ಜೈಪುರ(ಜು.  17)  ರಾಜಸ್ಥಾನದ ರಾಜಕಾರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರ ಮೇಲೆ ಕಾಂಗ್ರೆಸ್ ಶಿಸ್ತು ಕ್ರಮ ಜಾರಿ ಮಾಡಿದೆ. 

ಪೈಲೆಟ್ ಮತ್ತು  18  ಜನ ಶಾಶಕರನ್ನು ಅನರ್ಹ ಮಾಡಲು ಕಾಂಗ್ರೆಸ್ ಅಲ್ಲಿನ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿತ್ತು. ಪೈಲಟ್ ತಂಡ ನ್ಯಾಯಾಲಯದ ಮೊರೆ ಹೋಗಿತ್ತು. ಅದರ ವಿಚಾರಣೆ ನಡೆಯಬೇಕಿದೆ. ಇದೆಲ್ಲದರ ನಡುವೆ  ಕಾಂಗ್ರೆಸ್ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದೆ.

ಗೆಹ್ಲೋಟ್ ಖೆಡ್ಡಾಕ್ಕೆ ಫೈಲೆಟ್ ಬಿದ್ದಿದ್ದು ಹೇಗೆ?

ಸಾರ್ ದರ್‌ಶಹರ್ ಶಾಸಕ ಬನ್ವಾರ್ ಲಾಲ್ ಶರ್ಮಾ, ದೀಘ್ ಖುಮೇರ್ ಶಾಸಕ ವಿಶ್ವೇಂದ್ರ ಸಿಂಗ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ  ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಗಳ ಮೇಲೆ ಇಬ್ಬರು ಶಾಸಕರನ್ನು ಅಮಾನತು ಮಾಡಿರುವ ಎಐಸಿಸಿ ಪೈಲೆಟ್ ಪಡೆಗೆ ದೊಡ್ಡ ಶಾಕ್ ನೀಡಿದೆ.  ಮೂವರಿಗೂ ಉತ್ತರ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

ಕಾಂಗ್ರೆಸ್ ಶಾಸಕರ ಖರೀದಿ ಮಾಡಲು ಬಿಜೆಪಿ ಮುಂದಾಗಿದ್ದು ಕೇಂದ್ರ ಸಚಿವ  ಗಜೇಂದ್ರ ಶೇಖಾವತ್  ನೇರವಾಗಿ ಭಾಗಿಯಾದ್ದಾರೆ ಎಂದು ಕಾಂಗ್ರೆಸ್ ದೂರು ನೀಡಿದೆ. ಕಾಂಗ್ರೆಸ್ ಶಾಸಕರ ಜೊತೆ ಮಾತುಕತೆ ನಡೆಸಿರುವ ಆಡಿಯೋ ನಮ್ಮ ಬಳಿ ಇದೆ ಎಂದು ಹೇಳಿಕೊಂಡಿದೆ. ನಾನು ಯಾವುದೇ ತನಿಖೆಗೂ ಸಿದ್ದ ಎಂದ ಸಚಿವ ಗಜೇಂದ್ರ ಶೇಖಾವತ್ ತಿರುಗೇಟು ನೀಡಿದ್ದಾರೆ.

ಸಂಜೆ ಐದು ಗಂಟೆಗೆ ವಿಚಾರಣೆ ನಡೆಸಲಿರುವ ಸ್ಪೀಕರ್ ಮುಂದೆ ಶಾಸಕರ ವಿಚಾರ ಬರಲಿದೆ. ಇನ್ನೊಂದು ಕಡೆ  ಇತ್ತ ಸಚಿನ್ ಪೈಲಟ್ ಮತ್ತು 18 ಮಂದಿ ಶಾಸಕರ ಅರ್ಜಿ ವಿಚಾರಣೆಯೂ ಹೈಕೋರ್ಟ್ ನಲ್ಲಿ ಆರಂಭವಾಗಿದೆ. ಮತ್ತೊಂದೆಡೆ ರಾಜಸ್ಥಾನ ಪೊಲೀಸರು ಶಾಸಕರ ಖರೀದಿ ಸಂಬಂಧ ಎರಡು ಎಫ್‌ ಐಆರ್ ದಾಖಲಿಸಿದ್ದಾರೆ. 

ಕರ್ನಾಟಕದಲ್ಲಿಯೂ ಇದೇ ತೆರನಾದ ಪೊಲಿಟಿಕಲ್ ಹೈಡ್ರಾಮಾ ನಡೆದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರ್ಕಾರದಿಂದ ಹೊರಬಂದ 17 ಜನ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಆದರೆ ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ವಿಚಾರಣೆ ನಡೆಸಿ ರಾಜೀನಾಮೆ ನೀಡಿದ ಎಲ್ಲ ಶಾಸಕರನ್ನು ಅನರ್ಹ ಮಾಡಿದ್ದರು. ನಂತರ ಬದಲಾದ ಸಂದರ್ಭದಲ್ಲಿ ಬಿಜೆಪಿ ಸೇರಿದ ಶಾಸಕರು ಗೆದ್ದು ಬಂದು ಇದೀಗ ಸಚಿವರಾಗಿದ್ದಾರೆ.