Asianet Suvarna News Asianet Suvarna News

Karnataka Politics: ಪ್ರಿಯಾಂಕ ಖರ್ಗೆ ಅಪ್ರಬುದ್ಧ ರಾಜಕಾರಣಿ: ಸಚಿವ ಬೈರತಿ

*  ನೈಟ್‌ ಕರ್ಫ್ಯೂ ಬಗ್ಗೆ ಸರ್ಕಾರದ ನಿಲುವು ಸಮರ್ಥಿಸಿಕೊಂಡ ಸಚಿವ ಬೈರತಿ
*  ಕ್ಯಾಬಿನೆಟ್‌ ವಿಸ್ತರಣೆ ವರಿಷ್ಠರ ನಿರ್ಧಾರ
*  ಸುರಪುರ ನಗರ ಅಭಿವೃದ್ಧಿಗೆ 100 ಕೋಟಿ ನೀಡುವೆ
 

Priyank Kharge is an Immature Politician Says Byrati Basavaraj grg
Author
Bengaluru, First Published Dec 29, 2021, 12:02 PM IST

ಸುರಪುರ(ಡಿ.29):  ನಗರದ ಜನತೆಯ ಮನೆಬಾಗಿಲಿಗೆ ಕುಡಿಯುವ ನೀರು ತಲುಪಿಸುವ ಯೋಜನೆಗೆ ಅಡಿಗಲ್ಲು ಹಾಕಿದ್ದೇವೆ. ಜನರ ಕಾಳಜಿಗೆ ಮೊದಲ ಆದ್ಯತೆ ನೀಡುತ್ತೇವೆ. ಸುರಪುರ(Surapura) ನಗರ ಅಭಿವೃದ್ಧಿಗೆ 100 ಕೋಟಿ ನೀಡಲಾಗುವುದು. ಶಾಶ್ವತ ನೀರಿಗಾಗಿ ಹಲವು ದಶಕಗಳ ಕಾಲದಿಂದ ಹೋರಾಟ ನಡೆದಿದ್ದು, ಇಂದು ಮುಕ್ತಿ ದೊರೆತಂತಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ (Byrati Basavaraj) ಹೇಳಿದರು. ನಗರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ಕೃಷ್ಣಾ ನದಿ(Krishna River) ಮೂಲದಿಂದ ಸುರಪುರ ನಗರಸಭಾ ವ್ಯಾಪ್ತಿ ಹಾಗೂ ಮಾರ್ಗ ಮಧ್ಯದ ಮೂರು ಹಳ್ಳಿಗಳ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಸಕ ರಾಜೂಗೌಡ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ನಿಮ್ಮ ಮನೆ ಬಾಗಿಲಿಗೆ ನೀರು ಕೊಡುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa), ಹಾಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ(Basavaraj Bommai) ಅವರು ಈ ಯೋಜನೆಗೆ 192 ಕೋಟಿ ನೀಡುವ ಮೂಲಕ ಸಾಧನೆಯ ಹಾದಿ ತುಳಿದಿದ್ದಾರೆ. ಕಾಮಗಾರಿ ವೇಗವಾಗಿ ಮುಗಿಸಿ ಶೀಘ್ರ ಉದ್ಘಾಟನೆಯಾಗಲಿ. 2022 ಅಂತ್ಯದೊಳಗೆ ಕುಡಿಯಲು ನೀರು ಒದಗಿಸಲು ಸರಕಾರ ತೀರ್ಮಾನಿಸಿದೆ. ಒಳಚರಂಡಿ ನಿಗಮಕ್ಕೆ ಅಧ್ಯಕ್ಷರಾದ ಬಳಿಕ 1000 ಕೋಟಿ ರು.ಗಳು ನೀಡಲಾಗಿದೆ. ಎಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅದನ್ನು ಗುರುತಿಸಿ ನೀರು ಒದಗಿಸಿಕೊಡಲು ತೀರ್ಮಾನಿಸಲಾಗಿದೆ ಎಂದರು.

