Asianet Suvarna News Asianet Suvarna News

ರಾಹುಲ್‌ ಯಾತ್ರೆಗೆ ಇಂದು ಸೋನಿಯಾ: ಪಾಂಡವಪುರದಲ್ಲಿ ಕಾಂಗ್ರೆಸ್‌ ನಾಯಕಿ ನಡಿಗೆ

ಆ​ಯು​ಧ​ ಪೂಜೆ ಹಾಗೂ ವಿ​ಜ​ಯ​ದ​ಶಮಿ ಹ​ಬ್ಬದ ಅಂಗ​ವಾಗಿ ಸ್ಥ​ಗಿ​ತ​ಗೊಂಡಿದ್ದ ಕಾಂಗ್ರೆಸ್‌ನ ‘ಭಾ​ರತ್‌ ಜೋಡೋ’ ಪಾ​ದ​ಯಾತ್ರೆ ಪಾಂಡ​ವ​ಪುರ ತಾ​ಲೂ​ಕಿನ ಕೆ​ನ್ನಾಳು ಗ್ರಾ​ಮ​ದಿಂದ ಗುರುವಾರ ಬೆ​ಳಗ್ಗೆ ಪುನಾರಂಭಗೊಳ್ಳಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Rahul Gandhi Bharat Jodo Yatra To Nagamangala Sonia Gandhi Walk With Congress Padayatra gvd
Author
First Published Oct 6, 2022, 6:47 AM IST

ಮಂಡ್ಯ (ಅ.06): ಆ​ಯು​ಧ​ ಪೂಜೆ ಹಾಗೂ ವಿ​ಜ​ಯ​ದ​ಶಮಿ ಹ​ಬ್ಬದ ಅಂಗ​ವಾಗಿ ಸ್ಥ​ಗಿ​ತ​ಗೊಂಡಿದ್ದ ಕಾಂಗ್ರೆಸ್‌ನ ‘ಭಾ​ರತ್‌ ಜೋಡೋ’ ಪಾ​ದ​ಯಾತ್ರೆ ಪಾಂಡ​ವ​ಪುರ ತಾ​ಲೂ​ಕಿನ ಕೆ​ನ್ನಾಳು ಗ್ರಾ​ಮ​ದಿಂದ ಗುರುವಾರ ಬೆ​ಳಗ್ಗೆ ಪುನಾರಂಭಗೊಳ್ಳಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾ​ಹುಲ್‌ ​ಗಾಂಧಿ ನೇ​ತೃ​ತ್ವದ ಐ​ಕ್ಯತಾ ಯಾತ್ರೆ ಅ.3ರಂದು ಮೈಸೂ​ರಿನ ಕ​ಳ​ಸ್ತ​ವಾ​ಡಿ​ಯಿಂದ ಶ್ರೀ​ರಂಗ​ಪ​ಟ್ಟಣ, ಕಿ​ರಂಗೂರು ಮಾರ್ಗವಾಗಿ ಪಾಂಡ​ವ​ಪುರ ತಾ​ಲೂಕಿನ ಕೆ​ನ್ನಾಳು ಗ್ರಾ​ಮ​ವನ್ನು ತ​ಲು​ಪಿತ್ತು. 

ಬಳಿಕ, ರಾಹುಲ್‌ ಗಾಂಧಿಯವರು ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆಯ ಕ​ಬಿನಿ ಹಿನ್ನೀ​ರು ಬ​ಳಿ ಇರುವ ಆರೆಂಜ್‌ ಕೌಂಟಿ ರೆಸಾರ್ಚ್‌ಗೆ ತೆರಳಿ, ತಾಯಿ ಸೋನಿಯಾ ಗಾಂಧಿ ಜೊತೆ ವಿ​ಶ್ರಾಂತಿ ಪ​ಡೆ​ದಿ​ದ್ದರು. ಹಬ್ಬದ ಬಳಿಕ ಗುರುವಾರದಿಂದ ಯಾತ್ರೆ ಪುನಾರಂಭಗೊಳ್ಳಲಿದ್ದು, ಕೆ​ನ್ನಾಳು ಗ್ರಾಮದಿಂದ ರಾಹುಲ್‌ ಅವರು ಪಾ​ದ​ಯಾ​ತ್ರೆ​ಯನ್ನು ಮುಂದು​ವ​ರಿ​ಸ​ಲಿ​ದ್ದಾರೆ. ಸೋನಿಯಾ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಸೋನಿಯಾ ಅವರು ಸೋಮವಾರ ಮೈಸೂರಿಗೆ ಆಗಮಿಸಿ, ಆರೆಂಜ್‌ ಕೌಂಟಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

