ಪದುಚೆರಿ, (ಜ.17): ಬಿಜೆಪಿ ಶಾಸಕ ಹಾಗೂ ಬಿಜೆಪಿ ಘಟಕದ ಖಜಾಂಚಿ ಕೆ.ಜಿ.ಶಂಕರ್(70) ನಿಧನರಾಗಿದ್ದಾರೆ. ಇಂದು (ಭಾನುವಾರ) ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಮಗಲಿದ್ದ ಅವರಿಗೆ ಹೃದಯಘಾತವಾಗಿದ್ದು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿರುವುದಾಗಿ ಕುಟುಂಬ ತಿಳಿಸಿದೆ.

ಕಾರು ಅಪಘಾತ: ಸಚಿವರಿಗೆ ಗಂಭೀರ ಗಾಯ, ಪತ್ನಿ ಸೇರಿ ಇಬ್ಬರು ಸಾವು

ಶಂಕರ್​ ಅವರು ಕೇಂದ್ರಾಡಳಿತ ಪ್ರದೇಶದ ನಾಮನಿರ್ದೇಶಿತ ಶಾಸಕರಾಗಿದ್ದರು. ಇನ್ನು ಶಾಸಕರ ಸಾವಿಗೆ ಲೆಫ್ಟಿನೆಂಟ್​ ಗವರ್ನರ್​ ಸೇರಿ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್​ ಕಿರಣ್​ ಬೇಡಿ, ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ, ವಿಧಾನಸಭೆ ಸ್ಪೀಕರ್ ವಿ.ಪಿ. ಶಿವಕೋಲುಂಡು, ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಮಿನಾಥನ್ ಮತ್ತು ವಿಧಾನಸಭೆ ಕಾರ್ಯದರ್ಶಿ ಆರ್ ಮುನುಸಾಮಿ ಮೃತರ ಅಂತಿಮ ದರ್ಶನ ಪಡೆದುಕೊಂಡರು.