Land Acquire Case : ಸಚಿವ ಬೈರತಿ ಬಸವರಾಜ್‌ಗೆ ಬಿಗ್ ರಿಲಿಫ್ ನೀಡಿದ ಕೋರ್ಟ್

ಶಹಾಪುರ ಕ್ಷೇತ್ರಕ್ಕೆ 70 ಕೋಟಿ ರು.ಗಳು ನೀಡಲಾಗಿದೆ. ಯಾವುದೇ ಕ್ಷೇತ್ರಕ್ಕೂ ತಾರತಮ್ಯ ಮಾಡುವುದಿಲ್ಲ. ಆದ್ಯತೆಗನುಗುಣವಾಗಿ ಅನುದಾನ ನೀಡಲಾಗುವುದು. ಜನರ ಸೇವೆ ಮಾಡಿದರೆ ಅವರು ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ಜನರ ವಿಶ್ವಾಸ, ನಂಬಿಕೆ ಅಗತ್ಯ. ಕಷ್ಟ, ಸುಖ,ದುಃಖ ದುಮ್ಮಾನದಲ್ಲಿ ಅವರೊಡನೆ ಸ್ಪಂದಿಸಿದರೆ ಆಶೀರ್ವಾದ ಮಾಡುತ್ತಾರೆ ಎಂದರು.

ಸಂಸದ ರಾಜಾ ಅಮರೇಶ ನಾಯಕ(Raja Amareshwara Nayak) ಮಾತನಾಡಿ, ಕುಡಿಯುವ ನೀರಿಗಾಗಿ ಕೇಂದ್ರದಿಂದ ಯಾದಗಿರಿ ಜಿಲ್ಲೆಗೆ 1400 ಕೋಟಿ ಮಂಜೂರಾಗಿದೆ. ರಾಯಚೂರು ಜಿಲ್ಲೆಗೆ 1988 ಕೋಟಿ ರು.ಗಳಲ್ಲಿ 1500 ಕೋಟಿ ರು. ಟೆಂಡರ್‌ ಕರೆಯಲಾಗಿದೆ. ನಾರಾಯಣಪುರ ಜಲಾಶದಿಂದ ಕುಡಿಯುವ ನೀರು ಒದಗಿಸಲು ಶ್ರಮಿಸಲಾಗುವುದು. ನಾವು ಮಾಡುವ ಕೆಲಸಗಳು ನಮ್ಮನ್ನು ಶಾಶ್ವತವಾಗಿ ಇರುವಂತೆ ಮಾಡುತ್ತವೆ ಎಂದರು.
ಜ.12ರಂದು ಕೆರೆ ತುಂಬುವ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿಗಳೊಡನೆ ನಿಮ್ಮ ಕ್ಷೇತ್ರಕ್ಕೆ ಆಗಮಿಸಲಿದ್ದೇನೆ. ನಿಷ್ಠಾವಂತ ಶಾಸಕ ರಾಜೂಗೌಡ ಅವರೊಂದಿಗೆ ಪ್ರತಿಯೊಬ್ಬರೂ ನಿಲ್ಲಬೇಕು. ಮುಂಬರುವ ದಿನಗಳಲ್ಲಿ ಸುರಪುರ ಮತಕ್ಷೇತ್ರದಲ್ಲಿ ಶಾಸಕರೊಂದಿಗೆ ಹಳ್ಳಿಗಳ ಪ್ರವಾಸ ಮಾಡುವೆ ಅಂತ ನಗರಾಭಿವೃದ್ಧಿ ಸಚಿವ ಬಸವರಾಜ್‌ ಬೈರತಿ ತಿಳಿಸಿದ್ದಾರೆ.  

