AAP Karnataka: ಪಂಜಾಬ್‌-ಕರ್ನಾಟಕ ರೈತರ ಸಮಸ್ಯೆ ಒಂದೇ: ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌

ಕರ್ನಾಟಕ-ಪಂಜಾಬ್‌ ರೈತರ ಸಮಸ್ಯೆ ಒಂದೇ ರೀತಿ ಇದ್ದು, ಕಬ್ಬಿಗೆ ಉತ್ತಮ ಬೆಲೆ, ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇನೆ. ದೆಹಲಿ-ಪಂಜಾಬ್‌ ಮಾದರಿ ಆಡಳಿತ ಇಲ್ಲಿಯೂ ಬರಲು ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲಿಸಲು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಜನತೆಗೆ ಮನವಿ ಮಾಡಿದರು.

PunjabKarnataka farmers problem is same Punjab CM Bhagwant Singh Mann at davanagere rav

ದಾವಣಗೆರೆ (ಮಾ.5) : ಕರ್ನಾಟಕ-ಪಂಜಾಬ್‌ ರೈತರ ಸಮಸ್ಯೆ ಒಂದೇ ರೀತಿ ಇದ್ದು, ಕಬ್ಬಿಗೆ ಉತ್ತಮ ಬೆಲೆ, ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇನೆ. ದೆಹಲಿ-ಪಂಜಾಬ್‌ ಮಾದರಿ ಆಡಳಿತ ಇಲ್ಲಿಯೂ ಬರಲು ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲಿಸಲು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌(Punjab Chief Minister Bhagwant Singh Mann) ಜನತೆಗೆ ಮನವಿ ಮಾಡಿದರು.

ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ಆಮ್‌ ಆದ್ಮಿ ಪಕ್ಷದ ರಾಜ್ಯ ಸಮಾವೇಶ(AAP convention) ಹಾಗೂ ವಿಧಾನಸಭೆ ಚುನಾವಣೆ(Karnataka assembly election) ಪ್ರಚಾರ ಕಾರ್ಯಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌(Dehli CM Arvind Kejriwal) ಜೊತೆಗೆ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ, ಇಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಕೆಲಸ ಆಗಬೇಕು. ರೈತರು, ಜನ ಸಾಮಾನ್ಯರು, ವಿದ್ಯಾರ್ಥಿ, ಯುವ ಜನರು, ನಿರುದ್ಯೋಗಿಗಳ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕಿದೆ ಎಂದರು.

Prajadhwani yatre: ಜನ ಜೀವನ ಸುಧಾರಣೆಗೆ ಕಾಂಗ್ರೆಸ್‌ ಕಂಕಣಬದ್ಧ: ಬಿಕೆ ಹರಿಪ್ರಸಾದ್‌

ಪಂಜಾಬ್‌ನ ಸರ್ಕಾರಿ ನೌಕರ(Panjab govt employees)ರ 18 ಸಾವಿರ ಕೋಟಿ ಹಣ ಮರಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ. ನಾವು ಗಾಳಿಯಲ್ಲಿ ಗುಂಡು ಹೊಡೆಯಲ್ಲ. ಕೆಲಸ ಮಾಡಿ, ಸಾಧಿಸಿ, ತೋರಿಸುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೂ ಸೈ. ದೆಹಲಿಯಂತೆ ಪಂಜಾಬ್‌ನಲ್ಲೂ ಸರ್ಕಾರಿ ಶಾಲೆ, ಆಸ್ಪತ್ರೆಗಳು ಉತ್ತಮವಾಗ ತೊಡಗಿವೆ. ಸರ್ಕಾರಿ ಶಾಲೆಗಳ ಮಕ್ಕಳ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡು ಬರುತ್ತಿದೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶೇ.99.70 ಫಲಿತಾಂಶ ಬರುತ್ತಿದೆ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ, ಉಚಿತವಾಗಿ ಗುಣಮಟ್ಟದ ಶಿಕ್ಷಣ ಬಡ, ಮಧ್ಯಮ ವರ್ಗದ ಮಕ್ಕಳಿಗೂ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರಗಳಿಂದ ಸಿಗುತ್ತಿದೆ ಎಂದು ತಿಳಿಸಿದರು.