Bharat Jodo Yatra: 40% ಬಗ್ಗೆ ಪ್ರಧಾನಿ ಮೌನವೇಕೆ: ರಾಹುಲ್‌ ಗಾಂಧಿ ಪ್ರಶ್ನೆ

ಕೆನ್ನಾಳು ಗ್ರಾಮದಿಂದ ಆರಂಭವಾಗಲಿರುವ ಪಾದಯಾತ್ರೆ, ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಸರ್ಕಲ್‌ ಮೂಲಕ ನಾಗಮಂಗಲ ತಾಲೂಕಿನ ಖರಡ್ಯ ಗ್ರಾಮವನ್ನು ಪ್ರವೇಶಿಸಲಿದೆ. ಮಧ್ಯಾಹ್ನ 12 ಗಂಟೆಗೆ ಚೌಡಗೋನಹಳ್ಳಿ ಗೇಟ್‌ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಮುಂದುವರಿದು ಬ್ರ​ಹ್ಮ​ದೇ​ವ​ರ​ಹ​ಳ್ಳಿ​ಯ ಎಂ.ಹೊಸೂರು ಗೇಟ್‌ ಹತ್ತಿರದ ಆಯುರ್ವೇದಿಕ್‌ ಕಾಲೇಜಿಗೆ ರಾಹುಲ್‌ ಆಗಮಿಸಲಿದ್ದಾರೆ. ಸಭೆ ಬಳಿಕ, ರಾಹುಲ್‌ ಅಲ್ಲಿಯೇ ವಾ​ಸ್ತವ್ಯ ಹೂ​ಡ​ಲಿದ್ದಾರೆ.

ನವಲಗುಂದದಿಂದ 2 ಸಾವಿರ ಜನ ಭಾಗಿ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಅ. 13ರಂದು ಚಿತ್ರದುರ್ಗದ ಮೊಳಕಾಲ್ಮೂರಿಗೆ ತಲುಪಲಿದ್ದು, ನವಲಗುಂದ ವಿಧಾನಸಭಾ ಕ್ಷೇತ್ರದಿಂದ 2 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ನವಲಗುಂದ ಭಾರತ ಜೋಡೋ ಉಸ್ತುವಾರಿ ಪಿ.ಎಚ್‌. ನೀರಲಕಟ್ಟಿಹೇಳಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಭಾರತ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಸೇರಿ ಎಐಸಿಸಿ ಮುಖಂಡರು ಭಾಗವಹಿಸುತ್ತಿದ್ದು, ಪಾದಯಾತ್ರೆಗೆ ಮತ್ತಷ್ಟುಶಕ್ತಿ ತುಂಬಿದಂತಾಗಿದೆ. ಈ ಐತಿಹಾಸಿಕ ಯಾತ್ರೆ 2023ರ ಕರ್ನಾಟಕ ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ನೀಡಲಿದೆ ಎಂದು ಹೇಳಿದರು.

ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆ: Sonia Gandhi ಕೊಡಗು ಪ್ರವಾಸ ರದ್ದು, ಮೈಸೂರಿನಲ್ಲೇ ವಾಸ್ತವ್ಯ

ಈ ಸಂದರ್ಭ ಮಾಜಿ ಸಚಿವರಾದ ಕೆ.ಎನ್‌. ಗಡ್ಡಿ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಧಾರವಾಡ ಜಿಲ್ಲಾ ಸೇವಾದಳ ಅಧ್ಯಕ್ಷ ಚಂಬಣ್ಣಾ ಹಾಳದೋಟರ, ಉಪಾಧ್ಯಕ್ಷ ಎ.ವ್ಹಿ. ಶಟ್ಟರ, ನವಲಗುಂದ ಪುರಸಭೆ ಅಧ್ಯಕ್ಷ ಅಪ್ಪಣ್ಣಾ ಹಳ್ಳದ, ಮುಖಂಡರಾದ ವಿಜಯ ಕುಲಕರ್ಣಿ, ಎಸ್‌.ಡಿ. ಮಕಾನದಾರ, ಬಾಪುಗೌಡ ಪಾಟೀಲ, ಪದ್ಮಾವತಿ ಪೂಜಾರ, ಬಾಬಾಜಾನ ಮುಲ್ಲಾನವರ ಮುಂತಾದವರಿದ್ದರು.

Follow Us:
Download App:
  • android
  • ios