ಎಸ್‌ಟಿ ಸಮಾಜದ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ: ಸತೀಶ್‌ ಜಾರಕಿಹೊಳಿ

ಪ.ಪಂಗಡ ಸಮುದಾಯದ ಸಾಮಾಜಿಕ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು. ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಎಸ್‌ಟಿ ಘಟಕವು ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚುನಾವಣಾ ಪೂರ್ವಸಿದ್ದತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

Protection of ST society only by Congress Says Satish Jarkiholi gvd

ಮೈಸೂರು (ಏ.01): ಪ.ಪಂಗಡ ಸಮುದಾಯದ ಸಾಮಾಜಿಕ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು. ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಎಸ್‌ಟಿ ಘಟಕವು ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚುನಾವಣಾ ಪೂರ್ವಸಿದ್ದತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ಚುನಾವಣೆಯನ್ನು ಅಭೂತಪೂರ್ವವಾಗಿ ಗೆಲ್ಲಲು ಎಲ್ಲರೂ ಸಹಕರಿಸಬೇಕು. ಗ್ರಾಮಾಂತರ ಭಾಗದ 16 ಬ್ಲಾಕ್‌ ಸಮಿತಿ ಹಾಗೂ ನಗರದ 6 ಬ್ಲಾಕ್‌ ಸಮಿತಿಯ ಎಲ್ಲಾ ಮುಂಚೂಣಿ ಘಟಕಗಳು ಬಹಳ ಚುರುಕಿನಿಂದ ಕಾರ್ಯ ನಿರ್ವಹಿಸಬೇಕು.

ಮುಂದಿನ 40 ದಿನಗಳು ಸಂಪೂರ್ಣ ಚುನಾವಣಾ ಮಯವಾಗಿರುತ್ತದೆ. ಯಾವ ಒತ್ತಡಕ್ಕೂ ಹಾಗೂ ಆಮಿಷಗಳಿಗೂ ಬಲಿಯಾಗದೆ ನಮ್ಮ ಕಾರ್ಯಕರ್ತರು ನಿಷ್ಠೆ ಪ್ರಾಮಾಣಿಕತೆಯಿಂದ ಚುನಾವಣೆ ಎದುರಿಸಬೇಕು ಎಂದು ಅವರು ಹೇಳಿದರು. ಮೀಸಲಾತಿ ಹಾಗೂ ಅದನ್ನು ಅನುಷ್ಠಾನ ಮಾಡುವುದು ಬಿಜೆಪಿ ಶಾಸಕರಿಗೇ ಇನ್ನೂ ಗೊತ್ತಾಗುತ್ತಿಲ್ಲ. ಬಿಜೆಪಿ ಸುಳ್ಳುಗಳನ್ನು ಹೇಳಿ ಚುನಾವಣೆ ಗೆಲ್ಲುವ ಕೀಳು ಮಟ್ಟಕ್ಕೆ ಹೋಗಿದೆ. ಅವರನ್ನು ಸಮರ್ಥವಾಗಿ ಎದುರಿಸಲು ನಮ್ಮ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಹೋರಾಡಿ ತರಬೇತಿ ಪಡೆದು ಚುನಾವಣೆ ಗೆಲ್ಲಲು ಸನ್ನದ್ದರಾಗಬೇಕು. ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ಪ.ಜಾತಿ, ಪ.ಪಂಗಡಕ್ಕೆ ಸಾಕಷ್ಟು ಯೋಜನೆ ನೀಡಿತ್ತು. 

ದಾವಣಗೆರೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ, ಟಿಕೆಟ್‌ ಹಂಚಿಕೆ: ಶೋಭಾ ಕರಂದ್ಲಾಜೆ

ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪರಿಶಿಷ್ಟರಿಗೆ ವಿದೇಶಕ್ಕೆ ಹೋಗುವ ಅವಕಾಶ ಕೊಟ್ಟಿದ್ದರು. ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ ಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿತ್ತು ಎಂದರು. ಕಾಂಗ್ರೆಸ್‌ ನೀಡಿದ್ದ ಸವಲತ್ತನ್ನು ಇಂದು ಜನರಿಗೆ ತಿಳಿಸುವ ಅನಿವಾರ್ಯವಿದೆ. ನಾವು ಸಾಮಾನ್ಯ ಜನರ ಜೀವನ ಕಟ್ಟಿಕೊಡುತ್ತೇವೆ ಎಂದು ವಿಶ್ವಾಸ ಹುಟ್ಟಿಸುವ ಕೆಲಸ ಮಾಡಬೇಕು. ಸಮಯ ಬಹಳ ಕಡಿಮೆ ಇದೆ. ಈ ಭಾಗದಲ್ಲಿ ಒಂದು ತರಬೇತಿ ಶಿಬಿರ ಆಯೋಜಿಸಿ ಉತ್ತಮ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಮಾಜಕ್ಕೆ ನೀಡಬೇಕಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಲು ಮೊದಲು ನಾವು ಸುಶಿಕ್ಷಿತರಾಗಬೇಕು ಎಂದು ಅವರು ಹೇಳಿದರು. 