ಆಪ್‌ ಬಗ್ಗದು, ಜಗ್ಗದು:

ಸಿಸೋಡಿಯಾ ಕಾರಣಕ್ಕೆ ಎಲ್ಲಿ ತಮ್ಮ ಮತಗಳು ತಪ್ಪುತ್ತವೋ ಎಂಬ ಭಯದಲ್ಲಿ ಮೋದಿ ಸರ್ಕಾರ ಅವರನ್ನು ಜೈಲಿಗೆ ಹಾಕಿಸಿದೆ. ಸಣ್ಣ ಪ್ಯಾರಾಸಿಟಾಮಲ್‌ ಮಾತ್ರೆಯಿಂದ ದೊಡ್ಡ ಶಸ್ತ್ರಚಿಕಿತ್ಸೆವರೆಗೂ ಉಚಿತ ಸೇವೆ ದಿಲ್ಲಿಯಲ್ಲಿದೆ. ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡಿದ ಸಿಸೋಡಿಯಾರನ್ನೇ ಜೈಲಿಗೆ ಹಾಕಿಸಿದ್ದು ಸರಿಯಲ್ಲ. ನಿಮ್ಮ ಇಡಿ, ಐಟಿ, ಸಿಬಿಐ ಬೆದರಿಕೆಗಳಿಗೆಲ್ಲಾ ಆಮ್‌ ಆದ್ಮಿ ಪಕ್ಷ ಬಗ್ಗದು, ಜಗ್ಗದು ಎಂದು ಹೇಳಿದರು.

ಭ್ರಷ್ಟಾಚಾರಗಳ ಸ್ವಚ್ಛಗೊಳಿಸುವ ಯಂತ್ರ ಪೊರಕೆ

ನಾವು ತಿನ್ನುವ ಬೆಣ್ಣೆದೋಸೆ, ಟೀ, ಕಾಫಿಯಿಂದ ಹಿಡಿದು ಎಲ್ಲದಕ್ಕೂ ತೆರಿಗೆ ಕಟ್ಟುತ್ತೇವೆ. ಅಷ್ಟೇ ಏಕೆ ನಾವು ರಾತ್ರಿ ಮಲಗಿದ್ದಾಗಲೂ ತೆರಿಗೆ ಕಟ್ಟುತ್ತೇವೆ. ನಿದ್ದೆಗೆ ತೆರಿಗೆನಾ ಅಂತಾ ಪ್ರಶ್ನೆ ಮಾಡಬೇಡಿ. ನಿಮ್ಮ ಸುಖ ನಿದ್ದೆಗೆ ಕಾರಣವಾಗುವ ಫ್ಯಾನ್‌, ಎಸಿಗೆ ಬಳಸುವ ವಿದ್ಯುತ್‌ಗೂ ಶುಲ್ಕ ಕಟ್ಟಬೇಕು. ಇಂತಹ ತೆರಿಗೆ ಹಣ ಲೂಟಿ ಮಾಡುವ ಸಚಿವರು, ಶಾಸಕರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲು ಭದ್ರವಾದ ತಿಜೋರಿ, ಮತ ಎಣಿಕೆ ಯಂತ್ರ ಇಟ್ಟುಕೊಂಡಿದ್ದಾರೆ. ಮೊನ್ನೆ ಸಿಕ್ಕಿ ಬಿದ್ದ ಶಾಸಕನ ಮಗನ ಮನೆಯಲ್ಲಿ 8 ಕೋಟಿ ನಗದು, ಶಾಸಕನ ಬೆಡ್‌ ರೂಂನಲ್ಲಿ ಹಣ ಎಣಿಸುವ ಯಂತ್ರ ಪತ್ತೆಯಾಗಿದೆಯೆಂದರೆ ಅದ್ಯಾವ ಪರಿ ಭ್ರಷ್ಟಾಚಾರ ಇಲ್ಲಿ ಬೇರೂರಿದೆ? ಇಂತಹ ಕಮಿಷನ್‌ ದಂಧೆ, ಭ್ರಷ್ಟಾಚಾರಗಳನ್ನು ಸ್ವಚ್ಛ ಮಾಡುವ ಯಂತ್ರವೇ ಪೊರಕೆ ಎಂದು ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ ಹೇಳಿದರು.

ಚಿಕ್ಕಮಗಳೂರು: ಇಂದು ಬಿಎಸ್‌ವೈಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ

ದೇಶವು ಯಾರ ಅಪ್ಪನ ಸ್ವತ್ತೂ ಅಲ್ಲ. ಇದು 130 ಕೋಟಿ ಜನರ ಆಸ್ತಿ. ಇದೇ ಪೊರಕೆ ಹಿಡಿದು, ರಾಜ್ಯದ ಜನತೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನವರನ್ನು ಮೊದಲು ಮನೆಗೆ ಕಳಿಸಿ. ಆಮ್‌ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಆ ಮೇಲೆ ನಿಮ್ಮ ಜಿಲ್ಲೆಯ ಶಾಸಕನಂತಹ ಭ್ರಷ್ಟರ ಹಿಡಿಯೋಣ.

ಭಗವಂತ್‌ ಸಿಂಗ್‌ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

Latest Videos
Follow Us:
Download App:
  • android
  • ios