ರಾಜಸ್ಥಾನ ಚುನಾವಣೆಗೆ ಮೊದಲ ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಬಿಜೆಪಿ, ಮಾಜಿ ಸಿಎಂಗೆ ಕೊಕ್!
ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣ ದಿನಾಂಕ ಘೋಷಿಸಿದೆ. ರಾಜಸ್ಥಾನದಲ್ಲಿ ನವೆಂಬರ್ 23 ರಂದು ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ರಾಜಸ್ಥಾನದಲ್ಲಿ ಮೊದಲ ಹಂತದ ಅಭ್ಯರ್ಥಿಘ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಾಜಿ ಸಿಎಂ ವಸುಂದರ ರಾಜೆಗೆ ಸ್ಥಾನ ನೀಡಿಲ್ಲ.
ಜೈಪುರ್(ಅ.09) ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸಘಡ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 7 , 17 ಹಾಗೂ 23 ರಂದು ಐದು ರಾಜ್ಯಗಳ ಚುನಾವಣೆ ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 23 ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಘೋಷಣೆಯಾಗಲಿದೆ. ಈ ಪೈಕಿ ರಾಜಸ್ಥಾನದಲ್ಲಿ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಈ ಪಟ್ಟಿಯಲ್ಲಿ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕಿ ವಸುಂದರ ರಾಜೆಗೆ ಸ್ಥಾನ ನೀಡಿಲ್ಲ. ಈ ಮೂಲಕ ರಾಜೆ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಅನ್ನೋ ಊಹಾಪೋಹಕ್ಕೆ ಪುಷ್ಠಿ ನೀಡುವಂತಿದೆ.
ವಸುಂದರ ರಾಜೆ ಮಾತ್ರವಲ್ಲ, ರಾಜೆ ಆಪ್ತರಾಗಿರುವ ಶಾಸಕ ನರ್ಪತ್ ಸಿಂಗ್ ರಾಜ್ವಿ, ರಾಜಪಾಲ್ ಸಿಂಖ್ ಶೇಖಾವತ್ ಸೇರಿದಂತೆ ಕೆಲ ಪ್ರಮುಖ ನಾಯಕರಿಗೂ ಕೊಕ್ ನೀಡಲಾಗಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಗೆ 41 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ ರಾಜಸ್ಥಾನದಿಂದ ಲೋಕಸಭೆಗೆ ಆಯ್ಕೆಯಾಗಿರುವ 7 ಸಂಸದರು ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.
Breaking: ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ!
ರಾಜಸ್ಥಾನದ ಪ್ರಮುಖ 7 ಸಂಸದರು ವಿಧಾನಸಭೆ ಸ್ಪರ್ಧಿಸಿ ಬಿಜೆಪಿ ಅಧಿಕಾರಕ್ಕೆ ತರುವ ಹೊಣೆ ಹೊತ್ತುಕೊಂಡಿದ್ದಾರೆ. ಜೋತ್ವಾರ ಕ್ಷೇತ್ರದಿಂದ ಲೋಕಸಭಾ ಸಂಸದ ರಾಜ್ಯವರ್ಧನ್ ರಾಥೋಡ್, ವಿದ್ಯಾದರ ನಗರ ಕ್ಷೇತ್ರದಿಂದ ಸಂಸದೆ ದಿವ್ಯ ಕುಮಾರ್, ತಿಜಾರಾ ಕ್ಷೇತ್ರದಿಂದ ಬಾಲಕನಾಥ್, ಮಂದ್ವಾ ಕ್ಷೇತ್ರದಿಂದ ಸಂಸದ ನರೇಂದ್ರ ಕುಮಾರ್, ಕಿಶನಘರ ಕ್ಷೇತ್ರದಿಂದ ಭಾಗಿರತ್ ಚೌಧರಿ, ಸವಾರಿ ಮಾಧೋಪುರ್ ಕ್ಷೇತ್ರದಿಂದ ಕಿರೋಡಿ ಲಾಲ್ ಮೀನಾ ಹಾಗೂ ಸಂಚೋರ್ ಕ್ಷೇತ್ರದಿಂದ ದೇವಜಿತ್ ಪಟೇಲ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜಸ್ಥಾನದ ಸಂಸದರು.
ಪಂಚ ರಾಜ್ಯಗಳ ಚುನಾವಣ ಪೈಕಿ ರಾಜಸ್ಥಾನ ಚುನಾವಣೆ ಕೊನೆಯದಾಗಿ ನಡೆಯಲಿದೆ. ಇನ್ನುಳಿದಂತೆ ಮಿಜೋರಾಂನಲ್ಲಿ ನವೆಂಬರ್ 7 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ಚತ್ತೀಸಗಡದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನು ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಚುನಾವಣೆ ನಡೆಯಲಿದೆ.
ಬಿಜೆಪಿಗೆ ಬಂದದ್ದರಿಂದ 4 ಬಾರಿ ಸೋತೆ, ಬೇಕಂತಲೇ ಸೋಲಿಸಲಾಗಿದೆ, ಸೋಮಣ್ಣ ಅತೃಪ್ತಿ