ಪದೇಪದೆ ರಾಜ್ಯಕ್ಕೆ ಭೇಟಿ ನೀಡುವ ಮೋದಿದು ಚುನಾವಣೆ ಗಿಮಿಕ್: ಒಂದುಸಲವೂ ಜನರ ಸಮಸ್ಯೆ ಕೇಳಲಿಲ್ಲ

ರಾಜ್ಯಕ್ಕೆ ಹಲವು ರೀತಿ ಸಂಕಷ್ಟಗಳು ಬಂದಾಗ ಮುಖ ಮಾಡದ ಪ್ರಧಾನಿ ಮೋದಿ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಹತ್ತಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ಗಿಮಿಕ್‌ ಅಲ್ಲವೇ ಎಂದು ಕೆಪಿಸಿಸಿ ವಕ್ತಾರ ಪಿ.ಎಚ್‌. ನೀರಲಕೇರಿ ಪ್ರಶ್ನಿಸಿದರು.

Prime Minister Modi is frequently visiting the state election gimik says congress leader at dharwar rav

ಧಾರವಾಡ (ಮಾ.11) : ರಾಜ್ಯಕ್ಕೆ ಹಲವು ರೀತಿ ಸಂಕಷ್ಟಗಳು ಬಂದಾಗ ಮುಖ ಮಾಡದ ಪ್ರಧಾನಿ ಮೋದಿ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಹತ್ತಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ಗಿಮಿಕ್‌ ಅಲ್ಲವೇ ಎಂದು ಕೆಪಿಸಿಸಿ ವಕ್ತಾರ ಪಿ.ಎಚ್‌. ನೀರಲಕೇರಿ(PH Niralkeri) ಪ್ರಶ್ನಿಸಿದರು.

ಮಾ. 12ರಂದು ಧಾರವಾಡ ಐಐಟಿ(Dharwad IIT) ಉದ್ಘಾಟನೆಗಾಗಿ ಪ್ರಧಾನಿ ಮೋದಿ(PM Narendra Modi) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ, ಪಕ್ಷದ ಕಾರ‍್ಯಕ್ರಮಗಳನ್ನು ಸರ್ಕಾರಿ ಕಾರ‍್ಯಕ್ರಮಗಳಾಗಿ ಪರಿವರ್ತಿಸುವ ಮೂಲಕ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕಾರ‍್ಯಕರ್ತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ ಎರಡು ಭಾರಿ ಭೇಟಿ ನೀಡಿರುವ ಮೋದಿ ಅವರ ಉದ್ದೇಶ ಏನು ಎಂಬುದನ್ನು ಜನರು ಅರಿಯಬೇಕಿದೆ. ರಾಜ್ಯದ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಅವರೆಂದೂ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ಮೋದಿ ಹಕ್ಕುಪತ್ರ ನೀಡಿರೋದು ಚುನಾವಣೆ ಗಿಮಿಕ್‌: ಬೆಳಮಗಿ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕರ್ತರಿಗೆ ಊಟ, ವಸತಿಗೆ ಖರ್ಚು ಮಾಡಲು ಸಾಕಷ್ಟುಪ್ರಮಾಣದಲ್ಲಿ ಹಣ ವ್ಯಯಿಸಲಾಗುತ್ತಿದೆ. ಇಲ್ಲಿ ಬೈಪಾಸ್‌ ರಸ್ತೆಯಲ್ಲಿ ನಿತ್ಯ ಜನರು ಸಾಯುತ್ತಿದ್ದಾರೆ. ಕುಡಿಯುವ ನೀರನ ಸಮಸ್ಯೆ ತಲೆದೋರಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಯುವಕರು ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದಾರೆ. ಈ ಯಾವವು ಮೋದಿ ಅವರಿಗೆ ಸಮಸ್ಯೆಗಳೇ ಅಲ್ಲ ಎನಿಸುತ್ತಿದೆ. ಆಡಳಿತದಲ್ಲಿ ಸಾಕಷ್ಟುಭ್ರಷ್ಟಾಚಾರ ನಡೆಯುತ್ತಿದ್ದು ಮೋದಿಗೆ ಅದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಗಮ ಮಂಡಳಿಗಳಲ್ಲಿ ಸಾಕಷ್ಟುಭ್ರಷ್ಟಾಚಾರ ನಡೆದಿದ್ದು ಕೂಡಲೇ ಅವುಗಳ ಮೇಲೂ ಲೋಕಾಯುಕ್ತರು ದಾಳಿ ನಡೆಸೇಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ, ಕಾಂಗ್ರೆಸ್‌ ಮುಖಂಡ ಸಿದ್ದಣ್ಣ ಕಂಬಾರ(Siddanna kambar), ಕಾಂಗ್ರೆಸ್‌ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಕೊಂಗವಾಡ ಇದ್ದರು.

ರಾಜ್ಯದಲ್ಲಿರುವುದು ಬಿ-ರಿಪೋರ್ಟ್‌ ಸರ್ಕಾರ: ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ಬ್ಯಾನರ್‌ ಶಾಸಕರು, ಪ್ಲೆಕ್ಸ್‌ ಸಂಸದರು..

ಶಾಸಕ ಅರವಿಂದ ಬೆಲ್ಲದ ಬ್ಯಾನರ್‌ ಶಾಸಕರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಫ್ಲೆಕ್ಸ್‌ ಸಂಸದರು. ಸಣ್ಣ ರಸ್ತೆಯಿಂದ ಹಿಡಿದು ದೊಡ್ಡ ಕಾರ‍್ಯಕ್ರಮಗಳೇ ಇರಲಿ. ಈ ಇಬ್ಬರೂ ಮಹಾನ್‌ ನಾಯಕರು ಇಡೀ ಊರಿನ ತುಂಬೆಲ್ಲಾ ಕೈ ಕೈಟ್ಟಿದ ಭಾವಚಿತ್ರಗಳುಳ್ಳ ಬ್ಯಾನರ್‌, ಫ್ಲೆಕ್ಸ್‌$ಹಾಕುವ ಕೆಟ್ಟಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯ ಜನತೆಗೆ ಏನೂ ಮಾಡದೇ ಇದ್ದರೂ ಬ್ಯಾನರ್‌ ಮಾತ್ರ ಸುಸಜ್ಜಿತವಾಗಿ ಹಾಕುವ ಮೂಲಕ ಜನರನ್ನು ಮರಳು ಮಾಡುವ ತಂತ್ರ ಉಭಯ ನಾಯಕರು ಹೊಂದಿರುವುದು ಜಿಲ್ಲೆಯ ಜನತೆಯ ದುರಂತ.

ಪಿ.ಎಚ್‌. ನೀರಲಕೇರಿ, ಕಾಂಗ್ರೆಸ್‌ ಮುಖಂಡರು

Latest Videos
Follow Us:
Download App:
  • android
  • ios