ಚಿಕ್ಕಬಳ್ಳಾಪುರದಲ್ಲಿ ಹೇಗಿದೆ ಉಪಚುನಾವಣೆ ಟ್ರೆಂಡ್? ಇಲ್ಲಿದೆ ಗ್ರೌಂಡ್ ರಿಪೋರ್ಟ್

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದ ಅನರ್ಹ ಶಾಸಕ ಡಾ ಸುಧಾಕರ್ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ಈ ಬಗ್ಗೆ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

public opinion in chikkaballapur By Election Ground report

ಚಿಕ್ಕಬಳ್ಳಾಪುರ, [ನ.25]: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ, ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ , ಜೆಡಿಎಸ್ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿತ್ತು. 

ಆದ್ರೆ ಈ ಬಾರಿ ಚಿಕ್ಕಬಳ್ಳಾಪುರ ಉಪಚುನಾವಣಾ ಕಣ ರಂಗೇರಿದ್ದು, ಅನರ್ಹ ಶಾಸಕ ಸುಧಾಖರ್ ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೇ 2 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿ, ಕೊನೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮಹಾಲಕ್ಷ್ಮೀ ಲೇಔಟ್ ಗ್ರೌಂಡ್ ರಿಪೋರ್ಟ್: ಯಾರಿಗೆ ಒಲಿಯಲಿದ್ದಾಳೆ 'ಮಾಹಾಲಕ್ಷ್ಮೀ'..?

ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ರು.  ಬಳಿಕ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ನಂತರ ಬದಲಾದ ರಾಜಕೀಯ ವಿದ್ಯಾಮಾನಗಳಿಂದ  ಅನರ್ಹರಾದ ಸುಧಾಕರ್ ಈಗ ಚಿಕ್ಕಬಳ್ಳಾಪುರ ಉಪಚುನಾವಣೆಯ  ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಎಂ ಆಂಜಿನಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆಂಜಿನಪ್ಪ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದು,  1980 ರಿಂದಲೂ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. 

 ಹೀಗಾಗಿ ಈ ಬಾರಿಯ ಉಪಕದನ ಹೆಚ್ಚುಕೂತೂಹಲ ಮೂಡಿಸಿದ್ದು, ರಾಜ್ಯದ ಗಮನ ಸೆಳೆದಿದೆ. ಹಾಗಾದ್ರೆ, ಸುಧಾಕರ್ ವಿಜಯ ಪತಾಕೆ ಹಾರಿಸ್ತಾರಾ..? ಸಿದ್ದರಾಮಯ್ಯ ಕಾಂಗ್ರೆಸ್ ಕಣವನ್ನು ಉಳಿಸಿಕೊಳ್ಳುತ್ತಾರಾ..? ಇನ್ನು ಈ ಕ್ಷೇತ್ರದ ಜಾತಿಲೆಕ್ಕಾಚಾರವೇನು..? ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಿದ್ದು, ಅದನ್ನು ಈ ಕೆಳಗೆ ಇರುವ ವಿಡಿಯೋಗಳಲ್ಲಿ ನೋಡಿ..
"

"

"

"

"

Latest Videos
Follow Us:
Download App:
  • android
  • ios