ನಮ್ಮ ಪ್ರಣಾಳಿಕೆಯಲ್ಲಿ 165 ಭರವಸೆ ಇದೆ. ಅದರಲ್ಲಿ 4 ಘೋಷಣೆ ಮಾಡಿದ್ದೇವೆ. ಮುಂದೆ ಹಲವು ಘೋಷಣೆ ಮಾಡುತ್ತೇವೆ. ಬಿಜೆಪಿ ಸುಳ್ಳನ್ನು ಹೇಳಿ ಹೇಳಿ ಜನರಿಗೆ ಮೋಸ ಮಾಡಿ ಸಮಾಜವನ್ನು ದಾರಿ ತಪ್ಪಿಸುತ್ತಿದೆ. ಪರಿಶಿಷ್ಟಸಮುದಾಯಾಗಳು ಹಲವಾರು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರಗರಿದ್ದಾರೆ. ಆದ್ದರಿಂದ ಬಹಳ ಜಾಗರೂಕತೆಯಿಂದ ಈ ಬಾರಿ ಮತ ಹಾಕಬೇಕು ಎಂದರು. ಸಂಸದೀಯ ಉಸ್ತುವಾರಿ ಎಂ.ಕೆ. ರಾಘವನ್‌ ಮಾತನಾಡಿ, ಬಿಜೆಪಿಯ ಸುಳ್ಳು ಅಪಪ್ರಚಾರಕ್ಕೆ ಕಾಂಗ್ರೆಸ್‌ ಬಲಿಯಾಗುತ್ತಿದೆ. ಸುಗ್ರೀವಾಜ್ಞೆಗಳ ಮೂಲಕ ಸಮಾಜಕ್ಕೆ ಮಾರಕವಾದ ಕಾನೂನು ಜಾರಿಗೊಳಿಸಿ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. 

ಈ ದೇಶವನ್ನು ಸುಭದ್ರವಾಗಿ ಇಡಲು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಮೊದಲು ಕಾಂಗ್ರೆಸ್‌ ಎಂದರೆ ಏನು ಎಂದು ಜನರಿಗೆ ತಿಳಿಸಬೇಕು. ಸಾಮಾಜಿಕ ಸಿದ್ಧಾಂತಗಳನ್ನು ನೆಲೆಯಾಗಿಸಿಕೊಂಡ ಏಕೀಕ ಪಕ್ಷ ಎಂದರೆ ಕಾಂಗ್ರೆಸ್‌. ಬಿಜೆಪಿ ಪ.ಜಾತಿ, ಪ.ಪಂಗಡಕ್ಕೆ ಏನು ಮಾಡಿಲ್ಲ. ಒಂದು ಸರ್ಕಾರ ಸಾಮಾನ್ಯ ಜನರಿಗೂ ಬದುಕು ಕಟ್ಟಿಕೊಡಬೆಕು. ಅದನ್ನು ಸಿದ್ದರಾಮಯ್ಯ ಸರ್ಕಾರ ಕೊಟ್ಟಿತ್ತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತದೆ ಎಂದು ಜನ ಸಾಮಾನ್ಯರು ಮಾನತಾಡುತ್ತಿದ್ದಾರೆ ಎಂದು ಅವರು ನುಡಿದರು.

ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ: ಅಣ್ಣಾಮಲೈ

ಶಾಸಕರಾದ ಎಚ್‌.ಪಿ. ಮಂಜುನಾಥ್‌, ಅನಿಲ್‌ ಚಿಕ್ಕಮಾದು, ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಕೆ.ಆರ್‌. ನಗರ ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ರಾಜ್ಯ ಎಸ್‌ಟಿ ಘಟಕದ ಅಧ್ಯಕ್ಷ ಪಾಲಯ್ಯ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌, ಕೆ. ಹರೀಶ್‌ಗೌಡ, ಮಾವಿನಹಳ್ಳಿ ಸಿದ್ದೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಬಸವರಾಜ, ನಗರ ಎಸ್‌ಟಿ ಘಟಕದ ಅಧ್ಯಕ್ಷ ರೋಹಿತ್‌, ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಇದ್ದರು.

Latest Videos
Follow Us:
Download App:
  • android
  • ios