ಪ್ರಧಾನಿ ಮೋದಿ ಮಾ.25ರ ಸಮಾವೇಶಕ್ಕೆ ಆಗಮಿಸಲಿರುವ ಹಿನ್ನೆಲೆ; 30 ಜೆಸಿಬಿ ಬಳಸಿ ಭರದ ಸಿದ್ಧತೆ!

ರಾಜ್ಯದ ನಾಲ್ಕು ಭಾಗಗಳಿಂದ ಕೈಗೊಂಡಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾ.24ಕ್ಕೆ ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿದ್ದು, ಈ ಹಿನ್ನೆಲೆಯಲ್ಲಿ ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶಕ್ಕೆ ಭರದ ಸಿದ್ಧತೆ ಶುರುವಾಗಿವೆ.

Prime Minister Narendra Modis arrival at the conference on March 25 preparations are underway rav

ದಾವಣಗೆರೆ (ಮಾ.12)  ರಾಜ್ಯದ ನಾಲ್ಕು ಭಾಗಗಳಿಂದ ಕೈಗೊಂಡಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾ.24ಕ್ಕೆ ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿದ್ದು, ಈ ಹಿನ್ನೆಲೆಯಲ್ಲಿ ಮಾ.25ರಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶಕ್ಕೆ ಭರದ ಸಿದ್ಧತೆ ಶುರುವಾಗಿವೆ.

ನಗರದ ಹೊರ ವಲಯದ ಜಿಎಂಐಟಿ ಕಾಲೇಜು ಬಳಿ ಸುಮಾರು 400 ಎಕರೆ ಪ್ರದೇಶದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಏಕಕಾಲಕ್ಕೆ 30 ಜೆಸಿಬಿಗಳ ಸಹಾಯದಿಂದ ಸಮಾವೇಶ ಸ್ಥಳದಲ್ಲಿ ಬೆಳೆದಿದ್ದ ಮುಳ್ಳು ಜಾಲಿ, ಕಲ್ಲು, ಮುಳ್ಳುಗಳ ತೆರವು ಕಾರ್ಯ ಶನಿವಾರ ದಿನವಿಡೀ ನಡೆಯಿತು. ಜಿಎಂಐಟಿ ಬಳಿ ಬೆಳಿಗ್ಗೆ 8 ಗಂಟೆಯಿಂದಲೇ ಗುಂಪು ಗುಂಪಾಗಿ ಬಂದ ಜೆಸಿಬಿಗಳು ಸಮಾವೇಶ ಸ್ಥಳದಲ್ಲಿ ಬೆಳೆದಿದ್ದ ಗಿಡ ಗಂಟಿ, ಕಲ್ಲುಗಳನ್ನು ತೆರವು ಮಾಡಿದವು. ಆ ಭಾಗದಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿ, ದಿಬ್ಬಗಳನ್ನು ಸಮತಟ್ಟು ಮಾಡಲಾಯಿತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಮಾವೇಶವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು, ಹಿಂದೆಂದೂ ಸೇರದಷ್ಟುಜನ ಸಾಗರ ಮಧ್ಯ ಕರ್ನಾಟಕದಲ್ಲಿ ಸೇರಿಸುವ ನಿರೀಕ್ಷೆ ಹೊಂದಲಾಗಿದೆ.

ಉರಿ ಬಿಸಿಲಿಗೆ ತತ್ತರಿಸಿದ ಹಲವು ರಾಜ್ಯ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಿ.ಮಂಜಾನಾಯ್ಕ, ಮಾಯಕೊಂಡ ಚುನಾವಣಾ ಪ್ರಭಾರಿ ಎನ್‌.ರಾಜಶೇಖ , ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್‌, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್‌ ಜೈನ್‌, ಸುರೇಶ ಗಂಡಗಾಳೆ, ರಾಜು ನೀಲಗುಂದ, ಗೌಡ, ವಿಶ್ವಾಸ್‌, ಟಿಂಕರ್‌ ಮಂಜಣ್ಣ, ಬಾಲರಾಜ ಶ್ರೇಷ್ಠ, ಶಂಕರಗೌಡ ಬಿರಾದಾರ್‌, ಕಿರೀಟ್‌ ಸಿ.ಕಲಾಲ್‌ ಇತರರಿದ್ದರು.

Latest Videos
Follow Us:
Download App:
  • android
  • ios