ನಿಮ್ ಬಗ್ಗೆ ಚೆನ್ನಾಗಿ ಗೊತ್ತು ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ರಾಹುಲ್ ಎಚ್ಚರಿಕೆ, ಜತೆಗೊಂದು ಹೊಸ ಟಾಸ್ಕ್
* ಕರ್ನಾಟಕ ಪ್ರವಾಸದಲ್ಲಿ ರಾಹುಲ್ ಗಾಂಧಿ
* ಕರ್ನಾಟಕ ಕಾಂಗ್ರೆಸ್ ನಾಯಕರ ಜೊತೆ ಸರಣಿ ಸಭೆ
* ಸಿದ್ದು, ಡಿಕೆಶಿ ಹಾಗೂ ಖರ್ಗೆಗೆ ಹೊಸ ಟಾಸ್ಕ್ ಕೊಟ್ಟ ರಾಹುಲ್ ಗಾಂಧಿ
ಬೆಂಗಳೂರು, (ಏ.01): ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಇಂದು (ಶುಕ್ರವಾರ) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದರು. ನಿಮ್ ಬಗ್ಗೆ ಚೆನ್ನಾಗಿ ಗೊತ್ತು. ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ಸಭೆಯಲ್ಲಿ ರಾಹುಲ್ ಗಾಂಧಿ ವಾರ್ನಿಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಿಸಬೇಕು. ಒಂದು ಸ್ಥಾನ ಕೂಡ ಕಡಿಮೆ ಆಗಬಾರದು ಎಂದು ರಾಜ್ಯದ ನಾಯಕರಿಗೆ ರಾಹುಲ್ ಗಾಂಧಿ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಅಮಿತ್ ಶಾ ಮಿಂಚಿನ ಸಂಚಾರ, 3 ಜಿಲ್ಲೆಗಳ 4 ಕಾರ್ಯಕ್ರಮಗಳಲ್ಲಿ ಭಾಗಿ
ಮುಂದಿನ ವಿಧಾನಸಭಾ ಚುನಾವಣೆಯ ರೂಪುರೇಷೆ ಕುರಿತು ಚರ್ಚಿಸಿದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಿರಿಯ ನಾಯಕರ ಉಪಸ್ಥಿತರಿದ್ದರು. ರಾಜ್ಯದಲ್ಲಿ 150 ಸೀಟು ಗೆಲ್ಲಬೇಕು. ಒಂದು ಸ್ಥಾನ ಕೂಡ ಕಡಿಮೆ ಆಗಬಾರದು. ಪಕ್ಷ ನಿಷ್ಠೆಯ ಮೆರಿಟ್ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಹಿರಿಯ ನಾಯರೆಲ್ಲರೂ ಒಟ್ಟಿಗೆ ಹೋಗಬೇಕು. ಪ್ರತಿ ಕ್ಷೇತ್ರಕ್ಕೂ ನಾಯಕರು ಭೇಟಿ ಕೊಡಬೇಕು. ನೀವು ಕರೆದರೆ ನಾನು ರಾಜ್ಯದ ಮೂಲೆ ಮೂಲೆಗೂ ಬರುತ್ತೇನೆ. ಆದ್ರೆ 150 ಸ್ಥಾನ ಗೆಲ್ಲಿಸಬೇಕು ಎಂದು ತಾಕೀತು ಮಾಡಿದರು.
ಕರ್ನಾಟಕದಲ್ಲಿ ಉದ್ಯೋಗ ಅವಕಾಶ ಇಲ್ಲ. ಇದು ಚುನಾವಣೆ ವಿಚಾರ ಆಗಬೇಕು. ಆ ನಿಟ್ಟಿನಲ್ಲಿ ಹೋರಾಟ ಮಾಡಿ. ರೈತ ವಿರೋಧಿ ಕಾಯ್ದೆಯನ್ನು ಬೆಜೆಪಿ ತಂದಿತು. ರೈತರಿಗೆ ಬಿಜೆಪಿಯಿಂದ ಆದಾಯ ಕಡಿತ ಆಗಿದೆ. ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡತ್ತಿದ್ದರು. ಈಗ ಕರ್ನಾಟಕದಲ್ಲಿ ಶೇ.40 ಕಮಿಷನ್ ಸರ್ಕಾರ ಇದೆ. ಭ್ರಷ್ಟಾಚಾರ ಇದೆ ಅಂತ ನಾವು ಹೇಳುತ್ತಿಲ್ಲ. ಶೇ.40 ಕಮಿಷನ್ ಇದೆ ಅಂತ ಗುತ್ತಿಗೆದಾರರು ಹೇಳ್ತಿದ್ದಾರೆ. ಬಡವರ ದುಡ್ಡು ಶ್ರೀಮಂತರಿಗೆ ಬಿಜೆಪಿ ಹಂಚುತ್ತೆ. ಕೋಮು ವಿಚಾರ ಇಟ್ಟುಕೊಂಡು ದೇಶ ವಿಭಜನೆ ಮಾಡುತ್ತೆ. ಪ್ರಮುಖ ಸಮಸ್ಯೆ ಬಗ್ಗೆ ಅವರು ಮಾತನಾಡಲ್ಲ. ಭಾವನಾತ್ಮಕ ವಿಚಾರ ಹರಡುವುದು ಅವರ ಕೆಲಸ. ದೇಶ ಒಡೆಯುವುದು ಅವರ ಕೆಲಸ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸಂಘಟನೆ ಮಾಡುತ್ತಿದೆ. ಚುನಾವಣೆಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ. ಇದರಿಂದ ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಉದಯ ಆಗುತ್ತೆ. ಪ್ರಸ್ತುತ ಸಮಸ್ಯೆಗಳ ಮೇಲೆ ಹೋರಾಟ ಮಾಡಿ. ಸಿದ್ದರಾಮಯ್ಯ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ತಿಳಿಸಿ. 150 ಕ್ಷೇತ್ರದಲ್ಲಿ ಗೆಲ್ಲಲೇಬೇಕು. ಒಂದು ಕೂಡ ಕಡಿಮೆ ಆಗಬಾರದರು ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ ನೀಡಿದರು.
"