ಭಾರತ್‌ ಜೋಡೋ ಯಾತ್ರೆಗೆ ಚಳ್ಳಕೆರೆ ಸಜ್ಜು; ಬಿಗಿ ಪೊಲೀಸ್ ಬಂದೋಬಸ್ತ್

ಭಾರತ್‌ ಜೋಡೋ ಯಾತ್ರೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕು ಮೂಲಕ ಬಳ್ಳಾರಿ ಜಿಲ್ಲೆಗೆ ತೆರಳಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆ ಐಜಿಪಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಸೂಕ್ತ ಬಂದೋಬಸ್‌್ತ ಕೈಗೊಳ್ಳಲಿದೆ ಎಂದು ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.

Challakere congress preparation to bharat jodo yatra rav

ಚಳ್ಳಕೆರೆ (ಅ.9) : ಭಾರತ್‌ ಜೋಡೋ ಯಾತ್ರೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕು ಮೂಲಕ ಬಳ್ಳಾರಿ ಜಿಲ್ಲೆಗೆ ತೆರಳಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆ ಐಜಿಪಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಸೂಕ್ತ ಬಂದೋಬಸ್‌್ತ ಕೈಗೊಳ್ಳಲಿದೆ ಎಂದು ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ನದು ಭಾರತ್‌ ಬಿಟ್ಟು ಓಡೋ ಯಾತ್ರೆ: ಕಟೀಲ್‌

ಶನಿವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಟಿ. ರಘುಮೂರ್ತಿ ಸೇರಿ ಪಕ್ಷದ ಪ್ರಮುಖರೊಡನೆ ಯಾತ್ರೆ ಮಾರ್ಗ ಮತ್ತು ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರಲ್ಲದೆ, ಪೊಲೀಸ್‌ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಹಿರಿಯೂರು ಮೂಲಕ ಚಳ್ಳಕೆರೆ ಮೊಳಕಾಲ್ಮೂರು ತಾಲೂಕುಗಳಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪಾದಯಾತ್ರೆ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವರು. ಸಾರ್ವಜನಿಕರೂ ರಾಹುಲ್‌ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲಿದ್ದಾರೆ. ವಿವಿಧ ಜಿಲ್ಲೆಗಳ ಪಕ್ಷದ ಮುಖಂಡರೂ ಭಾಗವಹಿಸಲಿದ್ದು, ಸಂಚಾರ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಯಾತ್ರೆಯ ವಿವರ:

ಶಾಸಕ ಟಿ.ರಘುಮೂರ್ತಿ ಮಾತನಾಡಿ ಅ.11ರ ಬೆಳಗ್ಗೆ 6.30ಕ್ಕೆ ಹರ್ತಿಕೋಟೆಯಿಂದ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮಕ್ಕೆ 11 ಗಂಟೆಗೆ ಆಗಮಿಸಿದ್ದು, ಅಲ್ಲಿ ಊಟದ ನಂತರ ವಿಶ್ರಾಂತಿ ಕೈಗೊಂಡು ಪಕ್ಷದ ಕೆಲ ಮುಖಂಡರೊಂದಿಗೆ ಚರ್ಚಿಸಿ ಮಧ್ಯಾಹ್ನ 4ಕ್ಕೆ ಅಲ್ಲಿಂದ ಹೊರಟು ನಗರದ ನಿರ್ಮಲಾ ಲಾಡ್ಜ್‌ ಬಳಿಗೆ ಆಗಮಿಸಿ ಅಲ್ಲಿ ವಿಶ್ರಾಂತಿ, ಊಟದ ನಂತರ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವರು. ಅ.12ರ ಬುಧವಾರ ಬೆಳಗ್ಗೆ 6.30ಕ್ಕೆ ಗಂಧರ್ವ ಹೋಟೆಲ್‌ನಿಂದ ಪಾದಯಾತ್ರೆ ಪ್ರಾರಂಭವಾಗಿ ಬೆಂಗಳೂರು ರಸ್ತೆ, ನೆಹರೂ ವೃತ್ತ, ಬಳ್ಳಾರಿ ರಸ್ತೆ ಮೂಲಕ ಬುಡ್ನಹಟ್ಟಿ, ಚಿಕ್ಕಮ್ಮನಹಳ್ಳಿ, ಗಿರಿಯಮ್ಮನಹಳ್ಳಿ ಬಳಿ ಊಟ ನಂತರ ಹಿರೇಹಳ್ಳಿ ಟೋಲ್‌ ಬಳಿ ಯಾತ್ರೆ ತಂಗಲಿದೆ. ಅ.13ರ ಗುರುವಾರ ಅಲ್ಲಿಂದ ಹೊರಟು ಕೊಂಡ್ಲಹಳ್ಳಿ, ಕೋನಸಾಗರ ಮೂಲಕ ಮೊಳಕಾಲ್ಮೂರು ತಾಲೂಕಿಗೆ ಪಾದಯಾತ್ರೆ ಸಾಗಲಿದೆ ಎಂದರು.

ರಾಹುಲ್ ಗಾಂಧಿಯನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಡಿ.ಸುಧಾಕರ, ಮಾಜಿ ಶಾಸಕರಾದ ಎಸ್‌.ತಿಪ್ಪೇಸ್ವಾಮಿ, ಮುಖಂಡ ಯೋಗೇಶ್‌ಬಾಬು, ಹಿರಿಯೂರು ಡಿವೈಎಸ್ಪಿ ರೋಷನ್‌ ಜಮೀರ್‌, ಚಳ್ಳಕೆರೆ ಡಿವೈಎಸ್ಪಿ ರಮೇಶ್‌ಕುಮಾರ್‌, ಸಿಪಿಐ ಕೆ.ಸಮೀವುಲ್ಲಾ, ಸತೀಶ್‌, ಪಿಎಸ್‌ಐಗಳಾದ ಸತೀಶ್‌ನಾಯ್ಕ, ಡಿ.ತಿಮ್ಮಪ್ಪ, ಕಾಂತರಾಜು, ದೇವರಾಜು, ಮಾರುತಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios