Land Acquire Case : ಸಚಿವ ಬೈರತಿ ಬಸವರಾಜ್‌ಗೆ ಬಿಗ್ ರಿಲಿಫ್ ನೀಡಿದ ಕೋರ್ಟ್
* ಸಚಿವ ಬೈರತಿ ಬಸವರಾಜ್ ವಿರುದ್ಧ ಭೂ ಕಬಳಿಕೆ ಆರೋಪ ಪ್ರಕರಣ
* ಸಚಿವ ಬೈರತಿ ಬಸವರಾಜ್‌ಗೆ ಬಿಗ್ ರಿಲೀಫ್ ,
* ಬೈರತಿ ಬಸವರಾಜ್‌ಗೆ ಬಿಗ್ ರಿಲಿಫ್ ನೀಡಿದ ಧಾರವಾಡ ಹೈಕೋರ್ಟ್
ಧಾರವಾಡ, (ಡಿ.21): ಭೂ ಕಬಳಿಕೆ ಆರೋಪ ಪ್ರಕರಣದಲ್ಲಿ9v) ಸಚಿವ ಬೈರತಿ ಬಸವರಾಜ್‌ಗೆ(Byrathi Basavaraj ) ಕೋರ್ಟ್ ಬಿಗ್ ರಿಲೀಸ್ ನೀಡಿದೆ.
10ನೇ ಎಸಿಎಂಎಂ ವಿಶೇಷ ಕೊರ್ಟ್ ವಿಚಾರಣೆಗೆ ಧಾರವಾಡ ಹೈಕೋರ್ಟ್(Dharwad High Court) ತಡೆ ನೀಡಿದ್ದು, ಜನವರಿ ಎರಡನೇ ವಾರಕ್ಕೆ ವಿಚಾರಣೆ ಮುಂದೂಡಿದೆ. ಇದರೊಂದಿಗೆ ಸಧ್ಯಕ್ಕೆ ಬೈರತಿ ಬಸವರಾಜ್ ನಿರಾಳರಾಗಿದ್ದಾರೆ.
Belagavi Session: ಭೈರತಿ ಬಸವರಾಜ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು, ಅಧವೇಶನದಲ್ಲಿ ಕೋಲಾಹಲ
ಬೆಂಗಳೂರು(Benglauur) ಕೆ ಆರ್ ಪುರಂನಲ್ಲಿ 22 ಏಕರೆ ಜಮೀನು ಅಣ್ಣಯ್ಯಪ್ಪ ಎಂಬುವವರಿಂದ 2003ರಲ್ಲಿ ಕಾನೂನು ಬಾಹಿರ ಖರೀದಿ ಮಾಡಿದ್ದ ಆರೋಪ ಇತ್ತು, ಈ ಬಗ್ಗೆ ಮಾದಪ್ಪ ಎಂಬುವವರು ದೂರು ನೀಡಿದ್ದರು. ನಂತರ ಪೊಲೀಸರು ಬಿ ರಿಪೋರ್ಟ್ ಹಾಕಿದ್ದರು.
ಇದನ್ನ ಮಾದಪ್ಪ ಬಿ ರಿಪೋರ್ಟ್ ಪ್ರಶ್ನೆ ಮಾಡಿ ನ್ಯಾಯಾಲಯದ ಮೊರೆ ಹೊಗಿದ್ದರು. ಜನಪ್ರತಿಗಳ ವಿಶೇಷ ನ್ಯಾಯಾಲಯ ಬಿ ರಿಪೋರ್ಟ್ ವಜಾ ಗೊಳಿಸಿ ಪ್ರಕರಣದಲ್ಲಿನ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಸಮನ್ಸ ಜಾರಿ ಗೊಳಿಸಿತ್ತು.
ಇದನ್ನ ರದ್ದು ಪಡಿಸಲು ಭೈರತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ 10ನೇ ಎಸಿಎಂಎಂ ವಿಶೇಷ ಕೊರ್ಟ್ ವಿಚಾರಣೆಗೆ ಧಾರವಾಡ ಹೈಕೋರ್ಟ್ ತಡೆ ನೀಡಿದ್ದು, ಜನವರಿ ಎರಡನೇ ವಾರಕ್ಕೆ ಮುಂದೂಡಿದೆ.
"
ಅಧಿವೇಶನದಲ್ಲಿ ವಾಗ್ವಾದ
ಸಚಿವ ಬೈರತಿ ಬಸವರಾಜ್ ವಿರುದ್ಧದ ಭೂಹಗರಣದಲ್ಲಿ ಎಫ್‌ಐಆರ್ ದಾಖಲಿಸಲು ಕೋರ್ಟ್ ನೀಡಿದ ಸೂಚನೆಯು ಕಾಂಗ್ರೆಸ್‌ಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಕಾಂಗ್ರೆಸ್ ಪ್ರಸ್ತಾಪ ಮಾಡಿತು. ಅಲ್ಲದೇ ಬೈರತಿ ಬಸವರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಭಾರೀ ಪ್ರತಿಭಟನೆ ಮಾಡಿತ್ತು.
ಸಚಿವ ಬೈರತಿ ಬಸವರಾಜ ಭೂ ಹಗರಣ ಆರೋಪದ ಕುರಿತಾಗಿ ಸದನದಲ್ಲಿ ನಿಯಮ 60 ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆಯನ್ನು ಸ್ಪೀಕರ್ ಕಾಗೇರಿ ತಿರಸ್ಕಾರ ಮಾಡಿದ ವಿಚಾರ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಿ, ನಿಯಮ 60 ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದರು. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಿಯಮ 60 ವ್ಯಾಪ್ತಿಯಲ್ಲಿ ಬಾರದ ಕಾರಣ ತಿರಸ್ಕಾರ ಮಾಡುತ್ತೇನೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆತ್ಮಹತ್ಯೆಗೆ ಶರಣಾಗಿದ್ದ ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ನಿಯಮ 60 ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಬೈರತಿ ಬಸವರಾಜ ಪ್ರಕರಣದ ಬಗ್ಗೆಯೂ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ನ್ಯಾಯಾಲಯದಲ್ಲಿ ಇರುವ ಪ್ರಕರಣದ ಚರ್ಚೆ ಸದನದಲ್ಲಿ ಮಾಡಲು ಅವಕಾಶವಿಲ್ಲ. ಆಕಸ್ಮಿಕವಾಗಿ ಒಂದು ಕಾಲದಲ್ಲಿ ಆಗಿದ್ದರೆ ಅದು ಆ ಸನ್ನಿವೇಶದಲ್ಲಿ ನಡೆದದ್ದು, ಆದರೆ ನಿಯಮಾವಳಿ ಪ್ರಕಾರ ಸಾಧ್ಯವಿಲ್ಲ. ಈ ಬಗ್ಗೆ ಸ್ಪೀಕರ್ ನೀಡಿರುವ ರೂಲಿಂಗ್ ಸರಿಯಾಗಿದೆ ಎಂದರು.