ಇಂದು ಚಳ್ಳಕೆರೆಗೆ ರಾಹುಲ್‌ ಪಾದಯಾತ್ರೆ ಸ್ವಾಗತಕ್ಕಾಗಿ ಸಜ್ಜಾಗಿರುವ ಚಳ್ಳಕೆರೆ ನಗರ : ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಶಕ್ತಿ : ಶಾಸಕ ರಘುಮೂರ್ತಿ ವಿಶ್ವಾಸ.

ಚಳ್ಳಕೆರೆ (ಅ.11) : ನಗರಕ್ಕೆ ಭಾರತ್‌ ಐಕ್ಯತಾ ಯಾತ್ರೆ ಮೂಲಕ ಆಗಮಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ವಾಗತಕ್ಕೆ ಚಳ್ಳಕೆರೆ ನಗರ ಸಜ್ಜಾಗುತ್ತಿದ್ದು, ತಾಲೂಕಿನ ಸಾಣಿಕೆರೆ ಗ್ರಾಮದ ಚೇತನ ಹೋಟೆಲ್‌ ಬಳಿ ವಿಶಾಲವಾದ ವೇದಿಕೆ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ.

ಭಾರತ್‌ ಜೋಡೋ ಯಾತ್ರೆಗೆ ಚಳ್ಳಕೆರೆ ಸಜ್ಜು; ಬಿಗಿ ಪೊಲೀಸ್ ಬಂದೋಬಸ್ತ್

ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಪಕ್ಷದ ಹಲವಾರು ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅ.11ರ ಮಂಗಳವಾರ ಹರ್ತಿಕೋಟೆ ಗ್ರಾಮದ ಮೂಲಕ ಮಧ್ಯಾಹ್ನ ಸುಮಾರು 11ಕ್ಕೆ ರಾಹುಲ್‌ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ ಸೇರಿದಂತೆ ಹಲವಾರು ಪ್ರಮುಖ ನಾಯಕರೊಡನೆ ಆಗಮಿಸಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಬೋಜನ ಸೇವಿಸಿ ವಿಶ್ರಾಂತಿ ಬಳಿಕ ಮಧ್ಯಾಹ್ನ 4 ಸುಮಾರಿಗೆ ಚಳ್ಳಕೆರೆ ನಗರಕ್ಕೆ ಪಾದಯಾತ್ರೆ ಮುಂದುವರೆಸಲಿದ್ದಾರೆ.

ಚಳ್ಳಕೆರೆ ನಗರದಲ್ಲಿ ಅ.12ರ ಬುಧವಾರ ಬೆಳಗ್ಗೆ 6.30ಕ್ಕೆ ಗಂಧರ್ವ ಹೋಟೆಲ್‌ ಬಳಿಯಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 15 ಸಾವಿರ, ವಿವಿಧ ಜಿಲ್ಲೆಗಳಿಂದ 10 ಸಾವಿರ ಒಟ್ಟು 25 ಸಾವಿರ ಜನರು ರಾಹುಲ್‌ಗಾಂಧಿಯವರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವರು. ಪಾದಯಾತ್ರೆ ನಡೆಯುವ ಮಾರ್ಗದೂದ್ದಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸ್ವಾಗತ ಕೋರುವ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಕಟ್ಟಿಇಡೀ ರಸ್ತೆಯನ್ನು ಶೃಂಗಾರಗೊಳಿಸಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಂಪುಪಾನಿಯ, ಮಜ್ಜಿಗೆ, ಎಳನೀರು, ಮುಂತಾದವುಗಳ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಗಾ ಪಾದಯಾತ್ರೆ 15ಕ್ಕೆ ಬಳ್ಳಾರಿ, 21-22ಕ್ಕೆ ರಾಯಚೂರಿಗೆ ಪ್ರವೇಶ: ಸಿದ್ದರಾಮಯ್ಯ

ಪಾದಯಾತ್ರಿಗಳ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ವಸ್ತುಗಳನ್ನು ವಿತರಿಸಲು ಪ್ರತ್ಯೇಕವಾದ ಸ್ಟಾಲ್‌ಗಳನ್ನು ಸಿದ್ಧಪಡಿಸಲಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರು, ಮುಖಂಡರು ಸ್ಟಾಲ್‌ಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ಸುಮಾರು ಹತ್ತಾರು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ನಗರ ವ್ಯಾಪ್ತಿಯ ಸುಮಾರು 26 ಕಲ್ಯಾಣ ಮಂಟಪ, 20ಕ್ಕೂ ಹೆಚ್ಚು ಖಾಸಗಿ ಲಾಡ್ಜ್‌ ಮುಂತಾದ ಕಡೆ ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಭಾರತ್‌ ಐಕ್ಯತಾ ಯಾತ್ರೆಯನ್ನು ಯಶಸ್ವಿಗೊಳಿಸಲು ಪಕ್ಷದ ಹಲವಾರು ಕಾರ್ಯಕರ್ತರು, ಮುಖಂಡರು, ನೇತಾರರು ಹಗಲು ರಾತ್ರಿ ಶ್ರಮಿಸುತ್ತಿದ್ದು, ತಾಲೂಕಿನ ಜನ ರಾಹುಲ್‌ ಗಾಂಧಿಯವರ ಆಗಮನವನ್ನು ಎದುರು ನೋಡುತ್ತಿದ್ಧಾರೆಂದರು.