ಪ್ರಿಯಾಂಕ ಖರ್ಗೆ ಅಪ್ರಬುದ್ಧ ರಾಜಕಾರಣಿ : ಸಚಿವ ಬೈರತಿ

ಸುರಪುರ: ಕೋವಿಡ್‌(Covid19) ತಡೆಗಟ್ಟುವ ನಿಟ್ಟಿನಲ್ಲಿ ನೈಟ್‌ ಕರ್ಫ್ಯೂ(Night Curfew) ವಿಚಾರವಾಗಿ ಸರ್ಕಾರದ ನಿಲುವನ್ನು ಟೀಕಿಸಿದ ಶಾಸಕ ಪ್ರಿಯಾಂಕ ಖರ್ಗೆ(Priyank Kharge) ಅಪ್ರಬುದ್ಧ ರಾಜಕಾರಣಿ ಎಂದು ನಗರಾಭಿವೃದ್ಧಿ ಸಚಿವ ಬಸವರಾಜ್‌ ಬೈರತಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಗರಕ್ಕಾಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತ ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಕಠಿಣ ಕ್ರಮಗಳ ಸಮರ್ಥಿಸಿಕೊಂಡ ಅವರು, ನೈಟ್‌ ಕರ್ಫ್ಯೂ ಬಗ್ಗೆ ಪ್ರಿಯಾಂಕ ಖರ್ಗೆ ಅರೋಪ ಬಾಲಿಶತನದ ಹೇಳಿಕೆಯಾಗಿದೆ. ಸರ್ಕಾರ ಕೈಗೊಂಡಿರುವ ನೈಟ್‌ ಕರ್ಫ್ಯೂ ಕ್ರಮ ಸರಿಯಾಗಿದೆ ಎಂದ ಅವರು, ಕೋವಿಡ್‌ ನಿಯಮ ಪಾಲನೆ ಸರ್ಕಾರದ್ದಷ್ಟೇ ಜವಾಬ್ದಾರಿಯಲ್ಲ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇನ್ನು, ಇಂತಹ ಕ್ರಮಗಳಿಂದಾಗಿ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ, ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕರ ಆರೋಗ್ಯ ಮುಖ್ಯ. ಗುಂಪುಗೂಡುವುದನ್ನು ಸ್ವತಃ ನಿರ್ಬಂ​ಧಿಸಬೇಕು, ಕೋವಿಡ್‌ ನಿಯಂತ್ರಣದ ಸಾಧಕ -ಬಾಧಕಗಳ ಕುರಿತು ಸರ್ಕಾರ ಕಠಿಣ ನಿಲುವು ತಾಳಿದೆ. ಸಾರ್ವಜನಿಕರ ಆರೋಗ್ಯದ ಹಿನ್ನೆಲೆಯಲ್ಲಿ ನೈಟ್‌ ಕರ್ಫ್ಯೂ  ಜಾರಿಗೆ ತರಲಾಗಿದೆ ಎಂದರು.

Kalaburagi Politics: ಸಂಸದ ಜಾಧವ್‌ ವಿರುದ್ಧ ಕ್ರಿಮಿನಲ್‌ ಖಟ್ಲೆ: ಪ್ರಿಯಾಂಕ್‌ ಗುಡುಗು

ಕ್ಯಾಬಿನೆಟ್‌ ವಿಸ್ತರಣೆ ವರಿಷ್ಠರ ನಿರ್ಧಾರ:

ಕ್ಯಾಬಿನೆಟ್‌ ವಿಸ್ತರಣೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬೈರತಿ, ಯಾವ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬೇಕು, ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ಮತ್ತು ವರಿಷ್ಠರ ವಿವೇಚನೆ ಬಿಟ್ಟಿದ್ದು. ಕ್ಯಾಬಿನೆಟ್‌ ವಿಸ್ತರಣೆ(Cabinet Expansion) ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಬಿಜೆಪಿ(BJP) ವರಿಷ್ಠರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ(Kalyana-Karnataka) ಭಾಗದ ಶಾಸಕರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಮೇರು ಸ್ಥಾನಮಾನಗಳನ್ನು ನೀಡಿ ಬರುವ ಸಂಪುಟ ವಿಸ್ತರಣೆಯಾದಲ್ಲಿ ಈ ಭಾಗಕ್ಕೆ ನ್ಯಾಯ ಸಿಗುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತಾರೆ. ನಗರೋತ್ಥಾನ ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಗೆ 1000 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ನರಸಿಂಹನಾಯಕ ರಾಜೂಗೌಡ, ಡಾ. ಸುರೇಶ ಸಜ್ಜನ್‌, ಪ್ರಕಾಶ ಸಜ್ಜನ್‌ ಇತರಿದ್ದರು.
 

Follow Us:
Download App:
  • android
  • ios