ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಲಿ: ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಆಗ್ರಹ
ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಹಿಂದೂಗಳನ್ನು ಅಪಮಾನ ಮಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಬೇಕು ಎಂದು ಕರ್ನಾಟಕ ವಿಧಾನ ಸಭಾ ಮಾಜಿ ಸ್ಪೀಕರ್ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.03): ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಹಿಂದೂಗಳನ್ನು ಅಪಮಾನ ಮಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಬೇಕು ಎಂದು ಕರ್ನಾಟಕ ವಿಧಾನ ಸಭಾ ಮಾಜಿ ಸ್ಪೀಕರ್ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದು ಅಧಿವೇಶನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದಿಕ್ಸೂಚಿ ಭಾಷಣ ಮಾಡಿದ್ದಾರೆ.
ಆ ಬಳಿಕ ಮಾತನಾಡಿದ ರಾಹುಲ್ ಗಾಂಧಿಯವರು ಹಿಂದೂಗಳನ್ನು ಅಪಮಾನಿಸುವುದಕ್ಕೆ ತಮ್ಮ ಭಾಷಣವನ್ನು ಮೀಸಲಿರಿಸಿದ್ದಾರೆ. ಎರಡು ಅವಧಿಯಲ್ಲಿ ಕಾಂಗ್ರೆಸ್ ಗೆ ವಿರೋಧ ಪಕ್ಷದ ಸ್ಥಾನವೇ ಇರಲಿಲ್ಲ. 10 ವರ್ಷಗಳ ಬಳಿಕ ಕಾಂಗ್ರೆಸ್ ಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಆಯ್ಕೆಯಾಗಿದ್ದಾರೆ. ಆದರೆ ಭಾಷಣದುದ್ಧಕ್ಕೂ ಹಿಂದು ಧರ್ಮವನ್ನು ಟೀಕಿಸಿದ್ದಾರೆ ಎಂದಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಪಾರ್ಲಿಮೆಂಟ್ ಒಳಗೆಯೇ ಈ ರೀತಿ ಮಾತನಾಡಿರೋದು ಸರಿಯಲ್ಲ.
ರಾಜ್ಯದ ಚಾರಣ ಪಥಗಳ ಆನ್‌ಲೈನ್ ಬುಕ್ಕಿಂಗ್ ಶೀಘ್ರ: ಸಚಿವ ಈಶ್ವರ ಖಂಡ್ರೆ
ಹಿಂದುಗಳ ಬಗ್ಗೆ ಅವಹೇಳನ ಮಾಡಿರೋದು ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ರಾಹುಲ್ ಗಾಂಧಿ ಅವರು ಸಲಹೆ ನೀಡುವುದಾದರೆ ನೀಡಬಹುದಿತ್ತು. ಆದರೆ ಅವರಿಗೆ ಸಲಹೆ ಕೊಡಲು ಗೊತ್ತೇ ಇಲ್ಲ. ವಿರೋಧ ಪಕ್ಷ ನಾಯಕನಾಗಿ ಧರ್ಮವನ್ನ ರಾಹುಲ್ ಗಾಂಧಿ ಟೀಕೆ ಮಾಡಿರೋದು ಸರಿಯಲ್ಲ ಎಂದು ಬೋಪಯ್ಯ ಆಕ್ರೋಶ ಹೊರಹಾಕಿದ್ದಾರೆ. ಚೈಲ್ಡಿಷ್ ಬಿಹೇವಿಯರ್ ಅಂತ ಮೋದಿಯವರೆ ರಾಹುಲ್ ಗೆ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿದೆ ಅಂತ ಹಿಂದೂಗಳ ತೇಜೋವಧೆ ಮಾಡುವುದಲ್ಲ.
ರಾಹುಲ್ ಗಾಂಧಿ ಇದನ್ನ ತಿದ್ದಿಕೊಳ್ಳದಿದ್ದಲ್ಲಿ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಕೆ.ಜಿ. ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆಡಳಿತ ಪಕ್ಷವನ್ನು ಎಷ್ಟು ತಿವಿಯಯಬೇಕೋ ಅಷ್ಟು ತಿವಿಯುತ್ತಿದ್ದಾರೆ ಎಂದು ಮಾಜಿ ಸ್ವೀಕರ್ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಆರ್ ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ನಿರ್ಹಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೆ.ಜಿ ಬೋಪಯ್ಯ ಪ್ರತಿಕ್ರಿಯಿಸಿದರು.
ಕೃಷ್ಣಾ ನದಿ ತೆಪ್ಪ ದುರಂತ: 3 ಮೃತದೇಹ ಪತ್ತೆ, ಈಜಿ ದಡ ಸೇರಿದ ಮೂವರು, ಇನ್ನಿಬ್ಬರಿಗಾಗಿ ಮುಂದುವರೆದ ಶೋಧಕಾರ್ಯ
ವಿಪಕ್ಷನಾಯಕನಾಗಿ ಆರ್.ಅಶೋಕ್ ಸಮರ್ಥರಲ್ಲ ವಿಚಾರ. ಸಾಮಾನ್ಯವಾಗಿ ಕೆಲವು ಟೀಕೆಗಳು ಬರುತ್ತವೆ ಅಷ್ಟೇ, ಇದು ಪಕ್ಷದ ಆತಂರಿಕ ವಿಚಾರ ಇದರ ಬಗ್ಗೆ ಹೆಚ್ಚು ಏನು ಹೇಳಲ್ಲ ಎಂದರು. ಮಾಧ್ಯಮದಲ್ಲಿ ಸಾಕಷ್ಟು ಬರುತ್ತವೆ, ಅದಕ್ಕೆ ಉತ್ತರ ಕೊಡಲು ನಮ್ಮ ವರಿಷ್ಠರು ಇದ್ದಾರೆ. ನಾನು ಇದಕ್ಕೆ ಯಾವುದಕ್ಕೂ ಉತ್ತರ ಕೊಡಲ್ಲ ಎಂದು ಮಡಿಕೇರಿಯಲ್ಲಿ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹೇಳಿದರು.