ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ, ಗೆಹ್ಲೋಟ್ ಬಣದ 92 ನಾಯಕರು ರಾಜೀನಾಮೆಗೆ ಸಿದ್ಧತೆ!
ರಾಜಸ್ಥಾನದಲ್ಲಿ ಇದೀಗ ಕಾಂಗ್ರೆಸ್‌ಗೆ ರಾಜೀನಾಮೆ ಆತಂಕ ಎದುರಾಗಿದೆ. ಸಚಿನ್ ಪೈಲೆಟ್‌ಗೆ ಸಿಎಂ ಸ್ಥಾನ ನೀಡಿದರೆ ಅಶೋಕ್ ಗೆಹ್ಲೋಟ್ ಬಣದ ನಾಯರು ರಾಜೀನಾಮೆಗೆ ಮುಂದಾಗಿದ್ದಾರೆ.
ಜೈಪುರ(ಸೆ.25) ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರಾಜಸ್ಥಾನದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗೆಹ್ಲೋಟ್‌ಗೆ ಅಧ್ಯಕ್ಷೀಯ ಪಟ್ಟ ಒಲಿಯುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ರಾಜಸ್ಥಾನಕ್ಕೆ ನೂತನ ಸಿಎಂ ಆಯ್ಕೆ ಮಾಡಬೇಕಾದ ಸಂಕಷ್ಟ ಕಾಂಗ್ರೆಸ್ ಹೈಕಮಾಂಡ್‌ಗೆ ಬಂದಿದೆ. ಕಾರಣ ಸಿಎಂ ಪಟ್ಟ ಅಶೋಕ್ ಗೆಹ್ಲೋಟ್ ಬಣಕ್ಕೆ ಸಿಗಬೇಕು ಅನ್ನೋದು ಹಿರಿಯ ನಾಯಕರ ಒತ್ತಾಯ. ಇತ್ತ ಗೆಹ್ಲೋಟ್ ಪ್ರತಿಸ್ಪರ್ಧಿ ಸಚಿನ್ ಪೈಲೆಟ್ ಮುಂದಿನ ಮುಖ್ಯಮಂತ್ರಿ ಸ್ಥಾನ ಕಟ್ಟಲು ಹೈಕಮಾಂಡ್ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರಿಂದ ಸಿಎಂ ಸ್ಥಾನ ಸಚಿನ್ ಪೈಲೈಟ್ ನೀಡಿದರೆ, ಅಶೋಕ್ ಗೆಹ್ಲೋಟ್ ಬಣದ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕಾಂಗ್ರೆಸ್ ಶಾಸಕ ಶಾಂತಿಕುಮಾರ್ ಧರಿವಾಲ್ ಮನೆಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಚಿನ್ ಪೈಲೆಟ್ ಬಣಕ್ಕೆ ನೀಡಲು ಮುಂದಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದು ಪಕ್ಷದಲ್ಲಿ ಬಿರುಗಾಳಿ ಎಬ್ಬಸಿದ್ದ ಪೈಲೈಟ್ ಬಣ ಕೋಪ ತಣಿಸಲು ಈ ನಿರ್ಧಾರಕ್ಕೆ ಹೈಕಮಾಂಡ್ ಮುಂದಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದಾಗ, ಪೈಲೆಟ್ ಬಣದ ಬೆದರಿಕೆ ನಡುವೆ ಅಶೋಕ್ ಗೆಹ್ಲೋಟ್ ಬಣದ ಜೊತೆ ನಿಂತು ಸರ್ಕಾರವನ್ನು ಉಳಿಸಿಕೊಂಡರ ಪೈಕಿ ಸಮರ್ಥರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಗೆಹ್ಲೋಟ್ ಬಣ ಪಟ್ಟು ಹಿಡಿದಿದೆ.
ಗಾಂಧಿ ಕುಟುಂಬದಿಂದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲ್ಲ: ಗೆಹ್ಲೋಟ್‌ಗೆ ರಾಗಾ ಸ್ಪಷ್ಟನೆ
ರಾಜಸ್ಥಾನ ನೂತನ ಸಿಎಂ ಯಾರು ಅನ್ನೋದನ್ನು 102 ಶಾಸಕರಿಂದ ಯಾಕೆ ಆಯ್ಕೆಯಾಗಬಾರದು? ಎಂದು ಗೆಹ್ಲೋಟ್ ಆಪ್ತ, ಆಹಾರ ಸಚಿವ ಪ್ರತಾಪ್ ಸಿಂಗ್ ಕಚಾರಿಯಾ ಹೇಳಿದ್ದಾರೆ. ರಾಜಸ್ಥಾನ ಮುಂದಿನ ಸಿಎಂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಶಾಸಕರು ಒಪ್ಪುವಂತೆ ಇರಬೇಕು ಎಂದು ಸಚಿನ್ ಪೈಲೆಟ್ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಸ್ವತಃ ಅಶೋಕ್ ಗೆಹ್ಲೋಟ್‌ಗೂ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದು ಇಷ್ಟವಿಲ್ಲ. ಗಾಂಧಿ ಕುಟುಂಬದ ಒತ್ತಾಯದ ಮೇರೆ ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಚುನಾವಣೆಗೂ ಮೊದಲೇ ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಈ ಮನವಿಯನ್ನು ಗೆಹ್ಲೋಟ್ ನಿರಾಕರಿಸಿದ್ದರು. ಬಳಿಕ ಗೆಹ್ಲೋಟ್ ಮನ ಒಲಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲಾಗಿದೆ.
ಅಶೋಕ್ ಗ್ಲೆಹೋಟ್ ಕಾಂಗ್ರೆಸ್ ಅಧ್ಯಕ್ಷರಾದಲ್ಲಿ, ಸಿಎಂ ಸ್ಥಾನಕ್ಕೆ ರಾಜೀನಾಮೆ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಸಂಪೂರ್ಣ ಅಧಿಕಾರ ಗೆಹ್ಲೋಟ್ ಕೈಗೆ ಬರಲಿದೆ ಅನ್ನೋ ಯಾವ ಭರವಸೆಯೂ ಗೆಹ್ಲೋಟ್‌ಗಿಲ್ಲ. ಇತ್ತ ರಾಜಸ್ಥಾನ ಮುಖ್ಯಮಂತ್ರಿ ಪಟ್ಟವೂ ಕೈತಪ್ಪಲಿದೆ. ಇದರಿಂದ ರಾಜ್ಯದ ಅಧಿಕಾರ ಕೈತಪ್ಪಲಿದೆ.
ಎಐಸಿಸಿ ಎಲೆಕ್ಷನ್‌ಗೆ ಬೆಂಗ್ಳೂರಲ್ಲೇ ರಾಹುಲ್ ಮತ
ಗಾಂಧಿ ಕುಟುಂಬಕ್ಕೆ ಹೊರತಾದವರೂ ಸ್ಪರ್ಧಿಸುತ್ತಿರುವ ಎಐಸಿಸಿ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸ್ಥಾಪಿತವಾಗುವ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾವಣೆ ಮಾಡಲಿದ್ದಾರೆ. ಇದಕ್ಕಾಗಿ ಭಾರತ್ ಜೋಡೋ ಯಾತ್ರೆಗೆ ಒಂದು ದಿನದ ತಾತ್ಕಲಿಕ ಬ್ರೇಕ್ ಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.