ನರಿಗಳು ಊಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟೇ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅನಭಿಷಕ್ತ ದೊರೆ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ಜು.16): ನರಿಗಳು ಊಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟೇ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅನಭಿಷಕ್ತ ದೊರೆ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ವಿಪಕ್ಷಗಳು ಒಟ್ಟಾಗುತ್ತಿರುವ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಅವರು ಜನರ ಹೃದಯ ಸಾಮ್ರಾಟ. ಅಲ್ಲಿ ಇಲ್ಲಿ ನರಿಗಳು ಊಳಿಟ್ಟರೆ ಜನನಾಯಕನಾಗಿರುವ ಸಿಂಹ ಬೆದರುವುದಿಲ್ಲ. ನೂರು ನರಿಗಳು ಸೇರಿ ಊಳಿಟ್ಟರೂ ವನರಾಜ ಸಿಂಹ ನಿರ್ಭೀತಿಯಿಂದ ತನ್ನ ದಾರಿ ಕಡೆ ಮುಂದೆ ಹೋಗುತ್ತಿರುತ್ತದೆ ಎಂದರು.ಪಕ್ಷಗಳಿಗೆ ಭಯ ಇದೆ. ಈ ಕಾರಣಕ್ಕೆ ಒಟ್ಟಾಗುತ್ತಿದ್ದಾರೆ. ಜನರ ಹಿತದೃಷ್ಠಿಯಿಂದಲ್ಲ. ಹಾಗಾಗಿ ಹೆದರಬೇಕಾದ ಅವಶ್ಯಕತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯದಲ್ಲಿ ಜನ ಜಾಗ ಕೊಟ್ಟಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್‌ ಮಾಡಿದ್ರೆ ಹಣ ಖೋತಾ

ಜೆಡಿಎಸ್ ಜೊತೆ ಮೈತ್ರಿ ನಮ್ಮ ಹಂತದಲ್ಲಿ ಚರ್ಚೆ ನಡೆದಿಲ್ಲ : ದೇಶ ಮೊದಲು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು ಬಿಜೆಪಿ ಮತ್ತು ಎನ್ಡಿಎ ಜೊತೆಗೆ ಯಾರು ಬೇಕಾದರೂ ಬರಬಹುದು ಎಂದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ನಿಂತ ನೀರಲ್ಲ. ಅದು ಹರಿಯುವ ನದಿ ಇದ್ದಂತೆ, ಯಾರೂ ಶಾಶ್ವತ ಶತ್ರುಗಳು, ಮಿತ್ರರೂ ಇರುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಗುತ್ತಿರುವ ರಾಷ್ಟ್ರ ಹಿತದ ಮತ್ತು ಜನ ಪರ ಕಾರ್ಯಗಳನ್ನು ಗಮನಿಸಿ ಎನ್‌ಡಿಎ ಜೊತೆಗೆ, ಬಿಜೆಪಿ ಜೊತೆಗೆ ಯಾರು ಬೇಕಾದರೂ ಬರಬಹುದು ಎಂದರು.

ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಚರ್ಚೆ ನಡೆದಿಲ್ಲ: ಜೆಡಿಎಸ್ ಜೊತೆಗೆ ನಮ್ಮ ಹಂತದಲ್ಲಿ ಯಾವುದೇ ರೀತಿ ಚರ್ಚೆ ನಡೆದಿಲ್ಲ. ಇದಕ್ಕಿಂತ ದೊಡ್ಡ ಮಟ್ಟದಲ್ಲಿ ನಡೆದಿದ್ದರೆ ಅದು ನಮಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವುದರಲ್ಲಿ ನಂಬಿಕೆ ಇಟ್ಟವರಲ್ಲ. ಮುಂಚಿನಿಂದಲೂ ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಎನ್ನುವ ತತ್ವದ ಮೇಲೆ ನಂಬಿಕೆ ಇಟ್ಟು ಬಿಜೆಪಿ ರಾಜಕಾರಣ ಮಾಡುತ್ತಿದೆ. ಈ ತತ್ವವನ್ನು ಒಪ್ಪಿ ಯಾರು ಬೇಕಾದರೂ ನಮ್ಮ ಜೊತೆಗೆ ಬರಬಹುದು ಎಂದರು.

ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌

ಕಾಂಗ್ರೆಸಿಗರು ನಿಶ್ಚಿಂತೆಯಿಂದ ಇರಬಹುದಲ್ಲ: ವಿಪಕ್ಷ ನಾಯಕ ಇಲ್ಲವಾದರೆ ಕಾಂಗ್ರೆಸ್‌ಗೆ ಆರಾಮವಾಯಿತಲ್ಲ, ಈಗ ಅವರಿಗೇಕೆ ಭಯ ಎಂದು ಪ್ರಶ್ನಿಸಿದರು. ರಾಜಕಾರಣದಲ್ಲಿ ಸುಮ್ಮ ಸುಮ್ಮನೆ ಇದನ್ನೆಲ್ಲಾ ಬಿಟ್ಟುರುವುದಿಲ್ಲ. ಅದಕ್ಕೆಲ್ಲ ಕಾರಣಗಳಿರುತ್ತವೆ. ಅದನ್ನು ವಿಶ್ಲೇಷಣೆ ಮಾಡಲು ಬಯಸುವುದಿಲ್ಲ. ಆ ಕಾರಣ ಏನೆಂದು ನಾನು ಈಗ ಹೇಳುವುದಿಲ್ಲ ಎಂದರು.ವಿರೋಧ ಪಕ್ಷದ ನಾಯಕ ಇದ್ದರೆ ಅರ್ಕಾವತಿ ಪ್ರಕರಣ ಹೊರಕ್ಕೆ ತೆಗೆಯುತ್ತಿದ್ದರು. ಈಗ ಕಾಂಗ್ರೆಸಿಗರು ನಿಶ್ಚಿಂತೆಯಿಂದ ಇರಬಹುದಲ್ಲ. ಅರ್ಕಾವತಿ ಖದೀಮರು ಯಾರು ಎಂದರೆ ಅವರು ತಡಬಡಾಯಿಸುತ್ತಾರೆ. ಅವರು ಇಂದಿಗೂ ಉತ್ತರ ಕೊಟ್ಟಿಲ್ಲ. ನಾನು ಹಲವು ಬಾರಿ ಕೇಳಿದ್ದೇನೆ. ಇದ್ದವರು ಮೂರು ಜನರಾದರೆ ಕದ್ದವರು ಯಾರು, 8000 ಕೋಟಿ ಲೂಟಿ ಹೊಡೆದವರು ಯಾರು ಎಂದು ಇನ್ನೂ ಉತ್ತರ ಕೊಟ್ಟಿಲ್ಲ. ಇದ್ದವರೂ ಅವರೇ, ಕದ್ದವರೂ ಅವರೇ ಎಂದರು.