ಎಲ್ಲವೂ ಕುಸಿದು ಹೋಗಿದೆ. ಸರಿಯಾದ ಪಾಲಿಸಿಗಳನ್ನ ಜಾರಿಗೆ ತರುತ್ತಿಲ್ಲ. ಕೇಂದ್ರದ ಯೋಜನೆಗಳು ಜನಪರವಾಗಿಲ್ಲ. ಲಸಿಕೆ ವಿತರಣೆಯಲ್ಲೂ ಅವ್ಯವಹಾರ. ರಾಜ್ಯ ಹಾಗೂ ಕೇಂದ್ರದ ನಡುವೆ ಸಾಮರಸ್ಯವಿಲ್ಲ. ಲಸಿಕೆ ವಿತರಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದರು.

ದೇಶದ ಅಭಿವೃದ್ಧಿ 50 ವರ್ಷಗಳ ಹಿಂದಕ್ಕೆ ಹೋಗಿದೆ. ಸಂಸತ್ ನಲ್ಲಿ ಉತ್ತರ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಕಳೆದ ಸಂಸತ್ ಕಲಾಪವೂ ಹಾಳಾಯ್ತು. ಈ ಬಾರಿಯೂ ಚರ್ಚೆಗೆ ಅವಕಾಶವಿಲ್ಲದೆ ಕಲಾಪ ಹಾಳಾಯ್ತು. ಜನರ ಸಮಸ್ಯೆಗಳ ಚರ್ಚೆಗೆ ಅವಕಾಶವೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

Follow Us:
Download App:
  • android
  • ios