Asianet Suvarna News Asianet Suvarna News

ಕಾಂಗ್ರೆಸ್ ನೀಡಿದ್ದ ಎರಡು ಫ್ರೀ ಸ್ಕೀಂಗಳಿಗೆ ಬ್ರೇಕ್ ಹಾಕಿದ ಬಿಜೆಪಿ

ಬಜೆಟ್ ಅಧಿವೇಶನದಲ್ಲಿ ಶರ್ಮಾ ಸರ್ಕಾರದ ಲಿಖಿತ ಪ್ರತಿಕ್ರಿಯೆಯಲ್ಲಿ ಎರಡು ನಿರ್ಧಾರಗಳು ಬೆಳಕಿಗೆ ಬಂದಿವೆ. ಶರ್ಮಾ ಸರ್ಕಾರದ ಈ ನಿರ್ಣಯಗಳನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

Rajasthan bjp government ends congress s two free scheme in budget mrq
Author
First Published Jul 25, 2024, 8:14 AM IST | Last Updated Jul 25, 2024, 8:15 AM IST

ಜೈಪುರ: ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೆಲವು ಉಚಿತ ಸ್ಟೀಂಗಳ ಮೇಲೆ ಪ್ರಹಾರ ನಡೆಸಿರುವ ಬಿಜೆಪಿ ಸರ್ಕಾರ, ಅವುಳಿಗೆ ತಡೆ ನೀಡುವ ತೀರ್ಮಾನ ಕೈಗೊಂಡಿದೆ. ಅಂದರೆ ಹಳೆಯ ಫಲಾನುಭವಿಗಳಿಗೆ ಯೋಜನೆ ಮುಂದುವರಿಸಿ ಹೊಸಬರಿಗೆ ಯೋಜನೆ ಅನ್ವಯ ಆಗದಂತೆ ನಿಯಮ ಮಾರ್ಪಡಿಸಿದೆ. ಪ್ರತಿ ಮನೆಗೆ ಮಾಸಿಕ 100 ಯುನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್. ಇವೇ ಆ 2 ಯೋಜನೆಗಳು. 

ಕಳೆದ ವರ್ಷ ಮೇ ತಿಂಗಳಲ್ಲಿ, 2023ರ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಸರ್ಕಾರ, ಪ್ರತಿ ಮನೆಗೆ ಮಾಸಿಕ 100 ಯೂನಿಟ್ ಉಚಿತ ವಿದ್ಯುತ್ ಘೋಷಿಸಿತ್ತು. ಆದರೂ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿತ್ತು. ಈ ವರ್ಷದ ಮಾರ್ಚ್‌ವರೆಗೆ ಈ ಯೋಜನೆಗೆ 98.23 ಲಕ್ಷ ಕುಟುಂಬಗಳು ಹೆಸರು ನೋಂದಾಯಿಸಿವೆ. ಅವುಗಳಿಗೆ ಮಾತ್ರ ಉಚಿತ ವಿದ್ಯುತ್ ಮುಂದುವರಿಸಲು ಈಗಿನ ಭಜಲ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಯಡಿ ಇನ್ನು ಹೊಸ ನೋಂದಣಿಗೆ ಅವಕಾಶವಿಲ್ಲ. 

39 ಲಕ್ಷ ರೈತರಿಗೆ 3500 ಕೋಟಿ ರು. ಬೆಳೆ ಹಾನಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ

ಅದೇ ರೀತಿ, ಪ್ರತಿ ಮನೆಯ ಒಬ್ಬ ಮಹಿಳೆಗೆ ಮೊಬೈಲ್ ಫೋನ್ ನೀಡುವ ಗೆಹೋಟ್ ಅವರ ಮತ್ತೊಂದು ಯೋಜನೆಗೆ ತಡೆ ನೀಡಲಾಗಿದೆ. ಈ ಯೋಜನೆಯನ್ನು 2023ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗಿತ್ತು ಮತ್ತು ಅಕ್ಟೋಬರ್‌ವರೆಗೆ 24.56 ಲಕ್ಷಮಹಿಳೆಯರಿಗೆ ಮೊಬೈಲ್ ಫೋನ್ ಗಳನ್ನು ನೀಡಲಾಗಿದೆ. ಕಳೆದ ಸೋಮವಾರ (ಜುಲೈ 22) ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶರ್ಮಾ ಸರ್ಕಾರದ ಲಿಖಿತ ಪ್ರತಿಕ್ರಿಯೆಯಲ್ಲಿ ಎರಡು ನಿರ್ಧಾರಗಳು ಬೆಳಕಿಗೆ ಬಂದಿವೆ. ಶರ್ಮಾ ಸರ್ಕಾರದ ಈ ನಿರ್ಣಯಗಳನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

Latest Videos
Follow Us:
Download App:
  • android
  • ios