ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ; ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದ ಸಂಸದ ಡಿಕೆ ಸುರೇಶ್!
ನಾವ್ ಹೇಳೋದು ಕೇಳ್ರಪ್ಪ. ಅವರು ಹೇಳೋದು, ಬೇರೆಯವರು ಹೇಳೋದನ್ನು ಕೇಳೋದು ಬಿಡಿ.. ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಪಡೆದ ವೇಳೆ ನಾಸಿರ್ ಹುಸೇನ್ ಬೆಂಬಲಿಗರಿಂದ. ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಮಾಧ್ಯಮಗಳ ವಿರುದ್ಧವೇ ಸಂಸದ ಡಿಕೆ ಸುರೇಶ್ ಆರೋಪ ಮಾಡಿದರು.
ಬೆಂಗಳೂರು (ಮಾ.3): ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪಾಕ್ ಪರ ಘೋಷಣೆ ಕೂಗುವುದು ತಪ್ಪು ಅಂತಾ ಸಿಎಂ ಹೇಳಿದ್ದಾರೆ. ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣ ಮಾಧ್ಯಮಗಳಲ್ಲಿ ತೋರಿಸಿದ್ರಿ ಆದರೆ ಮಂಡ್ಯದ RSS ಅವರು ಕೂಗಿದ್ದನ್ನ ಯಾಕೆ ದೊಡ್ಡದಾಗಿ ತೋರಿಸ್ತಿಲ್ಲ. ಬಿಜೆಪಿ ಆರೆಸ್ಸೆಸ್ ಕೂಗಿದ್ದು ಯಾಕೆ ದೊಡ್ಡದು ಮಾಡ್ಲಿಲ್ಲ ಎಂದು ಸಂಸದ ಡಿಕೆ ಸುರೇಶ್ ಮಾಧ್ಯಮಗಳ ಮೇಲೆಯೇ ಆರೋಪ ಮಾಡಿದರು.
ನಾವ್ ಹೇಳೋದು ಕೇಳ್ರಪ್ಪ. ಅವರು ಹೇಳೋದು, ಬೇರೆಯವರು ಹೇಳೋದನ್ನು ಕೇಳೋದು ಬಿಡಿ. ಮಂಡ್ಯ ಕೇಸ್ ನಲ್ಲಿ RSS ಕೂಗಿದಾಗ ಮಾಧ್ಯಮಗಳಲ್ಲಿ ಯಾಕೆ ದೊಡ್ಡ ಸುದ್ದಿ ಮಾಡಲಿಲ್ಲ. RSS ಅವರ ಮೇಲೆ ಈಗಲೂ ಕೇಸ್ ಹಾಕೋಕೆ ಅವಕಾಶ ಇದೆ ಅಲ್ವಾ? ನಮಗೆ ಕೇಸ್ ಹಾಕಿದ್ರೆ ಪರಿಹಾರ ಸಿಗುತ್ತಾ ಅಂತಾ ಅಲ್ಲ. ಮಾಧ್ಯಮಗಳು ಅನೇಕ ಬಾರಿ ವಿಷಯ ತಿರುಚಿದ್ದಾರೆ. ಯಾವ ಯಾವ ಸಂದರ್ಭದಲ್ಲಿ ವಿಷಯ ತಿರುಚಿದ್ದೀರಾ?
ಎಫ್‌ಎಸ್‌ಎಲ್ ವರದಿ ಮುಚ್ಚಿ ಮತ್ತೊಂದು ಬೋಗಸ್ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ: ಬಿ.ವೈ. ವಿಜಯೇಂದ್ರ
ಕಳೆದ 10 ವರ್ಷಗಳಲ್ಲಿ ಬಿಜೆಪಿಯನ್ನ ಎಷ್ಟು ಪ್ರೊಜೆಕ್ಟ್ ಮಾಡಿದ್ದೀರಾ. ಕಳೆದ 10 ವರ್ಷಗಳಲ್ಲಿ ಮಾಧ್ಯಮಗಳು ಪ್ರೊಜೆಕ್ಟ್ ಮಾಡಿರೋ ಕಾಮಗಾರಿ, ಕೆಲಸಗಳು, ಯೋಜನೆಗಳನ್ನ ಗ್ರೌಂಡ್ ನಲ್ಲಿ ಈಗ ತೋರಿಸಿ ನೋಡೋಣ. ಎಲ್ಲೆಲ್ಲೆ ಬಿಟ್ಟು ಹೋಗಿದೆ, ಎಲ್ಲೆಲ್ಲಿ ಕಳೆದು ಹೋಗಿದೆ ಅಂತ ನಿಮಗೆ ಗೊತ್ತಾಗುತ್ತದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ನಮ್ಮನ್ನು ಕನ್ಸಿಡರ್ ಮಾಡಿ. ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಂಸದ ಡಿಕೆಸುರೇಶ್.